Sanvi Sudeep: ಬೆನ್ನ ಮೇಲೆ ಗಣಪತಿ ಹಚ್ಚೆ ಹಾಕಿಸಿಕೊಂಡ ನಟ ಸುದೀಪ್ ಪುತ್ರಿ ಸಾನ್ವಿ, ಬೇಕಿತ್ತಾ ಎಂದ ನೆಟ್ಟಿಗರು

ಬೆಂಗಳೂರು: ಸ್ಯಾಂಡಲ್‌ವುಡ್ ಬಾದ್‌ ಶಾ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ (Sanvi Sudeep Tattoo) ಅವರು ಟ್ಯಾಟೋ (ಹೆಚ್ಚೆ) ಹಾಕಿಸಿಕೊಂಡು ಸುದ್ದಿಯಾಗಿದ್ದಾರೆ. ತಂದೆಯ 'ಮಾರ್ಕ್' ಸಿನಿಮಾದ 'ಮಸ್ತ್ ಮಲೈಕಾ..' ಹಾಡಿಗೆ ಧ್ವನಿಯಾಗುವ ಮೂಲಕ ಬೆಳ್ಳಿ ತೆರೆಗೆ ಪ್ರವೇಶಿಸಿದ್ದ ಅವರು ಅತ್ಯುತ್ತಮ ಗಾಯಕಿ ಪ್ರಶಸ್ತಿ ಸಹ ಪಡೆದುಕೊಂಡರು. ಮುಂದಿನ ದಿನಗಳಲ್ಲಿ ಅವರು ಸಿನಿಮಾ ಮಾಡಲಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಇದೀಗ ಅವರು ಬೆನ್ನಿನ ಮೇಲೆ ಹಾಕಿಸಿಕೊಂಡ 'ಗಣಪತಿ' ಟ್ಯಾಟೋ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರಿಂದ ವ್ಯಾಪಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಹೌದು, ಸಾನ್ವಿ ಅವರು ಸ್ಟಾರ್ ನಟನ ಮಗಳಾದರೂ ಸಹಿತ ಶ್ರಮಪಟ್ಟು ತಮ್ಮದೇ ಹಾದಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಅವರ ಈ ಹಿಂದೆ ಮಲೈಕಾ ಹಾಡಿನ ಯಶಸ್ಸು ಉದಾಹರಣೆ ಅನ್ನಬಹುದು. ಭಾನುವಾರ ಇನ್‌ಸ್ಟಾಗ್ರಾಮ್‌ನಲ್ಲಿ ತಾವು ಬೆನ್ನಿನ ಮೇಲೆ 'ಗಣಪತಿ'ನ ಟ್ಯಾಟೋ ಹಾಕಿಸಿಕೊಂಡಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದಕ್ಕಾಗಿ ಸುಮಾರು ಎಂಟು ಗಂಟೆ ವ್ಯಯಿಸಿದ್ದಾಗಿ ತಿಳಿಸಿದ್ದಾರೆ.

Sanvi Sudeep

ಹೈದರಾಬಾದ್‌ನ ಪ್ರತಿಷ್ಠಿತ 'ಏಲಿಯನ್ಸ್ ಟ್ಯಾಟೋ ಇಂಡಿಯಾ' ಸ್ಟುಡಿಯೋಗೆ ತೆರಳಿದ್ದ ಅವರು ಪ್ರಶಸ್ತಿ ವಿಜೇತ ಕಲಾವಿದ ದೀಪ್ ಸಲುಂಕೆ ಅವರಿಂದ ಕಪ್ಪು ಮತ್ತು ಕೆಂಪು ಬಣ್ಣ ಮಿಶ್ರಿತ ಅದ್ಭುತ ಟ್ಯಾಟೋ ಹಾಕಿಸಿಕೊಂಡಿದ್ದಾಗಿ ತಮ್ಮ ಟ್ಯಾಟೋ ಜರ್ನಿಯನ್ನು ಸ್ವತಃ ಅವರೇ ವಿವರಿಸಿದ್ದಾರೆ. ಖುಷಿ ಹಂಚಿಕೊಂಡಿದ್ದಾರೆ. ಅವರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

Actress Trisha: ವಿಜಯ್ ಸಿಎಂ ಪದಗ್ರಹಣದಲ್ಲಿ ನಟಿ ತ್ರಿಶಾ ಹೈಲೈಟ್: ಸಾಂಪ್ರದಾಯಿಕ ಲುಕ್‌ಗೆ ಫ್ಯಾನ್ಸ್ ಫಿದಾ
Actress Trisha: ವಿಜಯ್ ಸಿಎಂ ಪದಗ್ರಹಣದಲ್ಲಿ ನಟಿ ತ್ರಿಶಾ ಹೈಲೈಟ್: ಸಾಂಪ್ರದಾಯಿಕ ಲುಕ್‌ಗೆ ಫ್ಯಾನ್ಸ್ ಫಿದಾ

ಫ್ಯಾಷನ್-ಭಕ್ತಿಯ ಸಮ್ಮಿಲನ; ನಟ್ಟಿಗರ ಮೆಚ್ಚುಗೆ

ಇಂದಿನ ದಿನಗಳಲ್ಲಿ ಜನಸಾಮಾನ್ಯರಿಗೆ, ಅದರಲ್ಲೂ ಜೆನ್‌ ಜೀಗಳಿಗೆ ಟ್ಯಾಟೋ ಕ್ರೇಜ್ ಕೊಂಚ ಹೆಚ್ಚು ಎನ್ನಬಹುದು. ಸಾನ್ವಿ ಅವರ ಟ್ಯಾಟೋಗೆ ನೆಟ್ಟಿಗರು, ಅಭಿಮಾನಿಗಳು ಬೆರಗಾಗಿದ್ದಾರೆ. ಕಿಚ್ಚಿನ ಫ್ಯಾನ್ಸ್ ಸಾನ್ವಿಗೆ ಸಪೋರ್ಟ್ ಮಾಡಿದ್ದಾರೆ. ಅವರ ಫೋಟೋಗಳನ್ನು ಹಂಚಿಕೊಂಡಿದ್ದಲ್ಲದೇ, ಸ್ವಾನಿ ಅವರ ಫ್ಯಾಷನ್ ಜೊತೆಗೆ ಗಣೇಶನ ಮೇಲಿನ ಭಕ್ತಿಯ ಸಮ್ಮಿಲನದ ವಿಶಿಷ್ಟ ಪ್ರದರ್ಶನ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವು ಜಾಲತಾಣ ವೇದಿಕೆಗಳಲ್ಲಿ ನೆಗಟಿವ್ ಕಾಮೆಂಟ್ ಮಾಡಿದವರಿಗೆ, ಇದು ಬೇಕಿರಲಿಲ್ಲ ಎಂದವರಿಗೆ ಇದು ತಪ್ಪಲ್ಲ ಎಂದು ಬುದ್ಧಿಯೂ ಹೇಳಿದ್ದಾರೆ. ಅವರಲ್ಲೇ ಚರ್ಚೆಗಳು ನಡೆಯುತ್ತಿವೆ.

ಇದು ನಮ್ಮ ಸಂಸ್ಕೃತಿ ಅಲ್ಲ? ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ

ಈ ಹಿಂದೆ ಕೈ ಮೇಲೆ 'ರಾಯರಿದ್ದಾರೆ', 'ಶಿವ' ಇನ್ನಿತರ ದೇವರ ಹೆಸರುಗಳು, ಸಂಕೇತಗಳು, ಜೊತೆಗೆ ದೇವರ ಟ್ಯಾಟೋ ಹಾಕಿಸಿಕೊಳ್ಳುವುದು ಟ್ರೆಂಡ್ ಆಗಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ವರ್ಗದಿಂದ ಆಕ್ಷೇಪಣೆ ವ್ಯಕ್ತವಾಗಿದೆ. ಅದೇ ರೀತಿ ಸ್ವಾನಿ ಸುದೀಪ್ ಅವರ ಗಣಪತಿ ಟ್ಯಾಟೋಗೂ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಎಕ್ಸ್, ಹೀಗೆ ವಿವಿಧ ವೇದಿಕೆಗಳಲ್ಲಿ ಮೆಚ್ಚುಗೆ ಜೊತೆಗೆ ಹಲವರಿಂದ ವಿರೋಧವು ಕೇಳಿ ಬಂದಿದೆ.

'ಇದು ನಮ್ಮ ಸಂಸ್ಕೃತಿ ಅಲ್ಲ ದೇವರು ಪೂಜೆಗೆ ಸೀಮಿತ ಹೊರತು ನಿಮ್ಮ ಶೋಕಿಗಲ್ಲ'. 'ದೇವರು ಮನಸ್ಸಲ್ಲಿರಬೇಕು ಮೈಮೇಲಲ್ಲ!' ಎಂದು ಸಾನ್ವಿ ಅವರ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ರೀ ಮೇಡಂ ಬೆಳಿಗ್ಗೆ ಎಲ್ಲರೂ ಎದ್ದು ಯಾವುದೇ ವಿಘ್ನಗಳು ಬರದೇ ಇರಲಿ ಅಂತ ಗಣೇಶನನ್ನ ನೋಡಿ ನಮಸ್ಕಾರ ಮಾಡ್ಕೊಂಡು ಹೋಗ್ತಾರೆ. ನೀವು ನೋಡಿದ್ರೆ ಬೆನ್ನಿಗೆ ಹಾಕಿಸ್ಕೊಂಡು ಆ ದೇವರಿಗೆ ವಿಗ್ನ ತಂದು ಬಿಟ್ರಲ್ಲ' ಎಂದು ಮಾರ್ಮಿಕವಾಗಿ ಕಾಮೆಂಟ್ ಮಾಡಿದ್ದಾರೆ.

ಚರ್ಚೆಗೆ ಗ್ರಾಸವಾದ ಗಣಪತಿ ಟ್ಯಾಟೋ

'ಟ್ಯಾಟೊ ಹಾಕಿಕೊಳ್ಳುವುದು ಸಾನ್ವಿ ಅವರ ವಯಕ್ತಿಕ ವಿಷಯ ಆದರೂ ಸಹ ಹಿಂದೂ ದೇವರುಗಳ ಚಿತ್ರಗಳನ್ನು ಈ ರೀತಿಯಲ್ಲಿ ಮೈಮೇಲೆ ಹಾಕಿಸಿಕೊಳ್ಳುವುದು ಸರಿಯಲ್ಲ ಅನ್ನುವುದು ನನ್ನ ವಯಕ್ತಿಕ ಅಭಿಪ್ರಾಯ.. ಹಿಂದೂ ದೇವರ ವಿಚಾರದಲ್ಲಿ ಮಡಿ, ಮೈಲಿಗೆ ಎಂಬುದು ಇರುತ್ತೆ' ಎಂದು ಫೇಸ್‌ಬುಕ್‌ನಲ್ಲೊಬ್ಬರು ಬರೆದುಕೊಂಡಿದ್ದಾರೆ. ಈ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ. ಇದು ಸ್ವಾನ್ವಿ ಅವರಿಗೆ ಬೇಕಿರಲಿಲ್ಲ ಅಂತಲೂ ಕೆಲವರು ಹೇಳಿದ್ದಾರೆ.

'ದೇವರ ಟ್ಯಾಟೋ ಹಾಕಿಸಿಕೊಳ್ಳುವುದು ಭಕ್ತಿ ಅಲ್ಲ, ಅದೊಂದು ಬಿಸಿನೆಸ್ ಇದರಿಂದ ಸಮಾಜಕ್ಕೆ ಏನು ಸಂದೇಶ ಹೋಗುತ್ತದೆ' ಎಂದು ಮತ್ತೊಬ್ಬರು ಅಭಿಪ್ರಾಯ ಹೊರ ಹಾಕಿದ್ದಾರೆ. 'ಈ ರೀತಿ ಮಾಡುವುದು ತಪ್ಪು, ತಂದೆಯ ಮರಿಯಾದೆ ಉಳಿಸಿ' ಎಂದು ಕೆಲವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+