ಈ ನಟಿಯ ಮಗಳ ಜೊತೆ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಮುದ್ದಾದ ವಿಡಿಯೋ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿದ್ದ ನಟ ದರ್ಶನ್‌ ಇದೀಗ ಚಿಕಿತ್ಸೆಗಾಗಿ ಮಧ್ಯಂತರ ಜಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಈ ಪ್ರಕರಣದಲ್ಲಿ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಹೋರಾಟ ಮೆಚ್ಚಲೇಬೇಕು. ದರ್ಶನ್‌ ಜೈಲು ಸೇರಿದ ದಿನದಿಂದ ಮಧ್ಯಂತರ ಜಾಮೀನು ಪಡೆದು ಹೊರ ಬರುವ ತನಕ ವಿಜಯಲಕ್ಷ್ಮಿ ಶತಪ್ರಯತ್ನ ನಡೆಸಿದ್ದರು. ಈಗಲೂ ಅವರ ಕಾನೂನು ಹೋರಾಟ ಮುಂದುವರಿದಿದೆ.

ಮೊದಲೇ ವಿಜಯಲಕ್ಷ್ಮಿ ಅವರನ್ನು ಅತ್ತಿಗೆ ಎಂದು ಪ್ರೀತಿಸುತ್ತಿದ್ದ ದರ್ಶನ್ ಅಭಿಮಾನಿಗಳು ಈ ಘಟನೆಗಳ ಬಳಿಕ ಅವರನ್ನು ದೇವತೆ ಎಂದು ಕರೆಯುತ್ತಿದ್ದಾರೆ. ಪತಿಯ ಸಂಕಷ್ಟದ ದಿನಗಳಲ್ಲಿ ಜೊತೆ ನಿಂತಿರುವ ವಿಜಯಲಕ್ಷ್ಮಿ ಅವರ ಹೋರಾಟವನ್ನು ದರ್ಶನ್‌ ಅಭಿಮಾನಿಗಳು ಸೇರಿದಂತೆ ಅನೇಕರು ಮೆಚ್ಚಿದ್ದಾರೆ. ಸದ್ಯ ವಿಜಯಲಕ್ಷ್ಮಿ ಅವರನ್ನು ದರ್ಶನ್‌ ಫ್ಯಾನ್ಸ್ ರಿಯಲ್‌ ಹೀರೋಯಿನ್‌ ಅಂತೆ ನೋಡುತ್ತಿದ್ದಾರೆ. ಹೀಗಾಗಿ ಅವರ ವಿಶೇಷ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ.

Actor Darshan s wife Vijayalakshmi Cute Video With Actress Kavya Gowda s Daughter

ಇದೀಗ ದರ್ಶನ್ಪತ್ನಿ ವಿಜಯಲಕ್ಷ್ಮಿ ಅವರ ಮುದ್ದಾದ ವಿಡಿಯೋವೊಂದನ್ನು ವೈರಲ್‌ ಮಾಡಲಾಗುತ್ತಿದೆ. ಮಗುವಿನೊಂದಿಗೆ ವಿಜಯಲಕ್ಷ್ಮಿ ಸಮಯ ಕಳೆಯುವ ವಿಡಿಯೋ ಇದಾಗಿದೆ. ವಿಶೇಷವೆಂದರೆ ವಿಜಯಲಕ್ಷ್ಮಿ ಅವರ ಕೈಯಲ್ಲಿ ಇರುವ ಮಗು ಓರ್ವ ಜನಪ್ರಿಯ ನಟಿಯ ಮಗುವಾಗಿದೆ. ಹೌದು, ಕಿರುತೆರೆಯ ಜನಪ್ರಿಯ ನಟಿ ಕಾವ್ಯಾ ಗೌಡ ಅವರ ಮಗಳು ಸಿಯಾಳ ಜೊತೆಗಿನ ವಿಜಯಲಕ್ಷ್ಮಿ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ.

ಈ ವಿಡಿಯೋವನ್ನು ವಿಜಯಲಕ್ಷ್ಮಿ ಅವರ ಹುಟ್ಟುಹಬ್ಬದ ಪ್ರಯುಕ್ತ ನಟಿ ಕಾವ್ಯ ಗೌಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹ್ಯಾಪಿ ಬರ್ತ್ ಡೇ ದೊಡ್ಡಮ್ಮ ಎನ್ನುವ ಕ್ಯಾಪ್ಷನ್‌ನೊಂದಿಗೆ ಈ ವಿಡಿಯೋವನ್ನು ಕಾವ್ಯಗೌಡ ಪೋಸ್ಟ್‌ ಮಾಡಿದ್ದರು. ಜೊತೆಗೆ ವಿಜಯಲಕ್ಷ್ಮೀಯವರ ಕೆಲವು ವಿಶೇಷ ಕ್ಷಣಗಳ ಫೋಟೊ ಶೇರ್ ಮಾಡಿ, 'ನನ್ನ ಸುಂದರಿ ಅಕ್ಕನಿಗೆ ಹ್ಯಾಪಿ ಬರ್ತ್ ಡೇ, ಪದಗಳಲ್ಲಿ ಹೇಳೋದಕ್ಕಿಂತ ಜಾಸ್ತಿ ನಿಮ್ಮನ್ನು ಪ್ರೀತಿಸುತ್ತೇನೆ. ಯಾವಾಗಲೂ ಖುಷಿಯಾಗಿರಿ, ಆ ದೇವರು ನಿಮಗೆ ಎಲ್ಲಾ ರೀತಿಯ ಸಂತೋಷ ಮತ್ತು ಯಶಸ್ಸನ್ನು ನೀಡಲಿ, ಯಾವಾಗ್ಲೂ ಶೈನ್ ಆಗುತ್ತಲೇ ಇರಿ, ಯು ಆರ್ ಸ್ಟ್ರಾಂಗ್ ಲೇಡಿ, ಲವ್ ಯು ಜಾಸ್ತಿ' ಎಂದು ಕಾವ್ಯಾ ಗೌಡ ವಿಶೇಷವಾಗಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+