ತಗ್ಗೋದೇ ಇಲ್ಲ ಎಂದ ಅಲ್ಲು ಅರ್ಜುನ್‌, ಸ್ಟಾರ್‌ ಆದ್ರೆ ನಂಗೇನು? ಎಂದ ಸೆಕ್ಯುರಿಟಿ; ವಿಡಿಯೋ ವೈರಲ್‌

ʼಪುಷ್ಪʼ ಸಿನಿಮಾ ಖ್ಯಾತಿಯ ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಅವರ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹೊರಗಡೆ ಬಂದಾಗ ಆಟಿಟ್ಯೂಡ್‌ ತೋರಿಸುತ್ತಾರೆ ಎನ್ನುವ ಆರೋಪವಿದೆ. ಈ ವೈರಲ್‌ ವಿಡಿಯೋದಲ್ಲಿ ಅಲ್ಲು ಅರ್ಜುನ್‌ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತೀಚೆಗೆ ಏರ್‌ಪೋರ್ಟ್‌ಗೆ ಹೋದಾಗ ಈ ಘಟನೆ ನಡೆದಿದ್ದು, ಅಲ್ಲು ಅರ್ಜುನ್‌ ತಗ್ಗೋದೇ ಇಲ್ಲ ಎಂದಿದ್ದಾರೆ. ಆದರೆ ನೀನು ಸ್ಟಾರ್‌ ಆದ್ರೆ ನಂಗೇನು? ಎಂದು ನಿಯಮ ಪಾಲಿಸುವಂತೆ ಏರ್‌ಪೋರ್ಟ್‌ ಸಿಬ್ಬಂದಿ ತಿರುಗೇಟು ನೀಡಿರುವ ವಿಡಿಯೋ ಹರಿದಾಡುತ್ತಿದೆ.

ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಅವರ ತಗ್ಗೇದೇ ಲೇ (ತಗ್ಗೋದೇ ಇಲ್ಲ) ಎನ್ನುವ ಡೈಲಾಗ್‌ ಸಖತ್‌ ಫೇಮಸ್‌ ಆಗಿದೆ. ಇದು ರಾಷ್ಟ್ರಮಟ್ಟದಲ್ಲಿ ಟ್ರೆಂಡ್‌ ಕೂಡ ಆಗಿತ್ತು. ಮುಂಬೈ ವಿಮಾನ ನಿಲ್ದಾಣದಕ್ಕೆ ಅಲ್ಲು ಅರ್ಜುನ್‌ ಹೋಗಿದ್ದಾಗ ಮುಖಕ್ಕೆ ಮಾಸ್ಕ್‌ ಹಾಕಿಕೊಂಡಿದ್ದರು. ಜೊತೆಗೆ ತನ್ನ ಟೀಂ ಕೂಡ ಇತ್ತು. ಅಲ್ಲು ಅರ್ಜುನ್‌ ಏಕಾಏಕಿ ಏರ್‌ಪೋರ್ಟ್‌ ಪ್ರವೇಶಿಸಲು ಮುಂದಾಗಿದ್ದಾರೆ. ಆಗ ಅಲ್ಲಿನ ಭದ್ರತಾ ಸಿಬ್ಬಂದಿ ನಟ ಅಲ್ಲು ಅರ್ಜುನ್‌ ಅವರನ್ನು ತಡೆದಿದ್ದಾರೆ. ಮುಖ ತೋರಿಸಿ ಹೋಗುವಂತೆ ಖಡಕ್‌ ಆಗಿ ಹೇಳಿದ್ದಾರೆ.

actor-allu-arjun-argues-with-mumbai-airport-security-over-id-check

ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಅಲ್ಲು ಅರ್ಜುನ್ ಅವರನ್ನು ತಡೆದು ಐಡಿಯೊಂದಿಗೆ ಮುಖ ತೋರಿಸುವಂತೆ ಕೇಳಿದರು. ಆಗ ನಟ ಅಲ್ಲು ಆರಂಭದಲ್ಲಿ ಹಿಂಜರಿದರು. ಅಲ್ಲದೇ ತಮ್ಮ ಸಹಾಯಕರು ಅವರು ಅಲ್ಲು ಅರ್ಜುನ್ ಎಂದು ಅಧಿಕಾರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಆಗ ಆ ಅಧಿಕಾರಿ ಯಾರಾದರೂ ಆಗಿರಲಿ ಮುಖ ತೋರಿಸಿ ಎಂದು ಖಡಕ್‌ ಆಗಿ ಹೇಳಿದ್ದು, ನಟ ಅಂತಿಮವಾಗಿ ಮುಖ ತೋರಿಸಿದ್ದಾರೆ. ಅದು ಒಂದೇ ಸೆಕೆಂಡ್‌ನಲ್ಲಿ ಮುಖ ತೋರಿಸಿ ಮಾಸ್ಕ್‌ ಹಾಕಿಕೊಂಡಿದ್ದಾರೆ.

ಆದರೆ ಈ ವಿಡಿಯೋ ವೈರಲ್‌ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಹ-ಪ್ರಯಾಣಿಕರು ಫೋಟೋಗಳಿಗಾಗಿ ಸೆಲೆಬ್ರಿಟಿಗಳಿಗೆ ಕಿರುಕುಳ ನೀಡುವುದನ್ನು ತಪ್ಪಿಸಲು ತಮ್ಮ ಮುಖಗಳನ್ನು ಮುಚ್ಚಿಕೊಳ್ಳಬಹುದು ಎಂದಿದ್ದಾರೆ. ಆದರೆ ಭದ್ರತಾ ತಪಾಸಣೆಯಲ್ಲಿ, ಫೇಸ್ ಐಡಿ ನಿಯಮಗಳನ್ನು ಯಾರೇ ಆದರೂ ತಪ್ಪಿಸಬಾರದು. ಯಾರೇ ಆದರೂ ನಿಯಮ ಒಂದೇ ಎಂದಿದ್ದಾರೆ. ಯಾರನ್ನಾದರೂ ಸರಿಯಾಗಿ ಮುಖ ತೋರಿಸದೆ ಸುರಕ್ಷಿತ ವಲಯಕ್ಕೆ ಅನುಮತಿಸಿದರೆ, ಅದು ನಮಗೆ ಅಸುರಕ್ಷಿತ ಭಾವನೆಯನ್ನುಂಟು ಮಾಡುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

"ಯಾರನ್ನೂ ಕೇರ್‌ ಮಾಡದ ಭದ್ರತಾ ಸಿಬ್ಬಂದಿಗೆ ತಕ್ಷಣವೇ ವೇತನ ಹೆಚ್ಚಳ ನೀಡಬೇಕು" ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ನಟನನ್ನು ಮತ್ತೆ ಬಂಧಿಸಿ ಎಂದಿದ್ದಾರೆ. ಪುಷ್ಪ 2 ಪ್ರದರ್ಶನದ ವೇಳೆ ಚಿತ್ರಮಂದಿರದಲ್ಲಿ ಜನಸಮೂಹದ ಕಡೆಗೆ ಮುಖ ತೋರಿಸಿ ಜನಸಂದಣಿಯ ನಡುವೆ ಮೆರವಣಿಗೆ ನಡೆಸುವುದರಲ್ಲಿ ಅವನಿಗೆ ಯಾವುದೇ ತೊಂದರೆ ಇರಲಿಲ್ಲ ಎಂದು ಹಳೆಯ ಘಟನೆ ನೆನಪು ಮಾಡಿದ್ದಾರೆ. ನೀವಿನ್ನೂ ಪುಷ್ಪ ಸೆಟ್‌ನಲ್ಲೇ ಇದ್ದಂತಿದೆ. ಅದರಿಂದ ಹೊರಬನ್ನಿ ಎಂದೂ ಅಲ್ಲು ಕಾಲೆಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+