ನಟಿಯರ ಅಂದ ಸೀರೆಯಲ್ಲಿರುತ್ತೆ, ಎಲ್ಲ ಕಾಣುವ ಬಟ್ಟೆಗಳಲ್ಲಿ ಅಲ್ಲ: ವಿವಾದಕ್ಕೆ ಗುರಿಯಾದ ನಟ ಶಿವಾಜಿ ಹೇಳಿಕೆ

ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಶಿವಾಜಿ (sivaji) ಅವರು ನಟಿಯರ ಉಡುಪುಗಳ ಬಗ್ಗೆ ಆಡಿರುವ ಮಾತುಗಳು ವಿವಾದಕ್ಕೆ ಗುರಿಯಾಗಿದೆ. ಹೈದರಾಬಾದ್‌ನಲ್ಲಿ ನಡೆದ ಧಂಡೋರಾ ಸಿನಿಮಾ ಕಾರ್ಯಕ್ರಮದ ತುಂಬಿದ ವೇದಿಕೆಯಲ್ಲಿ ನಟಿಯರನ್ನು ಉದ್ದೇಶಿಸಿ ಮಾತನಾಡಿರುವ ನಟ, 'ನಿಮ್ಮ ಅಂದ ಸೀರೆಯಲ್ಲಿ ಹಾಗೂ ಮೈ ತುಂಬಾ ಧರಿಸುವ ಬಟ್ಟೆಯಲ್ಲಿ ಇರುತ್ತದೆಯೇ ಹೊರತು, ಎಲ್ಲ ಕಾಣುವ ಬಟ್ಟೆಗಳಲ್ಲಿ ಏನೂ ಇರುವುದಿಲ್ಲ' ಎಂದಿದ್ದಾರೆ. ಈ ವೇಳೆ ಕೆಲ ಅಶ್ಲೀಲ ಪದಗಳನ್ನು ಸಹ ಅವರು ಬಳಸಿರುವುದಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ವೈರಲ್‌ ಆಗಿದೆ. 'ಹೀರೋಯಿನ್‌ಗಳು ಯಾವುದಂದ್ರೆ ಆ ಬಟ್ಟೆ ಧರಿಸಿದರೆ ದರಿದ್ರವನ್ನು ಅನುಭವಿಸಬೇಕಾಗುತ್ತದೆ. ನಟಿಯರು ನನ್ನ ಮಾತಿಗೆ ಬಗ್ಗೆ ಏನೂ ಅಂದುಕೊಳ್ಳಬೇಡಿ, ನೀವು ಏನಾದ್ರು ಅಂದುಕೊಂಡರೂ ನನಗೆ ಸಮಸ್ಯೆ ಇಲ್ಲ. ನಿಮ್ಮ ಅಂದ ಸೀರೆಯಲ್ಲಿ, ಮೈತುಂಬಾ ಧರಿಸುವ ಬಟ್ಟೆಯಲ್ಲಿ ಇರುತ್ತದೆಯೇ ಹೊರತು, ಖಾಸಗಿ ಭಾಗಗಳು ಕಾಣುವ ಬಟ್ಟೆಗಳಲ್ಲಿ ಇಲ್ಲ' ಎಂದಿದ್ದಾರೆ.

Actress Beauty Is In Saree Not Revealing Clothes Telugu Actor Sivaji Sparks Controversy

'ಹೆಣ್ಣು ಅಂದ್ರೆ ಪ್ರಕೃತಿ'

'ನೀವು ಅಂತಹ ಬಟ್ಟೆಗಳನ್ನು ಧರಿಸಿದ ಮಾತ್ರಕ್ಕೆ ತುಂಬಾ ಜನ ಅದನ್ನ ನೋಡಿ ನಗಬಹುದು. ಆದರೆ ಮನಸ್ಸಿನಲ್ಲಿ ದರಿದ್ರದವಳೇ...ಇಂತಹ ಬಟ್ಟೆ ಯಾಕೆ ಧರಿಸಿದ್ದೀಯ? ಒಳ್ಳೆಯ ಬಟ್ಟೆಗಳನ್ನು ಧರಿಸಿದ್ರೆ ಚೆನ್ನಾಗಿ ಕಾಣ್ತೀಯಲ್ಲ ಅಂತ ಅನಿಸುತ್ತೆ. ಆದ್ರೆ ಆ ಮಾತನ್ನು ಹೇಳೋಕೆ ಆಗಲ್ಲ. ಯಾಕಂದ್ರೆ ಆ ಮಾತು ಹೇಳಿದಾಗ ಸ್ತ್ರೀಯರಿಗೆ ಸ್ವಾತಂತ್ರ್ಯ ಇಲ್ವಾ? ಅಂತೆಲ್ಲ ಬರುತ್ತೆ. ಹೆಣ್ಣು ಅಂದ್ರೆ ಪ್ರಕೃತಿ, ಹೀಗಾಗಿ ಎಷ್ಟು ಅಂದವಾಗಿದ್ದರೆ ಅಷ್ಟು ಗೌರವ ಹೆಚ್ಚಾಗುತ್ತೆ. ಈ ಪ್ರಕೃತಿ ಇನ್ನೂ ಅಂದವಾಗಿರುತ್ತೆ' ಎಂದು ಹೇಳಿದ್ದಾರೆ.

'ಗ್ಲ್ಯಾಮರ್‌ ಎದೆ ಭಾಗಕ್ಕೆ ಬರಬಾರದು'

'ಗ್ಲ್ಯಾಮರ್‌ ಅನ್ನುವುದು ಒಂದು ಮಿತಿಯೊಳಗೆ ಮಾತ್ರ ಇರಬೇಕು. ಅದು ಭುಜದವರೆಗೆ ಇದ್ದರೆ ಸಾಕು, ಎದೆಯ ಭಾಗದವರೆಗೆ ಬರಬಾರದು. ಸ್ವಾತಂತ್ರ್ಯ ಅನ್ನೋದು ಅದೃಷ್ಟ, ಅದನ್ನು ಕಳೆದುಕೊಳ್ಳಬೇಡಿ. ಜಾಗತಿಕ ವೇದಿಕೆಗಳಲ್ಲಿಯೂ ಸೀರೆ ಧರಿಸಿದವರಿಗೆ ವಿಶ್ವಸುಂದರಿ ಕಿರೀಟಗಳು ಮುಡಿಗೇರಿವೆ' ಎಂದೂ ನಟ ಶಿವಾಜಿ ಉಲ್ಲೇಖಿಸಿದ್ದು, ಈ ವಿಡಿಯೋ ಹರಿದಾಡುತ್ತಿದೆ.

Actress Beauty Is In Saree Not Revealing Clothes Telugu Actor Sivaji Sparks Controversy

ಗಾಯಕಿ ಚಿನ್ಮಯಿ ಖಂಡನೆ

'ಶಿವಾಜಿ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ' ಎಂದು ಗಾಯಕಿ ಚಿನ್ಮಯಿ ಶ್ರೀಪಾದ ಅವರು ಖಂಡಿಸಿದ್ದಾರೆ. ಅಲ್ಲದೆ ಅನಗತ್ಯ ಸಲಹೆ ನೀಡಿದ್ದಕ್ಕಾಗಿ ಟೀಕಿಸಿದ್ದಾರೆ. ನಟ ಶಿವಾಜಿ ಅವರು ನಟಿಯರಿಗೆ ಅನಗತ್ಯ ಸಲಹೆ ನೀಡುತ್ತಾ, 'ದರಿದ್ರ ಮು*ಡ' ಎಂಬಂತಹ ಅವಾಚ್ಯ ಶಬ್ದಗಳನ್ನು ಬಳಸಿ, ಖಾಸಗಿ ಭಾಗ ಮರೆಮಾಡಲು ಸೀರೆಯನ್ನು ಧರಿಸಬೇಕು ಎಂದು ಹೇಳುತ್ತಾರೆ. ಇವು ವೃತ್ತಿಪರ ಸ್ಥಳಗಳಾಗಿದ್ದು, ಇಲ್ಲಿ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದು ನಂಬಲು ಸಾಧ್ಯವಾಗುತ್ತಿಲ್ಲ' ಎಂದು ಬೇಸರ ಹೊರಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+