Yash: ನಟ ಯಶ್ ಅಭಿಮಾನಿಗಳಿಗೆ ಜುಲೈ 3ರಂದು ಕಾದಿದೆ ಬಿಗ್ ಸರ್‌ಪ್ರೈಸ್
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ದೊಡ್ಡ ಸರ್‌ಪ್ರೈಸ್‌ವೊಂದು ಕಾದಿದೆ. ಸದ್ಯ "ಟಾಕ್ಸಿಕ್" ಹಾಗೂ "ರಾಮಾಯಣ" ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿರುವ ಯಶ್ ಅವರು ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಲಿದ್ದಾರೆ. ಯಶ್ ಅವರ ಸಿನಿಮಾ ನೋಡಿ ಹಲವು ವರ್ಷಗಳೇ ಆಯ್ತು ಎಂದು ಅಭಿಮಾನಿಗಳು ಬೇಸರದಲ್ಲಿದ್ದರು. ಆದರೆ ಯಶ್ ಅವರ ಎರಡು ಸಿನಿಮಾಗಳು ರೆಡಿಯಾಗುತ್ತಿವೆ. ಹೀಗಾಗಿ ಜುಲೈ 3ರಂದು ಯಶ್ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಕಾದಿದೆ. ರಾಕಿಂಗ್ ಫ್ಯಾನ್ಸ್‌ಗಾಗಿ ಬಿಗ್ ಅಪ್ಡೇಟ್‌ವೊಂದು ಅಂದು ಹೊರಬೀಳಲಿದೆ.
ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ. ಈಗಾಗಲೇ ಕೆಲ ಪೋಸ್ಟರ್ ಸದ್ದು ಮಾಡುತ್ತಿವೆ. ಇದರಲ್ಲಿ ಯಶ್ ಅವರ ಲುಕ್ ಕೂಡ ತುಸು ರಿವೀಲ್ ಆಗಿದೆ. ಮತ್ತೊಂದೆಡೆ ಐತಿಹಾಸಿಕ ರಾಮಾಯಣ ಸಿನಿಮಾ ಕೂಡ ಸೆಟ್ಟೇರಿದ್ದು, ಅಲ್ಲಿಯೂ ಯಶ್ ಬ್ಯುಸಿಯಾಗಿದ್ದಾರೆ. ಎರಡೂ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ಹೊಸ ಸುದ್ದಿಯೊಂದು ಹೊರಬೀಳಲು ಕ್ಷಣಗಣನೆ ಶುರುವಾಗಿದೆ.
ಅಭಿಮಾನಿಗಳು ರಾಮಾಯಣ ಸಿನಿಮಾದಲ್ಲಿ ಯಶ್ ಅವರ ಲುಕ್ ಹೇಗಿರಲಿದೆ ಹಿಂಟ್ ಕೊಡಿ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಬೇಡಿಕೆ ಇಡುತ್ತಿದ್ದಾರೆ. ಶೀಘ್ರವೇ ಟೀಸರ್ ಅಥವಾ ಪೋಸ್ಟರ್ ಬಿಡುಗಡೆ ಮಾಡಿ ಎನ್ನುತ್ತಿದ್ದಾರೆ. ಹಾಗಾಗಿ ವರದಿಗಳ ಪ್ರಕಾರ ರಾಮಾಯಣ ಸಿನಿಮಾ ನಿರ್ಮಾಪಕರು ಜುಲೈ 3ರಂದು ಅಧಿಕೃತ ಲೋಗೋ ಲಾಂಚ್ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಎರಡು ಭಾಗಗಳಲ್ಲಿ ಸಿನಿಮಾ ರಿಲೀಸ್
"ರಾಮಾಯಣ" ನಿರ್ಮಾಪಕರು ಜುಲೈ 3ರಂದು ತನ್ನ ಮೊದಲ ಲೋಗೋ ರಿಲೀಸ್ ಮಾಡುವ ಮೂಲಕ ಅಧಿಕೃತವಾಗಿ ಈ ಸಿನಿಮಾ ಘೋಷಿಸಲಿದ್ದಾರೆ. ರಾಮನಾಗಿ ರಣಬೀರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ಒಳಗೊಂಡ ಟೀಸರ್ ಈಗಾಗಲೇ ಪೂರ್ಣಗೊಂಡಿದ್ದರೂ, ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾ ರಿಲೀಸ್‌ಗೆ ಇನ್ನೂ 18 ತಿಂಗಳುಗಳ ಸಮಯ ಇರುವುದರಿಂದ ಸದ್ಯಕ್ಕೆ ಟೀಸರ್ ರಿಲೀಸ್ ಮುಂದೂಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಹಾಗಾಗಿ ಈಗ ಕಾರ್ಯಕ್ರಮದ ಮೂಲಕ ಲೋಗೋ ಅನಾವರಣಗೊಳಿಸಲಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್ ಆಗಲಿದೆ. ಮೊದಲ ಭಾಗ 2026ರ ದೀಪಾವಳಿಗೆ ಹಾಗೂ ಎರಡನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗಲಿದೆ. ಚಿತ್ರದ ಕಥೆಯನ್ನು ಎರಡು ಪ್ರತ್ಯೇಕ ಭಾಗಗಳಲ್ಲಿ ಹೇಳಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಜುಲೈ 3ರಂದು ಗುರುವಾರ ಮುಂಬೈನ ಮಧ್ಯಭಾಗದಲ್ಲಿರುವ ಮಲ್ಟಿಪ್ಲೆಕ್ಸ್‌ನಲ್ಲಿ ಈ ಘೋಷಣೆಯ ಪ್ರಚಾರ ಕಾರ್ಯಕ್ರಮ ಅದ್ಧೂರಿಯಾಗಿ ಶುರುವಾಗಲಿದೆ. "ರಾಮಾಯಣ: ದಿ ಇಂಟ್ರೊಡಕ್ಷನ್" ಅನ್ನು ಪ್ರತ್ಯೇಕವಾಗಿ ಅನಾವರಣಗೊಳಿಸಲು ಯೋಜಿಸಿದ್ದಾರೆ. ಮೇ ತಿಂಗಳಲ್ಲಿ ನಡೆದ ವೇವ್ಸ್ ಕಾರ್ಯಕ್ರಮದಲ್ಲಿ ರಾಮಾಯಣದ ಮೊದಲ ಲುಕ್ ಅನಾವರಣಗೊಳಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಮೇ 5ರಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಈ ಸಿನಿಮಾದ ಟೈಟಲ್ ಅನೌನ್ಸ್‌ಮೆಂಟ್ ವೀಡಿಯೊವನ್ನು U ಪ್ರಮಾಣಪತ್ರದೊಂದಿಗೆ ಅಂಗೀಕರಿಸಿದೆ ಎಂದು ವರದಿಯಾಗಿದೆ.












Click it and Unblock the Notifications