ಅಣ್ಣ ನನ್ ಬಿಟ್ಬಿಡಿ ಅಣ್ಣ.. ಹೊಡಿಬೇಡಿ ಪ್ಲೀಸ್‌ ಎಂದ ಪ್ರಥಮ್: ಇಲ್ಲಿದೆ ವೈರಲ್ ವಿಡಿಯೋ!

ನಟ, ಬಿಗ್‌ ಬಾಸ್‌ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಅವರು ಅಣ್ಣ ನನ್ ಬಿಟ್ಬಿಡಿ ಅಣ್ಣ.. ಹೊಡಿಬೇಡಿ ಪ್ಲೀಸ್‌ ಅಂತ ಹೇಳಿದ್ದು. ಇದು ಭಾರೀ ವೈರಲ್ ಆಗಿದೆ. ಪ್ರಥಮ್ ಹಾಗೂ ದರ್ಶನ್ ಫ್ಯಾನ್ಸ್‌ನ ನಡುವೆ ಕಿರಿಕ್‌ ಆಗಿತ್ತು. ಅದೆಲ್ಲವೂ ಈಗ ತಣ್ಣಗಾಗಿದೆ. ಸಿನಿಮಾ ಕೆಲಸಗಳಲ್ಲಿ ಪ್ರಥಮ್ ಅವರು ಬ್ಯುಸಿಯಾಗಿದ್ದಾರೆ. ನೇರ ಹಾಗೂ ಡೈಲಾಗ್‌ಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿ ಇರುವ ಪ್ರಥಮ್ ನನ್‌ ಬಿಟ್ಟಿಡಿ ಪ್ಲೀಸ್‌ ಅಂತಿದ್ದಾರೆ. ನಟ ಧ್ರುವ ಸರ್ಜಾ ಅವರಂತೆಯೇ ಮುದ್ದಾದ ಕಿರಿಕಿರಿ ಪ್ರಥಮ್‌ಗೂ ಶುರುವಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಕನ್ನಡದ ನಟರು ಮಾತ್ರವಲ್ಲ ಇದೀಗ ಕನ್ನಡ ಚಿತ್ರರಂಗದ ನಟರ ಅಭಿಮಾನಿಗಳು ಸಹ ಫೇಮಸ್‌ ಆಗುತ್ತಿದ್ದಾರೆ. ಹೌದು ಕನ್ನಡ ಚಿತ್ರರಂಗದ ಕೆಲವು ನಟರು ಸೋಷಿಯಲ್‌ ಮೀಡಿಯಾದಲ್ಲಿ ಅವರ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಾರೆ. ಇಷ್ಟು ದಿನ ಈ ಸಾಲಿನಲ್ಲಿ ಧ್ರುವ ಸರ್ಜಾ ಅವರು ಇದ್ದರು. ಇದೀಗ ಪ್ರಥಮ್‌ಗೂ ಹಾಡು ಹೇಳುವುದಕ್ಕೆ ಫ್ಯಾನ್ಸ್‌ ಬರ್ತಿದ್ದಾರೆ. ಇದಕ್ಕೆ ಪ್ರಥಮ್ ಅವರು ಅಣ್ಣಾ ನನ್ ಬಿಟ್ಬಿಡಿ ಅಣ್ಣ.. ಹೊಡಿಬೇಡಿ ಪ್ಲೀಸ್‌ ಅಂತಿದ್ದಾರೆ!

Actor Pratham Says Brother Please Don t Hit me Here s Viral Video

ನಟ ಧ್ರುವ ಸರ್ಜಾ ಅವರ ಅಭಿಮಾನಿಗಳ ಹೊಸ ಹಾಗೂ ಚಿತ್ರ ವಿಚಿತ್ರ ಹಾಡುಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಅದರಲ್ಲಿ ಧ್ರುವ ಸರ್ಜಾ ಅವರ ಅಭಿಮಾನಿಯೊಬ್ಬರು ಹಾಡಿದ್ದ ಓಡ್ರೋ.. ಓಡ್ರೋ ಇದು ಸರ್ಜಾ ಅಡ್ಡ ಹಾಡು ಮಾತ್ರ ಎವರ್‌ಗ್ರೀನ್‌. ಈಚೆಗೆ ಇನ್ನೊಬ್ಬ ಅಭಿಮಾನಿ ಅಮುಕು - ಡುಮುಕು... ಅಮುಕು - ಡುಮುಕು ಅಂತ ಹಾಡಿದ್ದ ಅದೂ ಸಹ ಸಾಕಷ್ಟು ವೈರಲ್ ಆಗಿತ್ತು. ಇದೀಗ ಧ್ರುವ ಸರ್ಜಾ ಅಭಿಮಾನಿಗಳ ರೀತಿ ಪ್ರಥಮ್‌ ಫ್ಯಾನ್ಸ್‌ ಸಹ ಹಾಡುವುದಕ್ಕೆ ಶುರು ಮಾಡಿಕೊಂಡಿದ್ದು, ಪ್ರಥಮ್ ಅಣ್ಣಾ ನನ್ ಬಿಟ್ಬಿಡಿ ಅಣ್ಣ.. ಹೊಡಿಬೇಡಿ ಪ್ಲೀಸ್‌ ಅಂತ ಈ ವೈರಲ್‌ ವಿಡಿಯೋವೊಂದಿಗೆ ಬರೆದುಕೊಂಡಿದ್ದಾರೆ. ಇದಕ್ಕೆ ಜನ ಅಣ್ಣಾ ನನ್ ಬಿಟ್ಬಿಡಿ ಅಣ್ಣ ಅಂತಿದ್ದಾರೆ.

ಪ್ರಥಮ್ ಫೇಸ್‌ಬುಕ್‌ ಪೋಸ್ಟ್‌ ವೈರಲ್: ಇನ್ನು ಅಭಿಮಾನಿಗಳ ಚಿತ್ರವಿಚಿತ್ರ ಹಾಡಿನ ಬೆನ್ನಲ್ಲೇ ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪ್ರಥಮ್ ಪೋಸ್ಟ್‌ ಮಾಡಿದ್ದು ಈ ಪೋಸ್ಟ್‌ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. "ಅಣ್ಣಾ ನನ್ ಬಿಟ್ಬಿಡಿ ಅಣ್ಣ.. ಹೊಡಿಬೇಡಿ‌.😥

ಹಂಸಲೇಖಾ ಅವ್ರು ಗುರುಕಿರಣ್ ಎಲ್ರೂ music ನಿಲ್ಸಿರೋದಕ್ಕೆ ಇವ್ರೇ compose ಮಾಡೋಕೆ ಶುರು ಮಾಡ್ಕೊಂಡವ್ರೆ...🤔😥" ಅಂತ ಪ್ರಥಮ್ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ತಾರಣ್ಣ ತಾರಣ್ಣ .. ತಾರಣ್ಣ ನೀನೇ ನಮಗೆಲ್ಲ ಮಾದರಿಯಣ್ಣ.. ಬಾರಣ್ಣ ಬಾರಣ್ಣ ಅಂತ ಹಾಡಿದೆ. ಪ್ರಥಮ್ ಅವರು ಅವರ ಅಭಿಮಾನಿಗಳೊಂದಿಗೆ ಮಾತನಾಡುವಾಗ ಅಭಿಮಾನಿಯೊಬ್ಬರು ಅಣ್ಣ ನಿಮಗೊಂದು ಹಾಡು ಹಾಡುತ್ತೇನೆ ಅಂತ ಶುರು ಮಾಡಿಕೊಂಡಿದ್ದಾರೆ. ನನ್ ಕೈಯಲ್ಲಿ ಆಗ್ತಾ ಎಲ್ಲಾ ಅಣ್ಣಾ ಈ ನನ್ಮಕ್ಳು du ಒಂದೊಂದಣ್ಣ...😃😃😃 ಅಂತ ಈ ವಿಡಿಯೋ ನೋಡಿದವರು ಕಮೆಂಟ್‌ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+