Allu Arjun: 'ಪುಷ್ಪಾ-2' ಅಲ್ಲು ಅರ್ಜುನ್ ಖಡಕ್ ಪೋಸ್ಟರ್ ಔಟ್, ಚಿತ್ರ ಬಿಡುಗಡೆ ವದಂತಿಗೆ ತೆರೆ

ಬೆಂಗಳೂರು, ಅಕ್ಟೋಬರ್ 17: ದಕ್ಷಿಣ ಭಾರತ ಸೇರಿದಂತೆ ಇಡೀ ದೇಶದಲ್ಲಿ ತೆಲುಗು ಚಿತ್ರರಂಗ ಕೇಳಿ ಬರುತ್ತಿರುವ ನಟ ಹೆಸರು ಎಂದರೆ ಅದು ಅಲ್ಲು ಅರ್ಜುನ್ ಅವರದ್ದು. ಇದಕ್ಕೆ ಕಾರಣ ಅವರ ನಟನೆಯ 'ಪುಷ್ಪಾ-2' (Pushpa 2 new Poster) ಸಿನಿಮಾ. ಇದೀಗ ಇದೇ ಸಿನಿಮಾದಿಂದ ನಟ ಅಲ್ಲು ಅರ್ಜುನ್ (Allu Arjun Poster) ಅವರ ಖಡಕ್ ಪೋಸ್ಟರ್‌ವೊಂದನ್ನು ಚಿತ್ರತಂಡ ರಿಲೀಸ್ ಮಾಡಿದೆ. ಇದರ ಮೂಲಕ ವದಂತಿ ಹಬ್ಬಿಸುತ್ತಿದ್ದವರಿಗೆ ಬಾಯಿಗೆ ಬೀಗ ಜಡಿದಿದೆ.

'ಪುಷ್ಪಾ-2' ಸಿನಿಮಾ ನೋಡಲು ದೇಶವೇ ಕಾತರರಿಂದ ಕಾಯುತ್ತಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಇದರ ಮತ್ತೊಂದು ಪೋಸ್ಟರ್ ಗುರುವಾರ ರಿಲೀಸ್ ಆಗಿದೆ. ಇದರಲ್ಲಿ ನಟ ಅಲ್ಲು ಅರ್ಜುನ್ ಅವರು ಕುರ್ಚಿಯಲ್ಲಿ ಕಾಲ ಮೇಲೆ ಕಾಲು ಹಾಕಿಕೊಂಡು ಖಡಕ್ ಪೋಸ್ ಕೊಟ್ಟ ಪೋಸ್ಟರ್ ಇದಾಗಿದೆ. ಫುಲ್ ಮಾಸ್‌ ರೀತಿ ಕಾಣುವ ಈ ಪೋಸ್ಟರ್‌ಗೆ ಅಲ್ಲು ಅರ್ಜುನ್ ಅಭಿಮಾನಿಗಳು ಫಿದಾ ಆಗಿದ್ದಾರೆ.

Actor Allu Arjun Pushpa-2 Film New Poster Released Announced Movie Release Date

ಮತ್ತೆ ಅಧಿಕೃತ ಬಿಡುಗಡೆ ದಿನಾಂಕ ಘೋಷಣೆ

ಸದ್ಯ ಅಲ್ಲು ಅರ್ಜುನ್ ಅವರ ಸಿನಿಮಾ ಇದೇ ವರ್ಷ 2024ರ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ ಎಂದು ಮೊದಲು ಘೋಷಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಇದರ ದಿನಾಂಕ ಡಿಸೆಂಬರ್‌ಗೆ ಪೋಸ್ಟ್‌ಪೋನ್ ಆಯಿತು. ಹೀಗದ್ದರೂ ಸಹಿತ ಕೆಲವರು ಸಿನಿಮಾ ಡಿಸೆಂಬರ್‌ಗೆ ರಿಲೀಸ್ ಆಗುವುದು ಅನುಮಾನ, ಮತ್ತೆ ಪೋಸ್ಟ್‌ಪೋನ್ ಆಗಲಿದೆ 'ಪುಷ್ಪಾ-2' ಸಿನಿಮಾದ ಬಿಡುಗಡೆಯ ದಿನಾಂಕ ಎಂದೆಲ್ಲ ವದಂತಿಗಳನ್ನು ಹಬ್ಬಿಸುತ್ತಿದ್ದರು.

ಇಂದು ಬಿಡುಗಡೆಯಾದ 'ಪುಷ್ಪಾ-2 'ಹೊಸ ಪೋಸ್ಟರ್‌ನಲ್ಲಿ ಈ ಅನುಮಾನ, ವದಂತಿಗಳಿಗೆ ತೆರೆ ಎಳೆಯಲಾಗಿದೆ. ಈ ಪೋಸ್ಟರ್‌ನಲ್ಲಿ ಸಿನಿಮಾ ಡಿಸೆಂಬರ್ ಮೊದಲ ವಾರ (ಡಿಸೆಂಬರ್ 6) ಬಿಡುಗಡೆ ಆಗುವುದು ನೂರಕ್ಕೆ ನೂರರಷ್ಟು ಖಚಿತ ಎಂದು ತಿಳಿಸಲಾಗಿದೆ. ದಿನಾಂಕ ಸಹಿತ ಪೋಸ್ಟರ್ ಬಿಡುಗಡೆ ಆಗಿದ್ದರಿಂದ ವದಂತಿ ಹಬ್ಬಿಸುತ್ತಿದ್ದವರ ಬಾಯಿಗೆ ಬೀಗ ಹಾಕಲಾಗಿದೆ.

ಬಿಡುಗಡೆಗೆ 50 ದಿನಗಳು ಬಾಕಿ: ರಶ್ಮಿಕಾ

ಸದ್ಯ ಪೋಸ್ಟರ್ ಅನ್ನು ಪುಷ್ಪಾ-2 ನಟಿ ರಶ್ಮಿಕಾ ಮಂದಣ್ಣಾ (Actress Rashmika Mandanna) ಅವರು ಸಹ ಶೇರ್ ಮಾಡಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಗೆ 50 ದಿನಗಳು ಬಾಕಿ ಇವೆ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲು ಅರ್ಜುನ್ ಅವರು ಹಂಚಿಕೊಂಡ ಪೋಸ್ಟ್‌ಗೆ ಸಾಕಷ್ಟು ಲೈಕ್ಸ್‌ಗಳು ಬಂದಿವೆ. ನವೆಂಬರ್‌ನಿಂದ ಸಿನಿಮಾದ ಭರ್ಜರಿ ಪ್ರಮೋಷನ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ಈ ಪುಷ್ಪಾ -2 ದಿ ರೂಲ್ ಸಿನಿಮಾ ಅನ್ನು ಸುಕುಮಾರ್ ನಿರ್ದೇಶಿಸುತ್ತಿದ್ದಾರೆ. ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಕರ್ನಾಟಕದ ಮೂಲದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದಾರೆ. ನಟಿ ಅನಸೂಯಾ, ರಾವ್ ರಮೇಶ್, ಫಹಾದ್ ಫಾಸಿಲ್ ಇನ್ನಿತರ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+