ಕನ್ನಡ ಪಾಠ ಮಾಡಿದವರಿಗೆ ನಟ ಡಾಲಿ ಧನಂಜಯ್‌ ಖಡಕ್‌ ಉತ್ತರ

ಕನ್ನಡ ಭಾಷಾಭಿಮಾನ ಎಷ್ಟರಮಟ್ಟಿಗೆ ಇದೆ ಎಂದು ಕನ್ನಡಿಗರಿಗೆ ಹೇಳಿಕೊಡುವ ಅಗತ್ಯವಿಲ್ಲ. ಕನ್ನಡ ವಿಚಾರವಾಗಿ ಸಿಡಿಯುವ ವಾತಾವರಣವೂ ಹೊಸದೇನಲ್ಲ. ನಟ ನಟಿಯರನ್ನೂ ಇದೇ ವಿಚಾರವಾಗಿ ಆಗಾಗ ಪ್ರಶ್ನಿಸುವುದು ಕೂಡ ಸಾಮಾನ್ಯ. ಈಗ ನಟ ಡಾಲಿ ಧನಂಜಯ್‌ಗೆ ಕೂಡ ಕೆಲವರು ಕನ್ನಡ ಪಾಠ ಮಾಡಿದ್ದು, ಇದನ್ನು ಡಾಲಿ ಖಡಕ್‌ ಉತ್ತರ ಕೂಡ ನೀಡಿದ್ದಾರೆ.

ಜೀಬ್ರಾ ಸಿನಿಮಾದ ಪ್ರೆಸ್‌ಮೀಟ್‌ನಲ್ಲಿ ಡಾಲಿ ಕನ್ನಡ ಪಾಠದ ವಿಚಾರವಾಗಿ ಖಾರವಾಗಿ ಮಾತನಾಡಿದ್ದಾರೆ. ಇಷ್ಟಕ್ಕೂ ಡಾಲಿಗೆ ಕನ್ನಡ ಪಾಠ ಮಾಡಲು ಕಾರಣವಾಗಿದ್ದು ಪುಷ್ಪ-2 ಸಿನಿಮಾ. ಹೌದು ನಟ ಡಾಲಿ ಧನಂಜಯ್‌ ಕನ್ನಡ ಮಾತ್ರವಲ್ಲದೆ ತೆಲುಗು ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್‌ ನಟನೆಯ ಪುಷ್ಪ ಸಿನಿಮಾದಲ್ಲಿ ಜಾಲಿರೆಡ್ಡಿಯಾಗಿ ಡಾಲಿ ಮೋಡಿ ಮಾಡಿದ್ದರು.

Actor Daali Dhananjay Replied To Those Who Taught Kannada In The Comments

ಇನ್ನು ಪುಷ್ಟ-2 ಕೂಡ ತೆರೆಗೆ ಬರಲು ಸಜ್ಜಾಗಿದ್ದು, ಇದರಲ್ಲೂ ಡಾಲಿ ವಿಭಿನ್ನ ಪಾತ್ರದಲ್ಲಿ ಮಿಂಚಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪುಷ್ಟ-2 ಸಿನಿಮಾದ ಟ್ರೈಲರ್‌ ಅನ್ನು ಡಾಲಿ ಕೂಡ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೇ ವಿಚಾರವಾಗಿ ಕೆಲವರು ಡಾಲಿಗೆ ಕನ್ನಡ ಪಾಠ ಮಾಡಿದ್ದಾರೆ ಎಂದು ಹೇಳಲಾಗಿದೆ.

ಡಾಲಿ ಧನಂಜಯ್‌ ಅವರು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ತೆಲುಗು ಭಾಷೆಯ ಟ್ರೈಲರ್‌ ಹಂಚಿಕೊಂಡಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಕನ್ನಡದ ಟ್ರೈಲರ್‌ ಯಾಕೆ ಹಂಚಿಕೊಳ್ಳಲಿಲ್ಲ? ಎಂದೆಲ್ಲ ಕಾಮೆಂಟ್‌ ಕೂಡ ಮಾಡಿದ್ದಾರೆ. ಈ ವಿಚಾರವಾಗಿ ಡಾಲಿ ಬೇಸರಗೊಂಡು, ಖಾರವಾಗಿಯೇ ವೇದಿಕೆಯಲ್ಲಿ ಮಾತನಾಡಿದ್ದಾರೆ.

ನಾನು ಸಾಮಾನ್ಯವಾಗಿ ಕಾಮೆಂಟ್‌ಗಳನ್ನು ಓದುವವನಲ್ಲ. ಕನ್ನಡದ ವಿಚಾರವಾಗಿ ನನ್ನ ಬಗ್ಗೆ ಕಾಮೆಂಟ್‌ ಮಾಡಿದ್ದಾಗಿ ಹಲವು ಸ್ನೇಹಿತರು ನನಗೆ ಹೇಳಿದ್ರು. ನನಗೆ ಯಾರೂ ಕನ್ನಡ ಪಾಠ ಮಾಡುವುದು ಬೇಡ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

Actor Daali Dhananjay Replied To Those Who Taught Kannada In The Comments

ಪುಷ್ಪ-2 ಸಿನಿಮಾದ ತೆಲುಗು ಟ್ರೈಲರ್ ಮೊದಲಿಗೆ ರಿಲೀಸ್‌ ಆಗಿತ್ತು. ನನಗೆ ಸಿಕ್ಕಿದ್ದು ಅದೇ ಲಿಂಕ್. ಹಾಗಾಗಿ ಅದನ್ನೇ ನಾನು ಹಂಚಿಕೊಂಡೆ. ಇದಕ್ಕೆ ಜನ ಕಾಮೆಂಟ್ ಬಾಕ್ಸ್‌ನಲ್ಲಿ ನೀನು ಕನ್ನಡ ಟ್ರೈಲರ್ ಹಾಕಿಲ್ಲ, ನೀನು ಕನ್ನಡದವನಾ? ಎಂದು ಕಾಮೆಂಟ್ ಮಾಡಿದ್ದಾರೆ. ನಾನು ಕಾಮೆಂಟ್ಸ್ ಓದಲ್ಲ. ಆದರೆ ಸ್ನೇಹಿತರು ಇದನ್ನು ನನ್ನ ಗಮನಕ್ಕೆ ತಂದ್ರು ಎಂದು ಧನಂಜಯ್ ಹೇಳಿದ್ದಾರೆ.

ಜೀಬ್ರಾ ಸಿನಿಮಾದ ಟ್ರೈಲರ್, ಹಾಡು ಎಲ್ಲವನ್ನೂ ಕನ್ನಡದಲ್ಲೇ ತಂದಿದ್ದೇವೆ. ಕನ್ನಡಕ್ಕೆ ಚೆನ್ನಾಗಿ ಡಬ್ ಕೂಡ ಮಾಡಿಸಿದ್ದೇವೆ. ಖುದ್ದು ನಮ್ಮ ತಂಡವೇ ಡಬ್ಬಿಂಗ್ ಮಾಡಿದೆ.‌ ಇದು ನಿಜವಾಗಿಯೂ ಕನ್ನಡ ಸಿನಿಮಾ ಎನ್ನುವ ಮಟ್ಟಿಗೆ ಡಬ್ ಮಾಡಿದ್ದೀವಿ. ನೀವು ನೋಡಬೇಕಾಗಿರುವುದು ಈ ವಿಚಾರವನ್ನೇ ಹೊರತು ಯಾವುದೋ ಚಿಕ್ಕ ವಿಚಾರಕ್ಕೆ ಕಾಮೆಂಟ್ ಮಾಡೋದಲ್ಲ. ಅದರಿಂದ ಯಾವ ಉಪಯೋಗವೂ ಇಲ್ಲ ಎಂದು ಧನಂಜಯ್‌ ಬೇಸರದಿಂದ ಮಾತನಾಡಿದ್ದಾರೆ.

ನನಗೆ ಯಾರೂ ಕನ್ನಡ ಪಾಠ ಹೇಳಿಕೊಡುವ ಅಗತ್ಯವಿಲ್ಲ. ನಾನು ಒಳ್ಳೆಯ ವಿದ್ಯಾರ್ಥಿ, ಕನ್ನಡ ಪ್ರೀತಿ ನನಗೆ ಗೊತ್ತಿದೆ. ಅದನ್ನು ನಾನು ಯಾರಿಗೂ ಹೇಳುವ ಅವಶ್ಯಕತೆ ಇಲ್ಲ ಎಂದೂ ಡಾಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+