ಓಡ್ರೋ..ಓಡ್ರೋ ಇದು ಸರ್ಜಾ ಅಡ್ಡ.. ಆಯ್ತು, ಶೀಘ್ರದಲ್ಲೇ ಮತ್ತೊಂದು ಹಾಡು ರಿಲೀಸ್- ಧ್ರುವ ಸರ್ಜಾ
ಬೆಂಗಳೂರು, ಆಗಸ್ಟ್ 14: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಶೂಟಿಂಗ್ ಬಿಡುವಿನ ವೇಳೆಯಲ್ಲಿ ಪ್ರತಿ ಭಾನುವಾರ ತಮ್ಮ ಅಭಿಮಾನಿಗಳನ್ನು ಭೇಟಿಯಾಗುತ್ತಾರೆ. ಧ್ರುವ ಸರ್ಜಾ ಭೇಟಿಯಾಗಲು ಕರ್ನಾಟಕದ ವಿವಿಧ ಭಾಗಗಳಿಂದ ಜನರು ಅವರ ಮನೆ ಬಳಿ ಬರುತ್ತಾರೆ. ಮೆಚ್ಚಿನ ನಟನನ್ನು ಭೇಟಿಯಾದ ಖುಷಿಯಲ್ಲಿ ಧ್ರುವ ಸರ್ಜಾ ಅವರ ಹಾಡು ಹಾಗೂ ಡೈಲಾಗ್‌ಗಳನ್ನು ಹೇಳುತ್ತಾರೆ. ಧ್ರುವ ಸರ್ಜಾ ಕೂಡ ಅದನ್ನು ತುಂಬಾ ತಾಳ್ಮೆಯಿಂದ ಕೇಳುತ್ತಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ.
ಇತ್ತೀಚಿಗೆ ಅಭಿಮಾನಿಯೊಬ್ಬರು ಧ್ರುವ ಸರ್ಜಾ ಮುಂದೆ ಓಡ್ರೋ..ಓಡ್ರೋ..ಓಡ್ರೋ ಇದು ಸರ್ಜಾ ಅಡ್ಡ, ಸರ್ಜಾ ಬಂದ್ರು ಸರ್ಜಾ ಆಕ್ಷನ್ ಪ್ರಿನ್ಸ್ ಸರ್ಜಾ ಅಂತ ಬೇರೆ ಹಾಡುಗಳನ್ನು ಸೇರಿಸಿ ತಮ್ಮದೇ ಧಾಟಿಯಲ್ಲಿ ಹಾಡಿದ ವಿಡಿಯೋ ಒಂದು ಸಖತ್ ವೈರಲ್ ಆಗಿತ್ತು. ಈ ಬಗ್ಗೆ ಸ್ವತಃ ಧ್ರುವ ಸರ್ಜಾ ಅವರೇ ಮಾತನಾಡಿದ್ದಾರೆ.

ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, 'ಆತ ಬಂದು ಒಂದೇ ಒಂದು ಹಾಡು ಹೇಳುತ್ತೇನೆ ಅಂದ. ಈಗ ಬೇಡ ಜನ ಜಾಸ್ತಿ ಇದ್ದಾರೆ ಅಂತಾ ನಾನು ಹೇಳಿದೆ. ಇಲ್ಲ ಬಾಸ್ ಹಾಡಬೇಕು ಅಂದಾಗ ಬೇಡ ಗುರು ಕೊನೆಯಲ್ಲಿ ಹಾಡು ಅಂದೆ. ಕೊನೆಯಲ್ಲಿ ಜೋರಾಗಿ 'ಹಾಡಬೇಕು ಈಗ' ಅಂದಾಗ ಹು ಸರಿ ಹಾಡು ಅಂತಾ ಹೇಳಿದೆ. ಆಗ ಹಾಡು ಹಾಡೋಕೆ ಶುರು ಮಾಡಿದರು.
ಒಂದು ನಿಮಿಷ ಆಯ್ತು, ಎರಡು ನಿಮಿಷ ಆಯ್ತು, ಮೂರು ನಿಮಿಷ ಆಯ್ತು ಹೇಳ್ತಾನೇ ಇದ್ರು. ನಾನು ಏನು ಹೇಳೋಕೆ ಹೊಗಲಿಲ್ಲ. ಹಾಡು ಹಾಡಿದ ಮೇಲೆ ಎಲ್ಲಾ ಆಗಿ ಮುಂದೆ ಹೋದರು. ಆಮೇಲೆ ಬೇರೆಯವರು ಬಂದು ಹೋದರು. ಆದರೆ ಈತ ಮತ್ತೆ ಕೊನೆಯಲ್ಲಿ, ಅದು ಮೂರು ನಾಲ್ಕು ಗಂಟೆ ಬಳಿಕ ಕೊನೆಯಲ್ಲಿ ಬಂದು ಮತ್ತೆ ಇನ್ನೊಂದು ಹಾಡು ಹಾಡ್ಲಾ ಎಂದು ಬಿಟ್ಟರು.

ಆಗ ನಾನು ಬ್ರೋ ಬೇಕಿದ್ದರೆ ಪ್ರತಿ ಭಾನುವಾರ ಒಂದೊಂದು ಹಾಡು ಹೇಳು. ಆದರೆ ಈ ಭಾನುವಾರ ಸಾಕು ಬಿಟ್ಟು ಬಿಡು ಅಂದೆ. ಮತ್ತೆ ಮುಂದಿನ ಭಾನುವಾರ ಬಂದರು. ಹೀಗಾಗಿ ಮುಂದಿನ ವಾರ ಮತ್ತೊಂದು ಹಾಡು ಬಿಡುಗಡೆಯಾಗುತ್ತದೆ ಕಾಯ್ತಾಯಿರಿ ಎಂದು ಫಿಲ್ಮೀಬೀಟ್ ಪ್ರೇಕ್ಷಕರಿಗೆ ಧ್ರುವ ಸರ್ಜಾ ಹೇಳಿದ್ದಾರೆ.
ಮಾತು ಮುಂದುವರಿಸಿದ ಧ್ರುವ ಸರ್ಜಾ, ಜನ ನನಗೆ ಪ್ರಾಮಾಣಿಕವಾಗಿ ಸಮಯ ಕೊಡುತ್ತಾರೆ. ಬೇರೆ ಯಾರ ಮನೆ ಮುಂದೆ ಆದರೂ ಹೋಗಿ ಹಾಡು ಹೇಳ್ತಾರಾ..? ನಮ್ಮ ರಾಜ್ಯ ಅಲ್ಲ..ಬೇರೆ ದೇಶದಿಂದ ಬಂದು ಹಾಡು ಹೇಳಿದರೂ ಕೇಳುತ್ತೇನೆ. ಬೇರೆ ಭಾಷೆಯಲ್ಲಿ ಹೇಳಿದರೂ ಸಹ ಅರ್ಥ ಆಗದೇ ಇದ್ದಾಗಲೂ ಕೇಳುತ್ತೇನೆ. ಎಲ್ಲರಿಂದ ಏನಾದರೂ ಒಂದು ಕಲಿಯುವುದು ಇರುತ್ತದೆ. ಹೀಗಾಗಿ ಅವರಿಂದ ನಾನೇನು ಕಲಿಯುತ್ತಿದ್ದೇನೆ ಅಂದರೆ ವಿಶ್ವಾಸ. ಏನೇ ಇದ್ದರೂ ಕಾನ್ಫಿಡೆಂಟ್ ಆಗಿ ಹೇಳುತ್ತಾರೆ. ಇವರನ್ನೆಲ್ಲಾ ರೇಗಿಸುವವರಿಗೆ ಅವರಂತಹ ವಿಶ್ವಾಸ ಇದೆಯಾ ಅಂತಾ ಧ್ರುವ ಸರ್ಜಾ ಪ್ರಶ್ನಿಸಿದ್ದಾರೆ.











Click it and Unblock the Notifications