ಮದುವೆಯಾದ ಮೇಲೆ ಮುಂಚೆಗಿಂತ ಚೆನ್ನಾಗಿದ್ದೇನೆ- ನಟಿ ದೀಪಿಕಾ ದಾಸ್
ಬೆಂಗಳೂರು, ಸೆಪ್ಟೆಂಬರ್ 03: ಮದುವೆಯಾದ ಮೇಲೆ ಜೀವನ ಹೇಗಿದೆ ಎನ್ನುವ ಪ್ರಶ್ನೆಗೆ ನಟಿ ದೀಪಿಕಾ ದಾಸ್ ಉತ್ತರಿಸಿದ್ದು, ಮದುವೆಯಾದ ಮೇಲೆ ಮುಂಚೆಗಿಂತ ಚೆನ್ನಾಗಿದ್ದೇನೆ. ಸ್ವಲ್ಪ ದಿನ ಕಾಣಿಸಿಕೊಂಡಿಲ್ಲ ಎಂದರೆ ಎಂತಹ ಪ್ರಶ್ನೆಗಳನ್ನು ಕೇಳುತ್ತೀರಾ ನೋಡಿ. ದಾಂಪತ್ಯ ಜೀವನದಲ್ಲಿ ಖುಷಿಯಾಗಿದ್ದೇನೆ ಎಂದು ಹೇಳಿದ್ದಾರೆ.
ನ್ಯೂಸ್‌ಫಸ್ಟ್ ಸುದ್ದಿ ವಾಹಿನಿ ಜೊತೆ ಮಾತನಾಡಿದ ಅವರು, ಇಷ್ಟು ವರ್ಷಗಳ ಕಾಲ ಕೆಲಸ, ಒಂದಷ್ಟು ಶೋಗಳು, ಸಿನಿಮಾ, ಸೀರಿಯಲ್‌ಗಳು ಇದರಲ್ಲಿ ಮುಳುಗಿ ಹೋಗಿ ನ್ನನ ಖಾಸಗಿ ಜೀವನಕ್ಕೆ ಸಮಯ ಕೊಡುವುದು ತುಂಬಾ ಕಡಿಮೆಯಾಗಿತ್ತು. ಈಗ ವೈಯಕ್ತಿಕ ಜೀವನದಕ್ಕೆ ಸ್ವಲ್ಪ ಸಮಯ ಸಿಕ್ಕಿತು. ತುಂಬಾ ಚರಿಷ್ ಮಾಡುವಂತಹ ಮೂಮೆಂಟ್‌ಗಳಿದ್ದವು. ನನ್ನ ಜೀವನದಲ್ಲಿ ಈ ರೀತಿ ಇರುತ್ತೇನೆ ಅಂತಾ ನಾನು ಕೂಡ ಅಂದುಕೊಂಡಿರಲಿಲ್ಲ. ವೈಯಕ್ತಿಕ ಜೀವನವನ್ನು ಇಷ್ಟೊಂದು ಎಂಜಾಯ್ ಮಾಡುತ್ತೇನೆ ಅಂತಾ ನನಗೂ ಗೊತ್ತಿರಲಿಲ್ಲ. ಈ ಬಗ್ಗೆ ನನಗೆ ಖುಷಿ ಇದೆ ಎಂದರು.

ದೀಪಿಕಾ ದಾಸ್ ಅವರು ಮದುವೆಯ ನಂತರ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದರು. ಬಹಳ ದಿನಗಳ ಬಳಿಕ ನಟನೆಗೆ ಕಮ್ ಬ್ಯಾಕ್ ಮಾಡಿರುವ ನಟಿ ದೀಪಿಕಾ ದಾಸ್ ಅವರು ಪಾರು ಪಾರ್ವತಿ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ದೀಪಿಕಾ ದಾಸ್, ನೀವೆಲ್ಲಾ ನೋಡಿರುವ ಹಾಗೆ ನನಗೆ ಅಂಡ್ವೆಂಚರ್ಸ್ ಎಂದರೆ ತುಂಬಾ ಇಷ್ಟ. ಟ್ರಾವೆಲ್ ಎಂದರೆ ಇಷ್ಟ. ಬೈಕ್ ರೈಡಿಂಗ್ ಇಷ್ಟ. ಈ ಸಿನಿಮಾದಲ್ಲಿ ಏನೇನು ಮಾಡಿದ್ದೆನ್ನಲ್ಲಾ ಎಲ್ಲಾ ಇಷ್ಟ. ಸಿನಿಮಾದಲ್ಲಿ ಏನು ಮಾಡಿದ್ದೇನೆ ಎಂದು ಸಿನಿಮಾ ನೋಡಿ ಎಂದು ಹೇಳಿದರು.

ಈ ಪಾತ್ರ ತುಂಬಾ ಸ್ವಾಭಿಮಾನ ಇರುವ ಪಾತ್ರವಾಗಿದೆ. ಈ ಪಾತ್ರಕ್ಕೂ ನನಗೂ ಇಬ್ಬರಿಗೂ ಆ್ಯಟಿಡ್ಯೂಡ್ ಇದೆ. ಈ ಪಾತ್ರ ತುಂಬಾ ಬೋಲ್ಡ್ ಆಗಿದೆ. ಜೀವನದಲ್ಲಿ ಕೆಲವು ನಿಯಮಗಳನ್ನು ಹೊಂದಿರುವ ಪಾತ್ರವಿದು. ಈ ಸಿನಿಮಾ ನಮ್ಮ ಜೀವನದ ಮೇಲೂ ಪರಿಣಾಮ ಬೀರುತ್ತದೆ. ನಾವು ಎಲ್ಲಿಯೋ ಬಿಟ್ಟ ವಿಚಾರಗಳನ್ನು ಮತ್ತೆ ರೂಢಿಸಿಕೊಳ್ಳಬೇಕು ಎನಿಸುತ್ತದೆ. ಹೀಗಾಗಿ ಈ ಪಾತ್ರ ನನಗೆ ತುಂಬಾ ಇಷ್ಟ. ಈ ಸಿನಿಮಾ ಹೆಸರು ಹೇಳಿಕೊಂಡು ಟ್ರಾವೆಲ್ ಮಾಡುವಂತಾಯಿತು. ಟ್ರಾವೆಲ್ ಜೊತೆಗೆ ಶೂಟಿಂಗ್ ಅಂದರೆ ಪ್ಯಾಷನ್ ಜೊತೆ ಪ್ರೋಫೇಷನ್ ಮಿಕ್ಸ್ ಆದಾಗ ಸಖತ್ ಮಜಾ ಕೊಡುತ್ತದೆ ಎಂದು ಹೇಳಿದರು.












Click it and Unblock the Notifications