ವಿಡಿಯೋ : ರವಿ ಸುಬ್ರಮಣ್ಯ ಅವರ ಕನಸಿನ ಕರ್ನಾಟಕ ಹೇಗಿರಬೇಕು?

Posted By: Gururaj
Subscribe to Oneindia Kannada
   ನನ್ನ ಕನಸಿನ ಕರ್ನಾಟಕ ರವಿ ಸುಬ್ರಮಣ್ಯ | Oneindia Kannada

   ವಿಧಾನಸಭೆ ಚುನಾವಣೆಯ ಹೊತ್ತಿಲಲ್ಲಿ ನಿಂತಿದ್ದೇವೆ. ನಮ್ಮ ರಾಜ್ಯ ಹೇಗೆ ಅಭಿವೃದ್ಧಿಯಾಗಬೇಕು? ಎಂಬ ಬಗ್ಗೆ ನಮ್ಮದೇ ಆದ ಕನಸು ಇರುತ್ತದೆ. ಅದಕ್ಕಾಗಿ ಯಾವ ಪಕ್ಷಕ್ಕೆ ಮತ ನೀಡಬೇಕು? ಎಂಬುದನ್ನು ತೀರ್ಮಾನಿಸಿ ಮತದಾನ ಮಾಡುತ್ತೇವೆ.

   ಬಸವನಗುಡಿ ಕ್ಷೇತ್ರದ ಬಿಜೆಪಿ ಶಾಸಕ ರವಿ ಸುಬ್ರಮಣ್ಯ ಅವರು ಅವರ ಕನಸಿನ ಕರ್ನಾಟಕ ಹೇಗಿರಬೇಕು? ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಎರಡು ಬಾರಿ ಕ್ಷೇತ್ರದಲ್ಲಿ ಗೆದ್ದಿರುವ ಅವರು ಕ್ಷೇತ್ರ, ರಾಜ್ಯದ ಅಭಿವೃದ್ಧಿ ಬಗ್ಗೆ ನಿರೀಕ್ಷೆಗಳನ್ನು ಹೊಂದಿದ್ದಾರೆ.

   'ನನ್ನ ಕನಸಿನ ಕರ್ನಾಟಕ' : ವಿಡಿಯೋ ಮಾಡಿ ಕಳಿಸಿ

   ರವಿ ಸುಬ್ರಮಣ್ಯ ಅವರ ಕನಸಿನ ಕರ್ನಾಟಕ ಹೇಗಿರಲಿದೆ? ಎಂಬುದನ್ನು ವಿಡಿಯೋದಲ್ಲಿ ನೋಡಿ

   Ravi Subramanya

   ನನ್ನ ಕನಸಿನ ಕರ್ನಾಟಕ ಎಂದರೆ ಅಭಿವೃದ್ಧಿಯ ಕರ್ನಾಟಕ. ರಾಜ್ಯದ ಎಲ್ಲಾ ಜನರ ಅಭಿವೃದ್ಧಿಯ ಕರ್ನಾಟಕವಾಗಬೇಕು. ಯವಕರು, ರೈತರು, ಮಹಿಳೆಯರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕು. ಕರ್ನಾಟಕ ಮತ್ತು ದೇಶದ ಬೆನ್ನೆಲುಬು ರೈತ. ಅವರಿಗೆ ಅಗತ್ಯವಿರುವ ವಿದ್ಯುತ್, ನೀರಿನ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಗಮನ ಹರಿಸಬೇಕು.

   ವಿಡಿಯೋ: ಉಪೇಂದ್ರ ಕನಸಿನ ಕರ್ನಾಟಕ ಹೇಗಿರಬೇಕು?

   ದೇಶದಲ್ಲಿ ಯುವ ಸಮಯದಾಯ ಹೆಚ್ಚಿದೆ. ದುಡಿಯುವ ಕೈಗಳಿಗೆ ಕೆಲಸ ಸಿಗಬೇಕು. ಹಳ್ಳಿಯಿಂದ ಸಾಕಷ್ಟು ವಲಸೆ ಆಗುತ್ತಿದೆ. ಯುವಜನರು ಹಳ್ಳಿಗಳನ್ನು ಬಿಟ್ಟು ಬರದಂತೆ ಅವರಿಗೆ ಅಲ್ಲೇ ಉದ್ಯೋಗ ಸಿಗುವಂತೆ ಮಾಡಬೇಕು.

   ರವಿ ಸುಬ್ರಮಣ್ಯ ಸಂದರ್ಶನ ಓದಿ

   ಹಳ್ಳಿಗಳು ಉಳಿಯಬೇಕು, ಕೃಷಿ ಜೊತೆ ಬೇರೆ ಉದ್ಯೋಗ ಸೃಷಿಯಾಗಬೇಕು. ನಗರ ಪ್ರದೇಶದ ಒತ್ತಡ ಕಡಿಮೆಯಾಗಬೇಕು. ಕಸ ಮುಕ್ತ ಕರ್ನಾಟಕ ನಿರ್ಮಾಣವಾಗಬೇಕು. ಆರೋಗ್ಯ ಸೇವೆಗಳು ಉತ್ತಮವಾಗಿ ಸಿಗಬೇಕು ಎಂದು ರವಿ ಸುಬ್ರಮಣ್ಯ ಕನಸನ್ನು ತೆರೆದಿಟ್ಟಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Basavanagudi BJP MLA B.L.Ravi Subramanya shares his dream about Karnataka. In a video he said that farmers to get power and water. Job creation should be priority of the government.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ