ವಿಡಿಯೋ: ಸ್ವಾಭಿಮಾನಿ ಕರ್ನಾಟಕ ನನ್ನದಾಗಬೇಕು: ನರೇಂದ್ರ ಬಾಬು

Posted By:
Subscribe to Oneindia Kannada
   ನನ್ನ ಕನಸಿನ ಕರ್ನಾಟಕ : ನೆ ಲ ನರೇಂದ್ರ ಬಾಬು, ಕಾಂಗ್ರೆಸ್ ನ ಮಾಜಿ ಶಾಸಕ, ಈಗಿನ ಬಿಜೆಪಿ ನಾಯಕ | Oneindia Kannada

   ಸ್ವಾವಲಂಬಿ ಮತ್ತು ಸ್ವಾಭಿಮಾನಿ ಕರ್ನಾಟಕ ನಮ್ಮದಾಗಬೇಕು ಎಂಬುದು ಮಾಜಿ ಶಾಸಕ ಈಗಿನ ಬಿಜೆಪಿ ನಾಯಕ ನೆ.ಲ.ನರೇಂದ್ರ ಬಾಬು ಅವರು ಕನಸು.

   ನರೇಂದ್ರ ಬಾಬು ಅವರ ಕನಸಿನ ಕರ್ನಾಟಕ ಶೋಷಣೆ ರಹಿತವಾಗಿರಬೇಕು, ಪ್ರೀತಿ ಪೂರಿತವಾಗಿರಬೇಕು. ಜಾಗೃತ ಜನಗಳಿಂದ ಅಭಿವೃದ್ಧಿ ಪಥದತ್ತ ಏರುಗತಿಯಲ್ಲಿರಬೇಕು.

   ವಿಡಿಯೋ: ಉಪೇಂದ್ರ ಕನಸಿನ ಕರ್ನಾಟಕ ಹೇಗಿರಬೇಕು ಅಂದರೆ...

   ನರೇಂದ್ರ ಅವರ ಪ್ರಕಾರ ರಾಜ್ಯದ ರೈತ ನೆಮ್ಮದಿಯಿಂದ ಬದುಕುವ ಪೂರಕ ವಾತಾವರಣ ನಿರ್ಮಾಣವಾಗಬೇಕು, ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರಕಬೇಕು. ಕೇವಲ ರೈತರಷ್ಟೆ ಅಲ್ಲ, ಯುವಜನರು, ಮಹಿಳೆಯರು ಸುಭಿಕ್ಷವಾಗಿ ಜೀವಿಸುವ ವಾತಾವರಣ ಕರ್ನಾಟಕದಲ್ಲಿ ನಿರ್ಮಾಣವಾಗಬೇಕು ಎಂಬ ಕನಸು ಅವರದ್ದು.

   video: narendra babu shares his dream about karnataka

   'ನನ್ನ ಕನಸಿನ ಕರ್ನಾಟಕ' : ವಿಡಿಯೋ ಮಾಡಿ ಕಳಿಸಿ

   ಗ್ರಾಮ ಪಂಚಾಯಿತಿಯಿಂದ ಹಿಡಿದು ಮುಖ್ಯಮಂತ್ರಿಯ ವರೆಗೆ ಸಹೃದಯಿ, ಜನಾನುರಾಗಿ ನಾಯಕರುಗಳು ಆರಿಸಿ ಬರಬೇಕು. ಕರ್ನಾಟಕ ತನ್ನ ಸಾಂಸ್ಕೃತಿಕ ಇತಿಹಾಸವನ್ನು ಕಳೆದುಕೊಳ್ಳದೆಯೇ ಅಭಿವೃದ್ಧಿ ಹೊಂದಿ ವೀಶ್ವಮಾನ್ಯ ಎನಿಸಿಕೊಳ್ಳಬೇಕು ಎಂಬುದು ಬಿಜೆಪಿ ಮುಖಂಡ ನೆ.ಲ.ನರೇಂದ್ರ ಬಾಬು ಅವರ ಕನಸು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   BJP leader N.L.Narendra Babu shares his dream about Karnataka. How it should be portrayed in global level and national level, he has big dream of prosperous Karnataka with maximum safety to women.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ