ಖಾಸಗಿ ಅಂಗ ಕಾಣುವ ಬಟ್ಟೆ ಧರಿಸಿ ಟ್ರೋಲ್: ನನ್ನದು ಬ್ರಾಹ್ಮಣ ಕುಟುಂಬ, ಸಂಸ್ಕೃತಿ ಗೊತ್ತಿದೆ ಎಂದ ಖ್ಯಾತ ನಟಿ
ಖ್ಯಾತ ನಟಿ ಖುಷಿ ಮುಖರ್ಜಿ (Khushi Mukherjee) ಇತ್ತೀಚೆಗೆ ತನ್ನ ಫ್ಯಾಷನ್ ಉಡುಪಿನಿಂದಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದ ನಟಿ ಅಶ್ಲೀಲ ಉಡುಪುಗಳನ್ನು ಧರಿಸಿ ಕ್ಯಾಮೆರಾಗಳಿಗೆ ಪೋಸ್ ಕೊಟ್ಟಿದ್ದಾರೆ ಎಂದು ಅವರನ್ನು ಟೀಕಿಸಲಾಗುತ್ತಿದೆ. ಮುಂಬೈನಲ್ಲಿ ಪಾಪರಾಜಿಗಳ ಎದುರು ಖುಷಿ ಮುಖರ್ಜಿ ಕಾಣಿಸಿಕೊಂಡಿದ್ದರು. ಕಪ್ಪು ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದರೂ ಆ ವಸ್ತ್ರವಿನ್ಯಾಸವು ತುಂಬಾ ಅಶ್ಲೀಲಕರವಾಗಿದೆ, ನಟಿ ತನ್ನ ಖಾಸಗಿ ಅಂಗ ಪ್ರದರ್ಶಿಸುವ ಉದ್ದೇಶದಿಂದಲೇ ಇಂತಹ ಬಟ್ಟೆ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂದು ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ಅವರು ವಿಡಿಯೋ ಮೂಲಕವೇ ಖಡಕ್ ತಿರುಗೇಟು ನೀಡಿದ್ದಾರೆ.
ಮುಂಬೈನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಖುಷಿ, ತಮ್ಮ ಬಟ್ಟೆಯನ್ನು ಸರಿಪಡಿಸಿಕೊಳ್ಳಲು ಒದ್ದಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಆದರೂ ಅವರು ಪಾಪರಾಜಿಗಳ ಮುಂದೆ ನಗುತ್ತಲೇ ಅದನ್ನು ಮ್ಯಾನೇಜ್ ಮಾಡಿದ್ದರು. ಈ ಫೋಟೋ ಹಾಗೂ ವಿಡಿಯೋ ಹರಿದಾಡಿ ಹಲವೆಡೆ ಟೀಕೆಗಳಿಗೆ ಗುರಿಯಾಗಿದ್ದಾರೆ. ಬಳಿಕ ಈ ಬಗ್ಗೆ ಮೌನ ಮುರಿದಿದ್ದ ನಟಿ ತನ್ನ ಲುಕ್ ಹಾಲಿವುಡ್ ಸೆಲೆಬ್ರಿಟಿಗಳಾದ ಜೆನ್ನಿಫರ್ ಲೋಪೆಜ್, ಪ್ಯಾರಿಸ್ ಹಿಲ್ಟನ್, ಮಾಡೆಲ್ ಐರಿನಾ ಶೇಕ್ ಮತ್ತು ವಿವಿಧ ರನ್‌ವೇ ಮಾಡೆಲ್‌ಗಳಿಂದ ಪ್ರೇರಿತವಾಗಿದೆ ಎಂದು ಅವರು ಹೇಳಿದ್ದರು. ಆದರೂ ಟೀಕೆ ಮುಂದುವರಿಸಿದ್ದ ಸೋಷಿಯಲ್ ಮೀಡಿಯಾ ಬಳಕೆದಾರರು, ನಿಮ್ಮ ಖಾಸಗಿ ಭಾಗ ಪ್ರದರ್ಶಿಸುವುದೇ ಭಾರತೀಯ ಸಂಸ್ಕೃತಿಯೇ? ಎಂದು ಪ್ರಶ್ನಿಸಿದ್ದರು. ಇದಕ್ಕೆ ನಟಿ ಮುಟ್ಟಿ ನೋಡುಕೊಳ್ಳುವಂತೆ ಉತ್ತರ ಕೊಟ್ಟಿದ್ದಾರೆ.

ವಿಡಿಯೋ ಮೂಲಕ ತಿರುಗೇಟು ನೀಡಿರುವ ನಟಿ ಖುಷಿ ಮುಖರ್ಜಿ ಹನುಮಾನ್ ಚಾಲೀಸಾ ಪಠಿಸುತ್ತಿರುವ ವೀಡಿಯೊ ಹಂಚಿಕೊಂಡಿದ್ದಾರೆ. ಅಲ್ಲದೆ ನಾನು ಹೆಮ್ಮೆಯ ಬಂಗಾಳಿ ಬ್ರಾಹ್ಮಣ ಕುಟುಂಬದವಳು. ನನ್ನ ಸಾಂಸ್ಕೃತಿಕ ಬೇರುಗಳ ಬಗ್ಗೆ ನನಗೆ ತುಂಬಾ ತಿಳಿದಿದೆ. ನಾನು ಎಲ್ಲರ ಮುಂದೆ ಹನುಮಾನ್ ಚಾಲೀಸಾವನ್ನು ಪಠಿಸಲು ಬಯಸುತ್ತೇನೆ ನನ್ನ ಬೆಂಬಲಿಗರಿಗಾಗಿ ಈ ವೀಡಿಯೊವನ್ನು ಹಂಚಿಕೊಂಡಿದ್ದೇನೆ ಎಂದಿದ್ದಾರೆ.
ಹೀಗೆ ಮಾಡುವುದರಿಂದ ನಾನು ಯಾರಿಗೂ ಏನನ್ನೂ ಸಾಬೀತುಪಡಿಸಲು ಬಯಸುತ್ತಿಲ್ಲ. ಜನರು ಇನ್ನೂ ನನ್ನ ಬಗ್ಗೆ ಬಹಳಷ್ಟು ಕೆಟ್ಟ ವಿಷಯಗಳನ್ನು ಹೇಳುತ್ತಾರೆ. ನನ್ನನ್ನು ಟ್ರೋಲ್ ಮಾಡುತ್ತಾರೆ ಎಂದು ನನಗೆ ಗೊತ್ತಿದೆ. ನಾನು ಅಂತಹ ಬಟ್ಟೆಗಳನ್ನು ಧರಿಸುತ್ತೇನೆ ಎಂದ ಮಾತ್ರಕ್ಕೆ ನಾನು ಭಾರತೀಯ ಸಂಸ್ಕೃತಿಯನ್ನು ಮರೆತಿದ್ದೇನೆ ಎಂದರ್ಥವಲ್ಲ. ಇದನ್ನು ಎಲ್ಲರಿಗೂ ತಿಳಿಸಲು ನಾನು ಬಯಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ನಾನು ಬೋಲ್ಡ್ ಬಟ್ಟೆಗಳನ್ನು ಧರಿಸುತ್ತೇನೆ ಎಂದ ಮಾತ್ರಕ್ಕೆ ನನ್ನ ಸಾಂಸ್ಕೃತಿಕ ಹಿನ್ನೆಲೆಯನ್ನು ಮರೆತಿದ್ದೇನೆ ಎಂದಲ್ಲ. ಈ ಹನುಮಾನ್ ಚಾಲೀಸಾವನ್ನು ಪಠಿಸಿದ ನಂತರವೂ ಇನ್‌ಫ್ಲುಯೆನ್ಸರ್‌ಗಳು, ನಟರು ಎಂದು ಕರೆಯಲ್ಪಡುವ ಕೆಲವು ಗುಂಪಿನಿಂದ ನಾನು ಟ್ರೋಲ್‌ಗಳಿಗೆ ಗುರಿಯಾಗುತ್ತೇನೆ ಎನ್ನುವುದು ಚೆನ್ನಾಗಿ ಗೊತ್ತಿದೆ. ಆದರೆ ಈ ವಿಡಿಯೋ ನನ್ನ ಎಲ್ಲ ಬೆಂಬಲಿಗರಿಗಾಗಿ ಎಂದು ಅರ್ಪಿಸಿದ್ದಾರೆ.
ನಟಿಯ ಹಿನ್ನೆಲೆ ಏನು?
ನಟಿ ಖುಷಿ ಮುಖರ್ಜಿ ಅವರು ದಕ್ಷಿಣ ಭಾರತದ ಚಲನಚಿತ್ರಗಳು, ರಿಯಾಲಿಟಿ ಶೋಗಳು ಮತ್ತು ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ. 2013ರಲ್ಲಿ ತಮಿಳು ಚಿತ್ರ ಅಂಜಲ್ ತುರೈ ಮೂಲಕ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರ ಅವರು ದೊಂಗ ಪ್ರೇಮಾ ಮತ್ತು ಹಾರ್ಟ್ ಅಟ್ಯಾಕ್‌ನಂತಹ ತೆಲುಗು ಚಿತ್ರಗಳಲ್ಲಿ, ಹಿಂದಿಯ ಶೃಂಗಾರ್ ಸಿನಿಮಾದಲ್ಲಿ ನಟಿಸಿದ್ದಾರೆ.












Click it and Unblock the Notifications