Anusha Rai: ಕೊನೆಗೂ ಮದುವೆಯಾಗುವ ಹುಡುಗನ ಬಗ್ಗೆ ಬಾಯ್ಬಿಟ್ಟ ಬಿಗ್‌ ಬಾಸ್‌ ಅನುಷಾ ರೈ

ಬಿಗ್ ಬಾಸ್ ಕನ್ನಡ ಸೀಸನ್ 11ರ ಬಹಳ ಚಂದದ ಸ್ಪರ್ಧಿಯಾಗಿದ್ದ ನಟಿ ಅನುಷಾ ರೈ 50 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದರು. ಈಗಾಗಲೇ ಅನುಷಾ ರೈ ಬಿಗ್ ಬಾಸ್ ಮನೆಯಿಂದ ಹೊರ ಬಂದು ಮೂರು ವಾರಗಳು ಕಳೆಯುತ್ತಿದ್ದು, ಅವರ ಹವಾ ಮಾತ್ರ ಕಮ್ಮಿ ಆಗಿಲ್ಲ. ದೊಡ್ಮನೆಯಿಂದ ಹೊರ ಬಂದ ಬಳಿಕ ನಟಿ ಅನುಷಾ ರೈ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದು, ಈ ವೇಳೆ ತಾವು ಮದುವೆಯಾಗುವ ಹುಡುಗನ ಗುಣಗಳ ಬಗ್ಗೆ ಹೇಳಿದ್ದಾರೆ.

ನನ್ನ ಮದುವೆಯಾಗುವ ಹುಡುಗ ಹೇಗೆ ಇರಬೇಕು ಅಂದರೆ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು. ನಮ್ಮ ಮಧ್ಯ ಹೊಂದಾಣಿಕೆ ಇರಬೇಕು. ನನಗೆ ನಾನು ಹೋಗುವ ಮನೆ ತುಂಬಾ ಶ್ರೀಮಂತರಾಗಿರಬೇಕು. ಎಲ್ಲವೂ ಅನುಕೂಲ ಇದ್ದು ಸೆಟೆಲ್‌ ಆಗಿರಬೇಕು ಎನ್ನುವುದೆಲ್ಲಾ ಇಲ್ಲ. ಆದರೆ ನನ್ನನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿರಬೇಕು.

Actress Anusha Rai Outlines Ideal Qualities For Her Future Husband

ನನಗೆ ಎಲ್ಲಾದಕ್ಕೂ ಬೆಂಬಲವಾಗಿ ನಿಲ್ಲಬೇಕು. ನಾನು ಮಾಡುವ ಕೆಲಸಗಳಿಗೆ ನನ್ನ ಬೆನ್ನ ಹಿಂದೆ ನಿಂತು ನಿನ್ನ ಕೈಯಲ್ಲಿ ಆಗುತ್ತದೆ. ನೀನು ಮಾಡು ಎಂದು ಬೆಂಬಲ ಕೊಡಬೇಕು. ಜೊತೆಗೆ ನನ್ನ ಕುಟುಂಬವನ್ನು ತುಂಬಾ ಗೌರವದಿಂದ ನೋಡಬೇಕು. ನನ್ನನ್ನು ಕೂಡ ತುಂಬಾ ಗೌರವದಿಂದ ನೋಡಿಕೊಳ್ಳಬೇಕು. ಆ ರೀತಿ ಇರುವ ವ್ಯಕ್ತಿ ನನ್ನ ಜೀವನಕ್ಕೆ ಸಿಗಬೇಕು ಎಂದು ಅನುಷಾ ಹೇಳಿದರು.

ಬರೀ ದುಡ್ಡೇ ಜೀವನ ಅಲ್ಲ. ನಮ್ಮ ವ್ಯಕ್ತಿತ್ವಗಳ ನಡುವೆ ಒಂದು ಹೊಂದಾಣಿಕೆ ಇರುಬೇಕು. ನನ್ನ ಬಗ್ಗೆ ತಪ್ಪು ತಿಳಿಯದೇ ನನ್ನ ಕುಟುಂಬಕ್ಕೆ ಗೌರವ ಕೊಡುವ ವ್ಯಕ್ತಿ ನನ್ನ ಜೀವನಕ್ಕೆ ಬೇಕು. ಅವರು ಯಾರೇ ಆಗಿರಲಿ. ಇನ್ನು ಕೆಲವು ಸಂದರ್ಬದಲ್ಲಿ ನನ್ನನ್ನು ಕಾಪಾಡಿಕೊಳ್ಳಬೇಕು ಕೂಡ. ಆ ರೀತಿಯ ತಾಕತ್ತು ಕೂಡ ಇರಬೇಕು. ತುಂಬಾ ಸುಲಭವಾಗಿ ಬಿಟ್ಟುಕೊಡಬಾರದು.

ಅವರ ಹೆಂಡತಿಯನ್ನು ಕಾಪಾಡಿಕೊಳ್ಳುವ ಎಲ್ಲಾ ರೀತಿ ತಾಕತ್ತು ಆ ವ್ಯಕ್ತಿಗೆ ಇರಬೇಕು. ಯಾರು ಏನೇ ಅಂದರೂ ಅಲ್ಲಿ ನಂಬಂದೇ ನನ್ನ ಹತ್ತಿರ ಬಂದು ಸ್ಪಷ್ಟತೆ ತೆಗೆದುಕೊಳ್ಳಬೇಕು. ಒಟ್ಟಾರೆಯಾಗಿ ನನ್ನ ಜೊತೆ ಒಳ್ಳೆಯ ಹೊಂದಾಣಿಕೆ ಇರಬೇಕು ಎಂದು ನಟಿ ಅನುಷಾ ರೈ ಗ್ಯಾರಂಟಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ತಾವು ಮದುವೆಯಾಗುವ ಹುಡುಗನ ಗುಣ ಹೇಗಿರಬೇಕು ಎಂದು ವಿವರಿಸಿದ್ದಾರೆ.

Actress Anusha Rai Outlines Ideal Qualities For Her Future Husband

ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರಲ್ಲಿ ಅನುಷಾ ರೈ ನಟ ಧರ್ಮ ಕೀರ್ತಿರಾಜ್‌ ಜೊತೆ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇವರಿಬ್ಬರ ಚಪಾತಿ ಸೀನ್ ಕೂಡ ಸಖತ್‌ ವೈರಲ್ ಆಗಿತ್ತು. ಈ ಹಿಂದೆ ಕೂಡ ಇಬ್ಬರು ಜೊತೆಯಾಗಿ ಸಿನಿಮಾ ಮಾಡಿದ ಕಾರಣ ಇಬ್ಬರು ಕ್ಯೂಟ್‌ ಜೋಡಿ ಎಂದು ಎಲ್ಲರೂ ಕರೆಯುತ್ತಿದ್ದರು. ಇದೀಗ ಅನುಷಾ ತಾವು ಮದುವೆಯಾಗುವ ಹುಡುಗನ ಗುಣ ಹೇಗಿರಬೇಕು ಹೇಳಿದ ಕಾರಣ, ಈ ಎಲ್ಲಾ ಗುಣಗಳು ಧರ್ಮ ಅವರಲ್ಲಿದೆ ಎಂದು ಎಲ್ಲರೂ ಅನುಷಾ ರೈ ಕಾಲೆಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+