ಮಗಳ ಜೊತೆ ಮೈಸೂರು ಸುತ್ತಿದ ಅದಿತಿ ಪ್ರಭುದೇವ
ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಪತಿ ಯಶಸ್ ಪಟ್ಲ ಹಾಗೂ ಮಗಳೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರು ಸುತ್ತಾಡಿದ್ದಾರೆ. ಶೂಟಿಂಗ್ ಇತರ ಕೆಲಸಗಳ ನಡುವೆ ಕೊಂಚ ಬಿಡುವು ಮಾಡಿಕೊಂಡ ಅದಿತಿ ಮಗಳೊಂದಿಗೆ ಮೈಸೂರು ಸುತ್ತಾಡಿದ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಹೌದು ಅದಿತಿ ಅವರಿಗೆ ಮಗುವಾದ ಮೇಲೆ ಹೊರ ಹೋಗಲು ಸಾಧ್ಯವಾಗುತ್ತಿಲ್ಲ. ಮದುವೆಗೂ ಮುಂಚೆ ಸ್ವಿಡ್ಜರ್ಲೆಂಡ್ ಪ್ರವಾಸಕ್ಕೆ ಹೋಗಿದ್ದು ಬಿಟ್ಟರೆ ಮಗುವಾದ ನಂತರ ದೂರದ ಪ್ರವಾಸಕ್ಕೆ ಹೋಗುವುದು ಕಷ್ಟವಾಗಿದೆ. ಅದಿತಿ ಮಗು ಇನ್ನೂ ಪುಟ್ಟದಾಗಿರುವುದರಿಂದ ದೂರದೂರಿಗೆ ಹೋಗಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಮೈಸೂರಿಗೆ ತೆರಳಿ ಕೊಂಚ ಸಮಯ ಒಟ್ಟಿಗೆ ಕಳೆದಿದ್ದಾರೆ.

ಅದಿತಿ 2022ರಲ್ಲಿ ಉದ್ಯಮಿ ಯಶಸ್ ಪಟ್ಲ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಈ ಜೋಡಿಗೆ ಮುದ್ದಾದ ಹೆಣ್ಣು ಮಗು ಜನಿಸಿದೆ. ಅದಿತಿ ಮಗಳು ನೇಸರಗಿನ್ನೂ ಒಂದು ವರ್ಷ ಪೂರ್ಣಗೊಂಡಿದೆ ಅಷ್ಟೇ. ಇದೇ ತಿಂಗಳು ಏಪ್ರಿಲ್ 4ರಂದು ನಟಿ ಅದಿತಿ ಪ್ರಭುದೇವ ಅವರು ಮಗಳು ನೇಸರಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು. ಈ ಸಂತೋಷದ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇದಕ್ಕೂ ಮುನ್ನ ಅದಿತಿ ಪ್ರಭುದೇವ ಕುಟುಂಬಸ್ಥರು ಒಂದು ದಿನ ನಿಸರ್ಗದ ಮಡಿಲಲ್ಲಿ ಕಾಲ ಕಳೆದಿದ್ದರು. ಬೆಟ್ಟದ ತುದಿಯಲ್ಲಿ ಮಗಳೊಂದಿಗೆ ಸೂರ್ಯಸ್ತವನ್ನು ಕಣ್ತುಂಬಿಕೊಂಡು ಬಿಸಿ ಬಿಸಿ ಕಾಫಿ ಕುಡಿದು ಕೆಲ ಹೊತ್ತು ರಿಲ್ಯಾಕ್ಸ್ ಮಾಡಿದ್ದರು. ಇದೀಗ ಅದಿತಿ ಮೈಸೂರಿಗೆ ತೆರಳಿ ಮಗಳೊಂದಿಗೆ ಕಾಲ ಕಳೆದಿದ್ದಾರೆ.
ಹೌದು ಈ ವಾರ ಅದಿತಿ, ಪತಿ ಯಶಸ್ ಹಾಗೂ ಪುಟಾಣಿ ನೇಸರ ಮೈಸೂರು ಪ್ರವಾಸ ಕೈಗೊಂಡಿದ್ದರು. ಈ ಹಿಂದೆ ಹಲವಾರು ಬಾರಿ ಅದಿತಿ ಮೈಸೂರಿಗೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ವಾಪಸ್ ಆಗಿದ್ದರು. ಅದಿತಿ ಪತಿ ಯಶಸ್ ಕೂಡ ಮೈಸೂರಿನಲ್ಲಿ ಓದಿದ್ದಾರೆ. ಆದರೆ ಯಾವುದೇ ಸ್ಥಳಗಳನ್ನು ನೋಡಿಲ್ಲ. ಹೀಗಾಗಿ ಇಬ್ಬರು ಕೂಡ ಬಿಡುವು ಮಾಡಿಕೊಂಡು ಮಗಳೊಂದಿಗೆ ಮೈಸೂರು ಸೌಂದರ್ಯವನ್ನು ಸವಿದಿದ್ದಾರೆ. ಮೈಸೂರಿನ ಕೆಲ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.
ಅಂದಹಾಗೆ ಯಶಸ್ ಹಾಗೂ ಅದಿತಿ ಮೈಸೂರಿನ ಪ್ರವಾಸ ಶುರುವಾಗಿದ್ದು ಮೈಸೂರು ರೈಲ್ ಮ್ಯೂಸಿಯಂ ಭೇಟಿಯೊಂದಿಗೆ. ರೈಲಿನಲ್ಲಿ ಪ್ರಯಾಣ ಮಾಡುವುದು ಅದಿತಿಗೆ ತುಂಬಾ ಇಷ್ಟವಂತೆ. ಇಲ್ಲಿ ಅವರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. ಬಾಲ್ಯದ ದಿನಗಳಲ್ಲಿ ರೈಲಿನಲ್ಲಿ ಅಜ್ಜಿ ಮನೆಗೆ ಹೋಗುವಾಗ ಕಿಟಕಿ ಬಳಿ ಕೂಡಲು ಅದಿತಿ ಇಷ್ಟಪಡುತ್ತಿದ್ದರಂತೆ. ಹೀಗಾಗಿ ನೇಸರಳನ್ನೂ ರೈಲಿನಲ್ಲಿ ಕೂಡಿಸಿಕೊಂಡು ಅದಿತಿ ಹಾಗೂ ಯಶ್ ಒಂದು ರೌಂಡ್ ಹಾಕಿದ್ದಾರೆ.
ಇದಾದ ಬಳಿಕ ಅವರು ಲೋಕರಂಜನ್ ಅಕ್ವಾ ವರ್ಲ್ಡ್‌ಗೆ ವಿಸಿಟ್ ಮಾಡಿದರು. ಇಲ್ಲಿನ ವಿಧವಿಧವಾದ ಮೀನುಗಳನ್ನು ನೋಡಿ ಖುಷಿ ಪಟ್ಟಿದ್ದಾರೆ. ಜೊತೆಗೆ ನೇಸರಳಿಗೂ ಈ ಸ್ಥಳ ತುಂಬ ಇಷ್ಟವಾಗಿದ್ದು ಮಕ್ಕಳಿರುವವರು ಈ ಸ್ಥಳಕ್ಕೆ ಬರಬಹುದು ಎಂದು ಅದಿತಿ ಸಲಹೆ ನೀಡಿದ್ದಾರೆ. ಇದರಲ್ಲಿ ಅಂಡರ್ ವಾಟರ್ ಟನಲ್ ಕೂಡ ಇದ್ದು ಈ ಸ್ಥಳದಲ್ಲಿ ಅದಿತಿ ಮಗಳೊಂದಿಗೆ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.
ಒಟ್ಟಿನಲ್ಲಿ ಅದಿತಿ ಹಾಗೂ ಯಶ್ ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಮಗಳೊಂದಿಗೆ ಮೈಸೂರಿಗೆ ತೆರಳಿ ಕೊಂಚ ಬಿಡುವಿನ ಸಮಯವನ್ನು ಕಳೆದಿದ್ದಾರೆ. ಈ ಕ್ಯೂಟ್ ವಿಡಿಯೋವನ್ನು ಅದಿತಿ ಫ್ಯಾನ್ಸ್ ಲೈಕ್ ಮಾಡಿದ್ದಾರೆ.












Click it and Unblock the Notifications