Actor Darshan Film: ಪ್ರೇಮಿಗಳ ದಿನದಂದೇ ನಟ ದರ್ಶನ್ ಮತ್ತೊಂದು ಸಿನಿಮಾ ರೀ ರಿಲೀಸ್
Actor Darshan: Actor Darshan: ಪ್ರೇಮಿಗಳ ದಿನಕ್ಕೆ ಇನ್ನೂ ಕೇವಲ ಎರಡು ದಿನಗಳು ಮಾತ್ರ ಬಾಕಿ ಇವೆ. ಅಂದೇ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರ ಅಭಿನಯದ ಮತ್ತೊಂದು ಸಿನಿಮಾ ರಾಜ್ಯದ ಎಲ್ಲಾ ಥಿಯೇಟರ್‌ಗಳಲ್ಲೂ ರೀ ರೀಲಿಸ್ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾವ ಚಿತ್ರ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ನಟ ದರ್ಶನ್ ನಟನೆಯ ನಮ್ಮ ಪ್ರೀತಿಯ ರಾಮು ಸಿನಿಮಾವನ್ನು ಫೆಬ್ರವರಿ 14ರಂದು ಮರು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಅದರಲ್ಲೂ ನಟ ದರ್ಶನ್ ಅವರದ್ದು ಫೆಬ್ರವರಿ 16ರಂದು ಹುಟ್ಟುಹಬ್ಬದ ಸಮಯದಲ್ಲೇ ಈ ಸಿನಿಮಾನ ರೀ ರಿಲೀಸ್ ಆಗಲಿದೆ. ಇನ್ನು ಕಳೆದ ವರ್ಷ ಬಿಡುಗಡೆಗೊಂಡ ನಟ ದರ್ಶನ್ ಅವರ ಕಾಟೇರ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡಿತ್ತು.
ಇನ್ನು 2024ರಲ್ಲಿ ಕರಿಯ, ಶಾಸ್ತ್ರಿ ಮತ್ತು ನವಗ್ರಹದಂತಹ ಸಿನಿಮಾನಗಳನ್ನು ಕೂಡ ರೀ ರಿಲೀಸ್ ಮಾಡಲಾಯಿತು. ನಮ್ಮ ಪ್ರೀತಿಯ ರಾಮು ಚಿತ್ರವು ದರ್ಶನ್ ಅವರ ವೃತ್ತಿಜೀವನದಲ್ಲಿ ಅದ್ವಿತೀಯ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರದಲ್ಲಿ ನಟ ದೃಷ್ಟಿಹೀನ ಗಾಯಕನಾಗಿ ಕಾಣಿಸಿಕೊಂಡಿದ್ದು, ನಟನೆಗೆ ಮೆಚ್ಚುಗೆ ಪಡೆದಿದ್ದರು. ಇದು ದೊಡ್ಡ ಮಟ್ಟದಲದಲ್ಲಿ ಹೆಸರು ಮಾಡಿದ ಸಿನಿಮಾ ಆಗಿದ್ದು, ಇದರಲ್ಲಿ ನಟ ದರ್ಶನ್ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.
ಅಭಿಮಾನಿಗಳಿಗೆ ಬಿಗ್ ಅಪ್ಡೇಟ್: ಕ್ಯಾಮೆರಾ ಮುಂದೆ ಬಂದು ಮಾತನಾಡಿರುವ ವಿಡಿಯೋವನ್ನು ನಟ ದರ್ಶನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಜೋಗಿ ಪ್ರೇಮ್ ಜೊತೆ ಸಿನಿಮಾ ಮಾಡುವ ಕುರಿತು ಅಭಿಮಾನಿಗಳಿಗೆ ಬಿಗ್ ಅಪ್ಡೇಟ್‌ವೊಂದನ್ನು ಕೊಟ್ಟಿದ್ದಾರೆ.
ನಟ ದರ್ಶನ್ ಹುಟ್ಟು ಹಬ್ಬ ಕೂಡ ಸಮೀಪಿಸುತ್ತಿದೆ. ಈ ಹಿನ್ನೆಲೆ ಅವರು ಕ್ಯಾಮೆರಾ ಮುಂದೆ ಬಂದು ಮಾತನಾಡಿದ್ದು, ಮತ್ತೆ ಸಿನಿಮಾಗಳ ಕಡೆ ಮುಖ ಮಾಡುವ ಮುನ್ಸೂಚನೆ ಕೊಟ್ಟಿದ್ದಾರೆ. ಇನ್ನು ಅಭಿಮಾನಿಗಳು ತಮ್ಮ ನೆಚ್ಚಿನ ನಟ ದರ್ಶನ್ ಹುಟ್ಟುಹಬ್ಬ ಸಂಭ್ರಮಾಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಅದ್ಧೂರಿಯಾಗಿ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರಾ ಎಂಬುದರ ಬಗ್ಗೆ ಮಾಹಿತಿ ಇಲ್ಲ.
ಈ ವಿಡಿಯೋದಲ್ಲಿ ಮಾತನಾಡಿರುವ ನಟ ದರ್ಶನ್ "ಎಲ್ಲಾ ನನ್ನ ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮಗೇ ಎಷ್ಟು ಧನ್ಯವಾದ ಹೇಳಿದರೂ ಕೂಡ ತುಂಬಾ ಕಡಿಮೆ. ನೀವು ತೋರಿಸಿದಷ್ಟು ಪ್ರೀತಿ ಅಭಿಮಾನದ ಮುಂದೇ ಇದೇನು ಅಲ್ಲ. ಇದನ್ನು ಯಾವ ರೀತಿಯಾಗಿ ರಿಟರ್ನ್ ಮಾಡಲಿ ಗೊತ್ತಾಗುತ್ತಿಲ್ಲ. ಈಗ ನಾನು ಕ್ಯಾಮೆರಾ ಮುಂದೆ ಬರಲು ಕಾರಣನೇ ನನ್ನ ಬರ್ತ್‌ಡೇ ವಿಚಾರವಾಗಿ.
ನನಗೂ ಆಸೆ ಇತ್ತು, ನೀವು ಕೂಡ ಆಸೆ ಪಟ್ಟಿದ್ದೀರಿ. ನಿಮ್ಮನ್ನ ನಾನು ಭೇಟಿ ಮಾಡಬೇಕು ಅಂತಾ ನನಗೂ ತುಂಬಾ ಆಸೆ ಇದೆ. ಈ ಬಾರಿ ಒಂದು ಸಮಸ್ಯೆ ಏನು ಅಂದರೆ, ದೊಡ್ಡ ಸಮಸ್ಯೆ ಅಂತಾ ಹೇಳುತ್ತಿಲ್ಲ. ಒಂದೇ ಒಂದು ಸಮಸ್ಯೆ ಅಂದರೆ ಅದು ಆರೋಗ್ಯ ಸಮಸ್ಯೆ. ಪ್ರತಿ ಬಾರಿಯೂ ನಿಮ್ಮ ಮುಂದೆಯೇ ಬರುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.












Click it and Unblock the Notifications