'ಇಲ್ಲಿ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ'; UI Trailer ನೋಡಿದವರು ಏನಂದ್ರು?
UI The Movie-Warner: ನಟ ಮತ್ತು ಕ್ರಿಯೇಟಿವ್ ನಿರ್ದೇಶಕ ಉಪೇಂದ್ರ ಅವರ ಬಹುನಿರೀಕ್ಷೆಯ 'ಯುಐ' ಸಿನಿಮಾದ ಅಪ್ಡೇಟ್ ಸಿಕ್ಕಿದೆ. ರಿಲೀಸ್ ದಿನಾಂಕ ಘೋಷಿಸಿದ್ದ ಯುಐ ಚಿತ್ರತಂಡವು ಇದೀಗ ಟ್ರೈಲರ್ ಬಿಡುಗಡೆ ಮಾಡಿದೆ. ಈ ಟ್ರೈಲರ್ ಬಿಡುಗಡೆ ಆದ ಕೆಲವೇ ಕ್ಷಣಗಳಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ನಟ ಉಪೇಂದ್ರ ಅವರು 2040 ರಲ್ಲಿ ಭಾರತ ಸೇರಿದಂತೆ ವಿಶ್ವ ಹೇಗಿರಲಿದೆ? ಎಂಬುದನ್ನು ಕಟ್ಟಿಕೊಟ್ಟಿದ್ದಾರೆ.
ಸದಾ ಹೊಸತನ ಹುಡುಕುವ ನಟ ಉಪೇಂದ್ರ ಅವರು ಈ ಹಿಂದೆ ತಮ್ಮ 'ಸೂಪರ್' ಸಿನಿಮಾದಲ್ಲಿ 2030ರಲ್ಲಿ ದೇಶ ಹೇಗಿರಲಿದೆ ಎಂದು ತಿಳಿಸಿದ್ದರು. ಇದೀಗ ರಾಜಕಾರಣ, ಎಐ ತಂತ್ರಜ್ಞಾನ, ನಿರುದ್ಯೋಗ, ರಾಜಕೀಯ, ಹಣ, ಕೋವಿಡ್ ಸೇರಿದಂತೆ ದೇಶದ ಪ್ರಮುಖ ವಿಷಯಗಳನ್ನು ಅನಾವರಣಗೊಳಿಸಿದ್ದಾರೆ ಎಂಬುದು ಟ್ರೈಲರ್‌ನಿಂದ ಗೊತ್ತಾಗುತ್ತಿದೆ.

ಮುಖ್ಯವಾಗಿ ಇಲ್ಲಿ ಜಾತಿ ಹಾಗೂ ಧರ್ಮವು ಹೇಗೆ ಭವಿಷ್ಯದಲ್ಲಿ ಮುಂದುವರಿಯಲಿದೆ ಎಂಬುದನ್ನು ಹೇಳಲು ಹೊರಟಂತೆ ಕಾಣುತ್ತದೆ. ಮೊಬೈಲ್ ನಲ್ಲೇ ಮುಳುಗಿರುವ ಇಂದಿನ ಸಮಾಜ ಭವಿಷ್ಯದಲ್ಲಿ ಉಚಿತ ಮೊಬೈಲ್ ನೀಡುತ್ತಿರುದ್ದರು ಸಹ ಹಸಿವಿಗಾಗಿ ಅನ್ನಕ್ಕೆ ಪರದಾಡುವ ದೃಶ್ಯಗಳು, ಬಡತನ ಹೀಗೆ ಎಲ್ಲವನ್ನು ತೋರಿಸಲಾಗಿದೆ.
'ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ': ಹೆಚ್ಚಾಯ್ತು ಕ್ರೇಜ್
ಇಲ್ಲಿ 'ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ' ಎಂದು ಮಷಿನ್ ಗನ್ ಹಿಡಿದು ನಟ ಉಪೇಂದ್ರ ಅವರು ಹೇಳುವ ಮಾಸ್ ಡೈಲಾಗ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಟ್ರೈಲರ್ ನೋಡಿದವರು ಉಪೇಂದ್ರ ಅವರಿಗೆ ಬಹುಪರಾಕ್ ಎನ್ನುತ್ತಿದ್ದಾರೆ.
ನಟ ಉಪೇಂದ್ರ ಅವರು ನಿರ್ದೇಶನ ಮಾಡುತ್ತಿದ್ದಾರೆ ಅಂದರೇನೆ ಅಲ್ಲಿ ಕೌತುಕ ಹೆಚ್ಚೆ ಇರುತ್ತದೆ. ಕೇವಲ ಅವರ ಅಭಿಮಾನಿಗಳು ಮಾತ್ರವಲ್ಲದೇ, ಇಡೀ ಚಿತ್ರರಂಗ, ಇತರ ನಟ ನಟಿಯರು ಅವರ ಸಿನಿಮಾ ನೋಡು ಕಾಯುತ್ತಾರೆ. ಆ ಮಟ್ಟಿಗಿನ ಕ್ರೇಜ್ ಅವರ ನಿರ್ದೇಶನದ ಸಿನಿಮಾಗಳ ಮೇಲೆ ಮೊದಲಿನಿಂತಲೂ ಇದೆ.
ದೇಶದಲ್ಲಿನ ಸಾಕಷ್ಟು ಸಮಸ್ಯೆಗಳು, ಹಣದುಬ್ಬರ, ನಿರುದ್ಯೋಗ, ರಾಜಕೀಯ ಹಾಗೂ ಜಾತಿ ಧರ್ಮಗಳ ಮೇಲಾಟವನ್ನು ಕಥೆಯ ಕೇಂದ್ರ ಬಿಂದುವಾಗಿಟ್ಟುಕೊಂಡು ಯುಐ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಸದ್ಯ ಬಿಡುಗಡೆ ಆದ ಯುಐ ಟ್ರೈರಲ್ ಅನ್ನು ಉಪೇಂದ್ರ ಅವರು UI Warner ಎಂದು ಕರೆದಿದ್ದಾರೆ. ಈ ಹಿಂದೆ ದೃಶ್ಯಗಳೇ ಇಲ್ಲ ಬರೀ ಶಬ್ದ ಮತ್ತು ಕಪ್ಪು ಸ್ಕ್ರೀನ್ ಮಾತ್ರವೇ ರಿಲೀಸ್ ಮಾಡಿ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದ ಉಪ್ಪಿ ಅವರು ರಗಡ್ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
5 ಭಾಷೆಗಳಲ್ಲಿ UI ಟ್ರೈಲರ್
ಈ ಸಿನಿಮಾ ಡಿಸೆಂಬರ್ 20ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಲಹರಿ ಫಿಲ್ಮ್ಸ್ ಅವರ ನಿರ್ಮಾಣದಲ್ಲಿ ಸಿನಿಮಾ ಅದ್ಧೂರಿಯಾಗಿ ಸಿದ್ಧವಾಗಿದೆ. ಈ ಟ್ರೈಲರ್ ಲಹರಿ ಫಿಲ್ಮ್ಸ್ ಯೂಟ್ಯೂಬ್ ಚಾನಲ್‌ನಲ್ಲಿ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ 5 ಭಾಷೆಗಳಲ್ಲಿ UI ಟ್ರೈಲರ್ ಬಿಡುಗಡೆ ಮಾಡಿದೆ. ಈ ಸಿನಿಮಾ ಸಹ ಇಂಡಸ್ಟ್ರೀ ಬ್ಲಾಕ್ ಬಸ್ಟರ್ ಹಿಟ್ ಆಗುವ ಎಲ್ಲ ಭರವಸೆಗಳು ಟ್ರೈಲರ್ ನಿಂದ ಸಿಗುತ್ತಿವೆ. ಡಿಸೆಂಬರ್ 20ರ ನಂತರ ಎಲ್ಲವು ಗೊತ್ತಾಗಲಿದೆ.
ಈ ಸಿನಿಮಾದಲ್ಲಿ ನಟ ಉಪೇಂದ್ರ ಅವರೊಂದಿಗೆ ನಟಿ ರೇಷ್ಮಾ ನಾಣಯ್ಯ, ನಿಧಿ ಸುಬ್ಬಯ್ಯ, ನೀತು ವನಜಾಕ್ಷಿ, ಹಿರಿಯ ನಟ ಅಚ್ಚುತ್ ಕುಮಾರ್, ದಿ. ನಿರ್ದೇಶಕ ಮಠ ಗುರುಪ್ರಸಾದ್, ಮುರಳಿ ಶರ್ಮಾ ಸೇರಿದಂತೆ ಹಲವು ಕಲಾವಿದರ ಬಣ್ಣ ಹಚ್ಚಿದ್ದಾರೆ.












Click it and Unblock the Notifications