Get Updates
Get notified of breaking news, exclusive insights, and must-see stories!

ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ: ಸಿಎಂ ಯಡಿಯೂರಪ್ಪ ಘೋಷಣೆ?

Recommended Video

      ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ | Oneindia Kannada

      ಬೆಂಗಳೂರು, ಮೇ 17: ಕರ್ನಾಟಕ ರಾಜ್ಯದ 24 ನೇ ಮುಖ್ಯಮಂತ್ರಿಯಾಗಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪನವರು(75) ಇಂದು(ಮೇ 17) ಬೆಳಿಗ್ಗೆ 9 ಗಂಟೆಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ.

      ರಾಜಭವನದ ಗ್ಲಾಸ್ ಹೌಸ್ ನಲ್ಲಿ ನಡೆದ ಸಮಾರಂಭದಲ್ಲಿ ಯಡಿಯೂರಪ್ಪರು ಪ್ರಮಾಣ ವಚನ ಸ್ವೀಕರಿಸಿದ್ದು, ಅವರೊಂದಿಗೆ ಯಾವುದೇ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿಲ್ಲ. ಬಿಜೆಪಿ ಮುಖಂಡರಾದ ಶ್ರೀರಾಮುಲು, ಗೋವಿಂದ ಕಾರಜೋಳ, ಆರ್ ಅಶೋಕ್ ಮತ್ತು ಕೆ ಎಸ್ ಈಶ್ವರಪ್ಪ ಸಹ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿತ್ತು. ಪ್ರಮಾಣವಚನದ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

      LIVE: BS Yeddyurappa to be worn in as chief minister of Karnataka

      May 17, 2018, 10:53 am IST

      ಮೊದಲ ಕ್ಯಾಬಿನೇಟ್ ಮೀಟಿಂಗ್ ನಲ್ಲಿ ಸಿಎಂ ಯಡಿಯೂರಪ್ಪ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ಮಾಡುವ ನಿರೀಕ್ಷೆಯಿದೆ.
      May 17, 2018, 10:30 am IST

      ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಗೆ ಬಿ ಎಸ್ ಯಡಿಯೂರಪ್ಪ ಆಗಮಿಸಲಿರುವ ಸಾಧ್ಯತೆ ಇರುವುದರಿಂದ ಬಿಜೆಪಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದಿಂದ ತಪಾಸಣೆ ನಡೆಸಲಾಗಿದೆ.
      May 17, 2018, 10:28 am IST

      ಮುಖ್ಯಮಂತ್ರಿ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತು ಅಧಿಕಾರ ಸ್ವೀಕರಿಸಿದ ಬಿ ಎಸ್ ಯಡಿಯೂರಪ್ಪ
      May 17, 2018, 10:16 am IST

      ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ವಿರೋಧಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ನಾಯಕರ ಪ್ರತಿಭಟನೆ
      May 17, 2018, 10:06 am IST

      ವಿಧಾನಸೌಧದ ಮೂರನೇ ಮಹಡಿಯ ಕೊಠಡಿಗೆ ಆಗಮಿಸಿದ ಯಡಿಯೂರಪ್ಪ
      May 17, 2018, 10:05 am IST

      ಮುಖ್ಯ ಕಾರ್ಯದರ್ಶಿ ರತ್ನಪ್ರಭಾರಿಂದ ಬಿ ಎಸ್ ಯಡಿಯೂರಪ್ಪ ಅವರಿಗೆ ಸ್ವಾಗತ.
      May 17, 2018, 9:12 am IST

      ಮೂರನೇ ಭಾರೀ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ
      May 17, 2018, 9:10 am IST

      ಯಡಿಯೂರಪ್ಪ ಅವರೊಂದಿಗೆ ಯಾವುದೇ ಮಂತ್ರಿಗಳೂ ಪ್ರಮಾಣ ವಚನ ಸ್ವೀಕರಿಸಿಲ್ಲ.
      May 17, 2018, 9:09 am IST

      ಹಸಿರು ಶಾಲು ಹೊದ್ದ ಯಡಿಯೂರಪ್ಪ ದೇವರು ಮತ್ತು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
      May 17, 2018, 9:03 am IST

      ಬಿ ಎಸ್ ಯಡಿಯೂರಪ್ಪ ಎಂಬ ಹೆಸರಿನವನಾದ ನಾನು... ಎಂದು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಮುಗಿಲುಮುಟ್ಟಿದ ಅಭಿಮಾನಿಗಳ ಹರ್ಷೋದ್ಘಾರ
      May 17, 2018, 9:02 am IST

      ಹಸಿರು ಶಾಲು ಹೊದ್ದು ಪ್ರಮಾಣವಚನ ಸ್ವೀಕರಿಸುತ್ತಿರುವ ಬಿ ಎಸ್ ಯಡಿಯೂರಪ್ಪ.
      May 17, 2018, 9:00 am IST

      ರಾಜಭವನದಲ್ಲಿ ಪ್ರಮಾಣವಚನ ಸಮಾರಂಭ ಆರಭವಾಗಿದ್ದು, ರಾಜ್ಯ ಪಾಲ ವಾಜುಭಾಯ್ ವಾಲಾ ಅವರು ವೇದಿಕೆ ಆರಂಭಿಸಿದ್ದಾರೆ.
      May 17, 2018, 8:55 am IST

      ರಾಜಭವನದೆದುರು ಬಿ ಎಸ್ ಯಡಿಯೂರಪ್ಪ ಅವರನ್ನು ಸ್ವಾಗತಿಸುತ್ತಿರುವ ಬಿಜೆಪಿ ಮುಖಂಡರಾದ ಶ್ರೀರಾಮುಲು ಮತ್ತು ಗೋವಿಂದ ಕಾರಜೋಳ.
      May 17, 2018, 8:53 am IST

      ಈಗಾಗಲೇ ಬಿ ಎಸ್ ಯಡಿಯೂರಪ್ಪನವರು ರಾಜಭವನಕ್ಕೆ ಹಾಜರಾಗಿದ್ದು, ಕಾರ್ಯಕರ್ತರಲ್ಲಿ ಸಂಭ್ರಮ ಮುಗಿಲುಮುಟ್ಟಿದೆ.
      May 17, 2018, 8:49 am IST

      ವಿಧಾನಸಭೆಯಲ್ಲಿ ನಾವು ಬಹುಮತ ಸಾಬೀತುಪಡಿಸುತ್ತೇವೆ. ಯಡಿಯೂರಪ್ಪನವರು 5 ವರ್ಷಗಳ ಕಾಲ ಉತ್ತಮ ಆಡಳಿತ ನೀಡಲಿದ್ದಾರೆ- ಅನಂತ ಕುಮಾರ್, ಕೇಂದ್ರ ಸಚಿವ
      May 17, 2018, 8:34 am IST

      ಯಡಿಯೂರಪ್ಪ ಅವರು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ 9 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
      May 17, 2018, 8:33 am IST

      ರಾಜಭವನಕ್ಕೆ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಸೇರಿದಂತೆ ಹಲವು ನಾಯಕರ ಆಗಮನ
      May 17, 2018, 8:32 am IST

      ಬಿಳಿಯ ಸಫಾರಿ ಸೂಟು ಧರಿಸಿ, ಹಸಿರು ಶಾಲು ಹೊದ್ದಿರುವ ಯಡಿಯೂರಪ್ಪ ಜನರತ್ತ ಕೈ ಬೀಸುತ್ತಾ ರಾಜಭವನಕ್ಕೆ ಆಗಮಿಸುತ್ತಿದ್ದಾರೆ
      May 17, 2018, 8:32 am IST

      ಸಂಜಯನಗರದ ರಾಧಾಕೃಷ್ಣ ದೇವಾಲಯದಿಂದ ರಾಜಭವನತ್ತ ಹೊರಟ ಬಿ.ಎಸ್.ಯಡಿಯೂರಪ್ಪ
      May 17, 2018, 8:31 am IST

      ಮನೆಯಿಂದ ಹೊರಟು ಸಂಜಯನಗರದ ರಾಧಾಕೃಷ್ಣ ದೇವಾಲಯಕ್ಕೆ ಭೇಟಿ ನೀಡಿದ ಯಡಿಯೂರಪ್ಪ
      May 17, 2018, 8:08 am IST

      ಮೇ 15 ರಂದು ಹೊರಬಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38, ಇತರರು 2 ಸ್ಥಾನಗಳಲ್ಲಿ ಜಯಗಳಿಸಿದ್ದರು. ಅತಂತ್ರ ವಿಧಾನಸಭೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಮೈತ್ರಿ ಸರ್ಕಾರ ರಚಿಸಲು ಮುಂದಾಗಿದ್ದವು.
      May 17, 2018, 8:08 am IST

      ಸಂಪೂರ್ಣ ಬಹುಮತವಿಲ್ಲದಿದ್ದರೂ ಯಡಿಯೂರಪ್ಪ ಅವರಿಗೆ ಸರ್ಕಾರ ರಚನೆಗೆ ಆಮಂತ್ರಿಸಿದ ರಾಜ್ಯಪಾಲರ ನಡೆಯನ್ನು ಖಂಡಿಸಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು. ಬೆಳಗ್ಗಿನ ಜಾವ 1:45 ರಿಂದ ಈ ಕುರಿತು ತುರ್ತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಯಡಿಯೂರಪ್ಪ ಅವರ ಪ್ರಮಾಣವಚನಕ್ಕೆ ತಡೆನೀಡಲು ನಿರಾಕರಿಸಿದೆ.
      May 17, 2018, 8:08 am IST

      ಸಂಪೂರ್ಣ ಬಹುಮತವಿಲ್ಲದಿದ್ದರೂ ಯಡಿಯೂರಪ್ಪ ಅವರಿಗೆ ಸರ್ಕಾರ ರಚನೆಗೆ ಆಮಂತ್ರಿಸಿದ ರಾಜ್ಯಪಾಲರ ನಡೆಯನ್ನು ಖಂಡಿಸಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು. ಬೆಳಗ್ಗಿನ ಜಾವ 1:45 ರಿಂದ ಈ ಕುರಿತು ತುರ್ತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಯಡಿಯೂರಪ್ಪ ಅವರ ಪ್ರಮಾಣವಚನಕ್ಕೆ ತಡೆನೀಡಲು ನಿರಾಕರಿಸಿದೆ.
      May 17, 2018, 8:08 am IST

      ಪ್ರಮಾಣ ವಚನದ ಹಿನ್ನೆಲೆಯಲ್ಲಿ ರಾಜಭವನದ ಸುತ್ತ ಬಿಗಿಭದ್ರತೆ ಏರ್ಪಡಿಸಲಾಗಿದೆ.
      May 17, 2018, 8:08 am IST

      ಪ್ರಮಾಣ ವಚನಕ್ಕೆ ಕ್ಷಣಗಣನೆ. ಬಿಜೆಪಿ ಕಾರ್ಯಕರ್ತರಲ್ಲಿ ಮನೆ ಮಾಡಿದ ಸಂಭ್ರಮ
      May 17, 2018, 8:08 am IST

      "ಕರ್ನಾಟಕದ ಸುವರ್ಣ ಘಳಿಗೆ ಬಂದಿದೆ. ಈ ಐತಿಹಾಸಿಕ ದಿನ ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪನವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕರ್ನಾಟಕದ ಜನರು ಬಿ ಎಸ್ ಯಡಿಯೂರಪ್ಪನವರ ಕೈಹಿಡಿದಿದ್ದಾರೆ. ಸರ್ವಾಧಿಕಾರಕ್ಕೆ ಅಂತ್ಯ ಸಿಕ್ಕಿದೆ. ಇನ್ನೇನಿದ್ದರೂ ಜನರ ಸರ್ಕಾರ" -ಡಿ ವಿ ಸದಾನಂದಗೌಡ, ಕೇಂದ್ರ ಸಚಿವ

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+