ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೂತ್ ಮಟ್ಟದಲ್ಲಿ ಬಿಜೆಪಿಗೆ ಬಲ ತುಂಬಲಿದೆ ಆರೆಸ್ಸೆಸ್

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

ಕರ್ನಾಟಕ ಚುನಾವಣೆ 2018 : ಬೂತ್ ಮಟ್ಟದಲ್ಲಿ ಗೆಲ್ಲಲು ಆರೆಸ್ಸೆಸ್ ಮೊರೆ ಹೋದ ಬಿಜೆಪಿ | Oneindia Kannada

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆರೆಸ್ಸೆಸ್ ಮುಖ್ಯ ಪಾತ್ರ ವಹಿಸಲಿದೆ. ನೇರವಾಗಿ ಆರೆಸ್ಸೆಸ್ ಪಾಲ್ಗೊಳ್ಳದಿರಬಹುದು. ಆದರೆ ಕರ್ನಾಟಕದಲ್ಲಿ ಬಿಜೆಪಿಯು ಗದ್ದುಗೆ ಏರಲು ನೆರವನ್ನಂತೂ ನೀಡಲಿದೆ. ಆರೆಸ್ಸೆಸ್ ಅಂದರೆ ಅದರ ಸಂಘಟನಾ ಶಕ್ತಿಯಿಂದಲೇ ಹೆಸರುವಾಸಿ. ಆ ಮೂಲಕ ಬೂತ್ ಮಟ್ಟದಲ್ಲಿ ಬಿಜೆಪಿಗೆ ನೆರವು ನೀಡಲಿದೆ.

ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿದ್ದ ಮಾತನ್ನು ನೆನಪಿಸಿಕೊಳ್ಳಬಹುದು. "ಬಿಜೆಪಿ ಬೂತ್ ಮಟ್ಟದಲ್ಲಿ ಗೆದ್ದರೆ, ಕರ್ನಾಟಕ ಚುನಾವಣೆ ಗೆದ್ದಂತೆಯೇ" ಎಂದಿದ್ದರು. ಕರ್ನಾಟಕದ ಬಿಜೆಪಿ ಪ್ರಮುಖ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್ ಈಚೆಗೆ ಆರೆಸ್ಸೆಸ್ ನ ಪ್ರಮುಖ ನಾಯಕರನ್ನು ಭೇಟಿ ಮಾಡಿದ್ದಾರೆ.

ಸಿದ್ದರಾಮಯ್ಯನ ಸೋಲಿಸಲು ಬಿಜೆಪಿಗೆ ಆರ್‌ಎಸ್‌ಎಸ್‌ ಬಲಸಿದ್ದರಾಮಯ್ಯನ ಸೋಲಿಸಲು ಬಿಜೆಪಿಗೆ ಆರ್‌ಎಸ್‌ಎಸ್‌ ಬಲ

ಚುನಾವಣೆಗೆ ಹೆಣೆಯಬೇಕಾದ ರಣತಂತ್ರದ ಬಗ್ಗೆ ಈ ವೇಳೆ ಚರ್ಚೆ ನಡೆದಿದೆ. ನೆರವು ಬಯಸುವ ಬಿಜೆಪಿ ನಾಯಕರಿಗೆ ಸಹಾಯ ಮಾಡಲು ಆರೆಸ್ಸೆಸ್ ಕೂಡ ಸಿದ್ಧವಿದೆ. ಆದರೆ ನೇರವಾಗಿ ಆರೆಸ್ಸೆಸ್ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಇದೇ ವೇಳೆ ಮತದಾನ ಮಾಡುವಂತೆ ಪ್ರೇರಣೆ ನೀಡುವ ಕೆಲಸವನ್ನು ಆರೆಸ್ಸೆಸ್ ಮಾಡುತ್ತದೆ.

Karnataka elections: To win over the booths, BJP seeks help of RSS

"ಪ್ರಜಾಪ್ರಭುತ್ವ ಬಲವಾಗಬೇಕು ಅಂದರೆ ದೊಡ್ಡ ಮಟ್ಟದಲ್ಲಿ ಮತದಾನ ಆಗಬೇಕು. ಸರಿಯಾದ ಅಭ್ಯರ್ಥಿಗೆ ಜನ ಮತ ಹಾಕಬೇಕು. ಇಂಥ ಅಭಿಯಾನವನ್ನು ನಮ್ಮ ಸ್ವಯಂಸೇವಕರು ಕೈಗೊಳ್ಳುತ್ತಾರೆ" ಎಂದು ಈಚೆಗೆ ಆರೆಸ್ಸೆಸ್ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದರು.

ಎಷ್ಟು ಸ್ವಯಂಸೇವಕರು ಪಾಲ್ಗೊಳ್ಳುತ್ತಾರೆ ಎಂದು ಸಂಖ್ಯೆ ಹೇಳುವುದು ಕಷ್ಟ. ಆದರೆ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಿದ್ದಾರೆ. ಕರ್ನಾಟಕ ಚುನಾವಣೆಗೆ ನೆರವು ನೀಡುವುದಾಗಿ ಆರೆಸ್ಸೆಸ್ ನಾಯಕರು ಭರವಸೆ ನೀಡಿರುವುದಾಗಿ ಈಚೆಗೆ ಅಮಿತ್ ಶಾ ಕೂಡ ಹೇಳಿದ್ದಾರೆ.

English summary
The RSS is set to play a major role in the upcoming Karnataka Assembly Elections 2018. While it would not directly involve itself in the elections, it would help the BJP which is making a bid to form the next government in Karnataka. The RSS known for its organisational capabilities would be of great help to the BJP at the booth levels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X