Get Updates
Get notified of breaking news, exclusive insights, and must-see stories!

ಶಾಂತಿ, ನೆಮ್ಮದಿಯ ಕರ್ನಾಟಕ ನಮ್ಮದಾಗಬೇಕು : ಪೂರ್ಣಿಮಾ ಶ್ರೀನಿವಾಸ್

Recommended Video

      ಶಾಂತಿ, ನೆಮ್ಮದಿಯ ಕರ್ನಾಟಕ ನಮ್ಮದಾಗಬೇಕು : ಪೂರ್ಣಿಮಾ ಶ್ರೀನಿವಾಸ್ | Oneindia Kannada

      ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಮೇ 12ರಂದು ಜನರು ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ. ಜನರಂತೆ ಪಕ್ಷಗಳ ಅಭ್ಯರ್ಥಿಗಳಿಗೂ ತಮ್ಮ ಕನಸಿನ ಕರ್ನಾಟಕ ಹೀಗಿರಬೇಕು ಎಂಬ ಕಲ್ಪನೆ ಇರುತ್ತದೆ.

      ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ಅವರು ತಮ್ಮ ಕನಸಿನ ಕರ್ನಾಟಕ ಹೇಗಿರಬೇಕು? ಎಂದು ಮಾತನಾಡಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆ.ಆರ್.ಪುರ ವಾರ್ಡ್‌ನ ಸದಸ್ಯರಾದ ಪೂರ್ಣಿಮಾ ಶ್ರೀನಿವಾಸ್ ಅವರು 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

      ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

      'ನಾವು ಹೊರದೇಶಗಳಿಗೆ ಹೋಗಿ ಬಂದು ಕರ್ನಾಟಕವನ್ನು ನೋಡಿದಾಗ ನಿಜವಾಗಲೂ ತುಂಬಾ ಬೇಸರವಾಗುತ್ತದೆ. ನಮ್ಮಲ್ಲಿ ಒಳ್ಳೆಯ ಬಜೆಟ್ ಮಂಡನೆಯಾಗುತ್ತದೆ. ಉತ್ತಮವಾದ ಅಧಿಕಾರಿಗಳು ಇದ್ದಾರೆ. ಜನರಿಗಾಗಿ ಮಾಡಿದ ಯೋಜನೆಗಳು ನೇರವಾಗಿ ಅವರನ್ನು ತಲುಪುವ ಕಾರ್ಯಗಳು ಆಗಬೇಕಾಗಿದೆ' ಎಂದು ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ.

      Karnataka elections : Video Poornima Srinivas shares her dream about Karnataka

      'ನಾವು ಕೇವಲ ಕೋಟಿಗಟ್ಟಲೇ ಹಣ ಖರ್ಚಾಗುವ ಯೋಜನೆಗಳನ್ನು ಘೋಷಣೆ ಮಾಡಿದರೆ ಸಾಲದು. ಕಾನೂನು, ಇರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಜನರನ್ನು ತಲುಪುವ ಕೆಲಸ ಮಾಡಬೇಕು' ಎಂದು ಪೂರ್ಣಿಮಾ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.

      'ಕರ್ನಾಟಕದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಬೇಕು. ಎಲ್ಲೂ ಕೋಮುಗಲಭೆಯಾಗಬಾರದು. ಶಾಂತಿ ನೆಲೆಸಬೇಕು ಎಂಬ ಆಸೆ ಇದೆ. ಭಾರತೀಯ ಜನತಾಪಾರ್ಟಿ ಮೂಲಕ ಈ ಆಸೆ ನೇರವೇರಲಿದೆ' ಎಂದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+