ಮಹಿಳೆಯಿಂದ ಥಿಯೇಟರ್‌ನಲ್ಲಿ ಹಲ್ಲೆ; ಘಟನೆ ಬಗ್ಗೆ ಕನ್ನಡದ ನಟ ಎನ್‌ಟಿ ರಾಮಸ್ವಾಮಿ ಹೇಳಿದ್ದೇನು?

ಹೈದರಾಬಾದ್‌ನ ಥಿಯೇಟರ್ ಒಂದರಲ್ಲಿ ಸಿನಿಮಾ ಪ್ರದರ್ಶನದ ವೇಳೆ ವಿಲನ್ ಪಾತ್ರ ಮಾಡಿದ್ದ ಕನ್ನಡ ನಟನ ಮೇಲೆ ಮಹಿಳೆಯೊಬ್ಬರು ಹಲ್ಲೆ ಮಾಡಿದ್ದ ವಿಡಿಯೋ ವೈರಲ್ ಆಗಿದೆ. ಸಿನಿಮಾ ಮುಗಿದ ಬಳಿಕ ಚಿತ್ರದ ನಟ-ನಟಿಯರು ಸ್ಕ್ರೀನ್ ಮುಂಭಾಗ ತೆರಳಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಬಂದ ಮಹಿಳಾ ಪ್ರೇಕ್ಷಕರೊಬ್ಬರು ವಿಲನ್ ಪಾತ್ರ ಮಾಡಿದ್ದ ಕನ್ನಡ ನಟ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದರು. ಈ ಘಟನೆಯಿಂದ ಚಿತ್ರತಂಡ ತಬ್ಬಿಬ್ಬಾಗಿತ್ತು. ಈ ಘಟನೆ ಬಗ್ಗೆ ಸ್ವತಃ ನಟ ಈಗ ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಅನೇಕ ಪಾತ್ರಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿರುವ ಎನ್‌ಟಿ ರಾಮಸ್ವಾಮಿ ಅವರೇ ಮಹಿಳೆಯಿಂದ ಹಲ್ಲೆಗೆ ಒಳಗಾದ ನಟ. ಹೈದರಾಬಾದ್‌ನಲ್ಲಿ ನಡೆದ ಘಟನೆ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದು, ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯ ನೋಡಿ ಮಹಿಳೆ ಸಿಟ್ಟಾಗಿದ್ದರು, ಆ ಕೋಪ ತಡೆಯಲು ಆಗದೆ ಅವರು ಆ ರೀತಿ ಪ್ರತಿಕ್ರಿಯೆ ನೀಡಿದರು ಎಂದು ಹೇಳಿದ್ದಾರೆ.

Actor NT Ramaswamy Reacts on Slapped by Woman in Hyderabad Movie Theater

ಘಟನೆಗೆ ಸಿನಿಮಾ ದೃಶ್ಯ ಕಾರಣ

'ಲವ್ ರೆಡ್ಡಿ' ಎನ್ನುವ ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ನಿರ್ಮಾಣವಾಗಿದೆ. ಸದ್ಯ ತೆಲುಗಿನಲ್ಲಿ ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಎನ್‌ಟಿ ರಾಮಸ್ವಾಮಿ ಸಿನಿಮಾದಲ್ಲಿ ನಾಯಕಿ ತಂದೆಯ ಪಾತ್ರ ಮಾಡಿದ್ದು, ಸಿನಿಮಾದ ಕೊನೆಯಲ್ಲಿ ಮಗಳ ಮೇಲೆ ಹಲ್ಲೆ ಮಾಡುವ ದೃಶ್ಯಗಳಿದೆ. ಹೆಣ್ಣು ಮಗಳ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದು ಮಹಿಳಾ ಪ್ರೇಕ್ಷಕಿಯನ್ನು ಕೆರಳಿಸಿದ್ದು, ಪಾತ್ರಧಾರಿಗೆ ನಟನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ.

ಈ ಸಿನಿಮಾ ಮಾಡುವಾಗಲೇ ನಿರ್ದೇಶಕರು ಪಾತ್ರದ ಬಗ್ಗೆ ವಿವರಿಸಿದ್ದರು. ಸಿನಿಮಾ ಶೂಟಿಂಗ್ ಮಾಡುವಾಗಲೇ ಇದು ತುಂಬಾ ಕ್ರೂರವಾದ ದೃಶ್ಯಗಳು ಎಂದು ನನಗೆ ಅನಿಸಿತ್ತು. ಎಡಿಟಿಂಗ್ ಸಂದರ್ಭದಲ್ಲೇ ಒಂದಿಬ್ಬರು ನಿಮಗೆ ಒದೆ ಬೀಳುತ್ತದೆ ಎಂದು ಹೇಳಿದ್ದರು ಅದು ಈಗ ನಿಜವಾಗಿದೆ ಎಂದು ಹೇಳಿದರು.

ಪ್ರಚಾರದ ಗಿಮಿಕ್ ಅಲ್ಲ

ಹಲ್ಲೆ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದು ಪ್ರಚಾರದ ಗಿಮಿಕ್ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಇದು ಯಾವುದೇ ಪ್ರಚಾರಕ್ಕಾಗಿ ಮಾಡಿದ್ದಲ್ಲ. ನಾವು ಎರಡು ಮೂರು ಚಿತ್ರಮಂದಿರಗಳಿಗೆ ತೆರಳಿ ಪ್ರೇಕ್ಷಕರ ಜೊತೆ ಸಿನಿಮಾ ನೋಡಿದ್ದೇವೆ. ಕೊನೆಯ ಸೀನ್‌ ನೋಡಿ ಜನರ ಪ್ರತಿಕ್ರಿಯೆ ಹೇಗಿದೆ ಎನ್ನುವುದು ನೋಡಿದ್ದೇವೆ. ಒಂದು ಥಿಯೇಟರ್ ನಲ್ಲಿ ನಾವು ಪ್ರೇಕ್ಷಕರ ಮುಂದೆ ಬಂದಾಗ ಈ ಘಟನೆ ನಡೆದಿದೆ ಎಂದರು.

ನಾನು ಮಹಿಳೆಗೆ ಇದೊಂದು ಪಾತ್ರ ಎಂದು ಮನವೊಲಿಸಲು ಪ್ರಯತ್ನಿಸಿದೆ, ಆದರೆ ಆ ಮಹಿಳೆ ಅದನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಮಗಳ ಮೇಲೆ ಕ್ರೂರವಾಗಿ ಹಲ್ಲೆ ಮಾಡ್ತೀಯಾ ಎಂದು ಹೊಡೆಯಲು ಮುಂದಾದರು, ಅಷ್ಟರಲ್ಲಿ ಚಿತ್ರತಂಡದವರು ಅವರನ್ನು ದೂರ ಕರೆದುಕೊಂಡು ಹೋದರು. ನನಗೂ ಒಂದು ಕ್ಷಣ ಮೈ ಜುಂ ಎಂದಿತು. ಪಾತ್ರ ಅಷ್ಟು ಚನ್ನಾಗಿ ಬಂದಿದೆ ಎಂದು ಒಂದು ಕಡೆ ಖುಷಿಯಾದರೂ, ಈ ಘಟನೆ ಪ್ರಚಾರಕ್ಕೆ ಎನ್ನುತ್ತಿರುವುದು ಬೇಸರ ತರಿಸಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+