Puneeth Rajkuma'r films: ಕನ್ನಡ ಚಿತ್ರರಂಗಕ್ಕೆ ಹುಮ್ಮಸ್ಸು ತುಂಬಲು ಮೇ 10ಕ್ಕೆ 2 ಸಿನಿಮಾ ರೀರಿಲೀಸ್
ಬೆಂಗಳೂರು, ಮೇ 06: ಕನ್ನಡ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಇತ್ತೀಚೆಗೆ ಬಿಡುಗಡೆ ಆಗಿಲ್ಲ. ಹೊಸಬರ ಸಿನಿಮಾಗಳು ಹೆಚ್ಚು ದಿನ ಥಿಯೇಟರ್‌ನಲ್ಲಿ ನಿಲ್ಲುತ್ತಿಲ್ಲ. ಹೀಗಾಗಿ ಫ್ಯಾಮಿಲಿ ಆಡಿಯನ್ಸ್ ಥಿಯೇಟರ್‌ನತ್ತ ಬರುತ್ತಿಲ್ಲ.
ಚಿತ್ರರಂಗದಲ್ಲಿನ ಇಂತಹ ವಾತಾವರಣವನ್ನೆಲ್ಲ ಬದಲಿಸಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ (Puneeth Rajkumar) ಎರಡು ಸಿನಿಮಾಗಳು ಮರು ಬಿಡುಗಡೆ ಮಾಡಲಾಗುತ್ತದೆ. ಕಳೆದ ಮಾರ್ಚ್ 17 ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ 'ಜಾಕಿ' (Jackie Movie) ಸಿನಿಮಾವನ್ನು ಮರು ಬಿಡುಗಡೆ ಮಾಡಿ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆತರಲಾಗಿತ್ತು.

'ಜಾಕಿ' ರೀರಿಲೀಸ್ ಪ್ರಯತ್ನಕ್ಕೆ ಪ್ರೇಕ್ಷಕರು, ಅಪ್ಪು ಅಭಿಮಾನಿಗಳು ಸಾಕಷ್ಟು ಯಶಸ್ಸು ತಂದುಕೊಟ್ಟರು. ಇದೀಗ ಸ್ಟಾರ್ ನಟರ ಸಿನಿಮಾಗಳಿಲ್ಲದೇ ಮಂಕುಕವಿದ ಚಿತ್ರರಂಗಕ್ಕೆ ಹುಮ್ಮಸ್ಸು ತುಂಬಲು ಪುನೀತ್ ರಾಜ್ ಕುಮಾರ್ ನಟನೆಯ 'ಅಂಜನಿಪುತ್ರ' (Anjaniputra film) ಹಾಗೂ 'ಪವರ್' (Power Movie) ಸಿನಿಮಾಗಳನ್ನು ಮರು ಬಿಡುಗಡೆ ನಿರ್ಧರಿಸಲಾಗಿದೆ.
ಕುಟುಂಬ ಸಮೇತರಾಗಿ ಅಭಿಮಾನಿಗಳ ಆಗಮನ
ಇದೇ ತಿಂಗಳ ಮೇ 10ರಂದು ಅಂಜನಿಪುತ್ರ ಹಾಗೂ ಪವರ್ ಸಿನಿಮಾಗಳು ಮತ್ತೆ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಸಹಸ್ರ ಸಂಖ್ಯೆಯ ಅಭಿಮಾನಿಗಳನ್ನು ಥಿಯೇಟರ್‌ಗೆ ಕರೆತರಲಿವೆ. ಅಲ್ಲದೇ ಅಪ್ಪು ಸಿನಿಮಾ ಎಂದಾಕ್ಷಣ ಫ್ಯಾಮಿಲಿ ಆಡಿಯನ್ಸ್ ಹೆಚ್ಚು. ಚಿಕ್ಕವರಿಂದ ಹಿಡಿದು ಹಿರಿಯ ನಾಗರಿಕರವರೆಗೂ ಅಭಿಮಾನಿಗಳನ್ನು ಸಂಪಾದಿಸಿರುವ ಪುನೀತ್ ರಾಜ್ ಕುಮಾರ್ ಅವರ ಸಿನಿಮಾಗಳನ್ನು ಕಣ್ತುಂಬಿಕೊಳ್ಳಲು ಜನ ಕುಟುಂಬ ಸಮೇತರಾಗಿ ಆಗಮಿಸುವ ನಿರೀಕ್ಷೆಗಳು ಹೆಚ್ಚಿವೆ.
ಎ.ಹರ್ಷ ನಿದೇರ್ಶನದ 'ಅಂಜನಿಪುತ್ರ'ದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿಯಾಗಿ ನಟಿಸಿದ್ದಾರೆ. ರಮ್ಯಾಕೃಷ್ಣಾ ಸೇರಿದಂತೆ ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿದೆ. ಇನ್ನೂ 'ಪವರ್' ಸಿನಿಮಾ ಸಹ ಕುಟುಂಬ ಪ್ರದಾನ ಸಿನಿಮಾ ಆಗಿದ್ದು, ಇದನ್ನು ಕೆ. ಮಾದೇಶ್ ಅವರು ನಿರ್ದೇಶಿಸಿದ್ದಾರೆ. ಇಲ್ಲಿ ಅಪ್ಪುಗೆ ನಾಯಕಿಯಾಗಿ ತೆಲುಗು ನಟಿ 'ತ್ರಿಶಾ' (Trish) ಅವರು ನಟಿಸಿದ್ದಾರೆ.

ಅಪ್ಪು ಅಭಿಮಾನಿಗಳಿಗೆ ಮೇ 10 ಹಬ್ಬ
ಸುಕ್ಕಾ ಸೂರಿ ನಿರ್ದೇಶನ ಜಾಕಿ ಸಿನಿಮಾ ಮರುಬಿಡುಗಡೆಯಾಗಿ ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ. ಚಿತ್ರರಂಗಕ್ಕೆ ಹೊರ ಹುರುಪು ತುಂಬಿತ್ತು. ಇವೆರಡು ಸಿನಿಮಾಗಳು ಅದೇ ಹಾದಿಯಲ್ಲಿ ಸಾಗುವ ನಿರೀಕ್ಷೆ ಇದೆ. ಒಟ್ಟಾರೆ ಮೇ 10 ಅಪ್ಪು ಅಭಿಮಾನಿಗಳಿಗೆ ಹಬ್ಬ ಎಂದರೆ ತಪ್ಪಾಗಲಾರದು.
ಅಪ್ಪು ಈ ಸಿನಿಮಾಗಳು ಮರು ಬಿಡುಗಡೆ?
ಈ ಸಿನಿಮಾಗಳು ಗೆದ್ದರೆ ಮತ್ತೆ ಅಪ್ಪು ಅವರ 'ರಾಜಕುಮಾರ', 'ನಟಸಾರ್ವಭೌಮ', 'ದೊಡ್ಮನೆ ಹುಡುಗ', 'ಜೇಮ್ಸ್' ಸೇರಿದಂತೆ ಇನ್ನಿತರ ಅಪ್ಪು ನಟನೆಯ ಸಿನಿಮಾಗಳಿಗೂ ಮರು ಬಿಡುಗಡೆಯ ಭಾಗ್ಯ ಸಿಗುವ ಸಾಧ್ಯತೆ ಇದೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಪವರ್, ಅಂಜನಿಪುತ್ರ ಸಿನಿಮಾ ಪ್ರದರ್ಶನ ಕಾಣಲಿವೆ.
ಅಪ್ಪು ಅವರ ಸಿನಿಮಾಗಳು ಮರು ಪ್ರದರ್ಶನಗೊಂಡರೆ, ಥಿಯೇಟರ್‌ಗಳು ಮತ್ತೆ ಹೌಸ್‌ಫುಲ್ ಆಗಲಿವೆ. ಚಿತ್ರಮಂದಿರ ಮಾಲೀಕರಿಗೆ ಒಂದಷ್ಟು ಕಲೆಕ್ಷನ್ ಆಗುತ್ತವೆ. ಚಿತ್ರಮಂದಿರ ನಂಬಿಕೊಂಡ ಒಂದಷ್ಟು ಕುಟುಂಬಗಳಿಗೆ ಆರ್ಥಿಕ ಆಸರೆಯಾಗುತ್ತವೆ.
ಸದ್ಯ ವಾರ ವಾರ ಒಂದಷ್ಟು ಸಿನಿಮಾಗಳು ಬಿಡುಗಡೆ ಆಗುತ್ತಿವೆಯಾದರೂ, ಥಿಯೇಟರ್‌ಗಳಲ್ಲಿ ನಿಲ್ಲುತ್ತಿಲ್ಲ. ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ನಟರ ಸಿನಿಮಾಗಾಗಿ ಕಾಯುತ್ತಿದ್ದಾರೆ. ಈ ಮಧ್ಯೆ ಅಪ್ಪು ಅವರ ಈ ಹಿಂದಿನ ಸಿನಿಮಾಗಳನ್ನು ಮತ್ತೆ ದೊಡ್ಡ ಪರದೆ ಮೇಲೆ ಕಣ್ತುಂಬಿಕೊಳ್ಳಬಹುದಾಗಿದೆ.











Click it and Unblock the Notifications