Ajay Rao: ಮದುವೆಯಾದ ವರ್ಷದೊಳಗೆ ಡಿವೋರ್ಸ್‌: ಶಾಕಿಂಗ್‌ ಸತ್ಯ ಬಿಚ್ಚಿಟ್ಟ ನಟ ಅಜಯ್‌ ರಾವ್‌

ಕನ್ನಡದ ಎಕ್ಸ್‌ಕ್ಯೂಸ್‌ ಮಿ, ತಾಜ್‌ಮಹಲ್‌ ಅಂತಹ ಹಿಟ್‌ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿರುವ ನಟ ಅಜಯ್‌ ರಾವ್‌ ಅವರು ಹಲವು ವರ್ಷಗಳ ಬಳಿಕ ಕೆಲ ಶಾಕಿಂಗ್‌ ವಿಚಾರಗಳನ್ನ ಬಹಿರಂಗಪಡಿಸಿದ್ದಾರೆ. ತಮ್ಮ ಮದುವೆ ವಿಚಾರವಾಗಿಯೂ ಮಾತನಾಡಿರುವ ಅವರು ಯಾರಿಗೂ ತಿಳಿಯದ ಗುಟ್ಟು ಬಿಚ್ಚಿಟ್ಟಿದ್ದಾರೆ. ಸದ್ಯ ತಮ್ಮ ಪತ್ನಿ ಹಾಗೂ ಮುದ್ದಾದ ಮಗುವಿನೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿರುವ ಅಜಯ್‌ ರಾವ್‌ ಅವರು ಡಿವೋರ್ಸ್‌ ಬಗ್ಗೆಯೂ ಅಚ್ಚರಿ ವಿಚಾರಗಳನ್ನು ರಿವೀಲ್‌ ಮಾಡಿದ್ದಾರೆ.

ರ‍್ಯಾಪಿಡ್ ರಶ್ಮಿ ಅವರ ʼಜಸ್ಟ್‌ ಕ್ಯೂರಿಯಸ್‌ʼನಲ್ಲಿ ನಟ ಅಜಯ್‌ ರಾವ್‌ ಈ ಬಗ್ಗೆ ಮಾತನಾಡಿದ್ದಾರೆ. ʼನಾನು ಶಾಸ್ತ್ರ ಸಂಪ್ರದಾಯಗಳನ್ನ ನಂಬುತ್ತೇನೆ. ಆದರೆ ಅದನ್ನು ಅಷ್ಟಾಗಿ ಪಾಲಿಸುವುದಿಲ್ಲ. ನಾನು ಯಾವ ಮುಹೂರ್ತ ಎಂದೆಲ್ಲ ನೋಡಲಿಲ್ಲ. ನನಗೆ ಜ್ಯೋತಿಷ್ಯ ಕೂಡ ಬರುತ್ತೆ. ಈ ಬಗ್ಗೆ ನಾನು ನೋಡಿದಾಗ ಹೌದಲ್ಲಾ, ಇದು ಕೆಟ್ಟ ಮುಹೂರ್ತ ಅನ್ನೋದು ಆಮೇಲೆ ಗೊತ್ತಾಗಿದೆ. ಹಾಗಾಗಿ ಆ ಘಳಿಗೆಯಲ್ಲಿ ನಾನೇನು ಮಾಡ್ತೀನೋ ಅದಕ್ಕೆ ಕೃಷ್ಣಾರ್ಪಣಮಸ್ತು ಅಂತೇನೆ. ಕೆಲಸ ನನ್ನದು, ಫಲ ನಿನ್ನದು ಎಂದೇ ಹೆಜ್ಜೆ ಇಟ್ಟಿದ್ದೇನೆ. ಕೆಟ್ಟ ಮುಹೂರ್ತ ಎಂದ ಸಿನಿಮಾ ಕೂಡ ಬ್ಲಾಕ್‌ ಬಸ್ಟರ್‌ ಆಯ್ತುʼ ಎಂದು ಅಜಯ್‌ ಹೇಳಿದ್ದಾರೆ.

Actor Ajay Rao Recalls People Predicting His Divorce Within A Year

ʼನನ್ನ ಮೊದಲ ಪ್ರೊಡಕ್ಷನ್‌ ಸಿನಿಮಾ ಕೃಷ್ಣಲೀಲಾ ಕೂಡ ಕೆಟ್ಟ ಮುಹೂರ್ತದಲ್ಲಿ ಸೆಟ್ಟೇರಿತ್ತು, ಇನ್ನು ಯುದ್ಧಕಾಂಡ ಸಿನಿಮಾ ಯಾವ ಮುಹೂರ್ತದಲ್ಲಿ ಮಾಡಿದೆ ಅನ್ನೋದು ನನಗೆ ಇಲ್ಲಿವರೆಗೆ ಗೊತ್ತೇ ಇಲ್ಲ. ಕೃಷ್ಣಲೀಲಾ ಸಿನಿಮಾ ರಿಲೀಸ್‌ಗೂ ಮುನ್ನ ಕೆಟ್ಟ ಮುಹೂರ್ತದಲ್ಲಿ ಮಾಡಿದ್ದೀಯ, ಈ ಸಿನಿಮಾ ಡಿಸಾಸ್ಟರ್‌ ಆಗುತ್ತೆ ಅಂದ್ರು. ನನ್ನ ಮದುವೆಯಾಗಿದ್ದು ಕೂಡ ಕೆಟ್ಟ ಮುಹೂರ್ತದಲ್ಲಿ, ಒಂದು ವರ್ಷನೂ ಇರಲ್ಲ, ಡಿವೋರ್ಸ್‌ ಆಗ್ತೀರಿ ಅಂತೆಲ್ಲ ಹೇಳಿದ್ರುʼ ಎಂದು ಅಜಯ್‌ ರಾವ್‌ ನೆನೆದಿದ್ದಾರೆ.

ʼನಮ್ಮ ಮನೆ ದೇವರು ಶಿವ, ನನಗೆ ಇಷ್ಟವಾದ ದೇವರು ಕೃಷ್ಣ. ನನ್ನ ಮೊದಲ ಸಿನಿಮಾ ಎಕ್ಸ್‌ಕ್ಯೂಸ್‌ ಮಿ ಬ್ಲಾಕ್‌ಬಸ್ಟರ್‌ ಆದಾಗ ನನ್ನ ತಲೆ ತಿರುಗಿದ್ದೂ ಇದೆ. ಆಗ ನಾನೊಬ್ಬ ಸ್ಟಾರ್‌ ಎಂಬ ಭಾವನೆ ಬಂದಿದ್ದು ಕೂಡ ಇದೆ. ಅದಾದ ಮೇಲೆ ಬೀಳುವ ಪೆಟ್ಟುಗಳು ಒಳ್ಳೆಯ ಪಾಠಗಳನ್ನು ಕಲಿಸಿಕೊಡುತ್ತವೆ. ಮುಖ್ಯವಾಗಿ ಯಾವುದೂ ಶಾಶ್ವತವಲ್ಲ ಅನ್ನೋದು ತಿಳಿಯುತ್ತೆ. ಸಕ್ಸಸ್‌ ಆದಮೇಲೆ ಫೇಲ್ಯೂರ್‌ ಆಗಲೇಬೇಕು. ಅದೇ ರೀತಿ ಫೇಲ್ಯೂರ್‌ ಆದ ನಂತರ ಯಶಸ್ಸು ಕೂಡ ಬರಲೇಬೇಕುʼ ಎಂದು ಅಭಿಪ್ರಾಯಪಟ್ಟಿದ್ದಾರೆ.

Actor Ajay Rao Recalls People Predicting His Divorce Within A Year

ʼಈ ಕಾಲಚಕ್ರದಲ್ಲಿ ಯಾವುದನ್ನೂ ನಾವು ಹೆಚ್ಚು ಸಂಭ್ರಮಿಸುವಂತಿಲ್ಲ, ತಲೆ ಮೇಲೆ ಹೊತ್ತು ನೋವು ಕೂಡ ಪಡುವಂತಿಲ್ಲ. ನನ್ನ ಆರಂಭಿಕ ದಿನಗಳಲ್ಲಿ ಈ ನೀತಿಯನ್ನು ನಾನು ಮರೆತಿದ್ದೂ ಇದೆ. ಆ ಮೇಲೆ ನಿರಂತರ ವಿಫಲ ಕಂಡು ನಂತರ ತಾಜ್‌ಮಹಲ್‌ನಲ್ಲಿ ಮತ್ತೆ ಸಕ್ಸಸ್‌ ಕಂಡೆ. ಅಂದಿನಿಂದ ಇಂದಿನವರೆಗೂ ನನಗೆ ಯಾವ ಯಶಸ್ಸು ಅಥವಾ ಫೇಲ್ಯೂರ್‌ ಕೂಡ ಮ್ಯಾಟರ್‌ ಆಗಲೇ ಇಲ್ಲʼ ಎಂದು ಅಜಯ್‌ ರಾವ್‌ ತಮ್ಮ ಸಿನಿ ಜರ್ನಿಯನ್ನು ತೆರೆದಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+