ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಚುನಾವಣಾ ಫಲಿತಾಂಶ : ಅಪ್ಪ-ಮಕ್ಕಳಲ್ಲಿ ಗೆದ್ದವರು, ಸೋತವರು

|
Google Oneindia Kannada News

ಬೆಂಗಳೂರು, ಮೇ 15 : 2018ರ ಕರ್ನಾಟಕ ವಿಧಾನಸಭೆ ಚುನಾವಣೆ ಹಲವು ಕುತೂಹಲಗಳಿಗೆ ಸಾಕ್ಷಿಯಾಗಿತ್ತು. ಚುನಾವಣಾ ಕಣದಲ್ಲಿ ಅಪ್ಪ-ಮಕ್ಕಳು ಇದ್ದರು. ಇಂದು ಫಲಿತಾಂಶ ಪ್ರಕಟಗೊಂಡಿದ್ದು, ಕೆಲವರು ಗೆದ್ದಿದ್ದಾರೆ. ಕೆಲವು ಕಡೆ ಸೋಲು ಅನುಭವಿಸಿದ್ದಾರೆ.

ಸಿದ್ದರಾಮಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವು ಅಪ್ಪ-ಮಕ್ಕಳು ಚುನಾವಣಾ ಕಣದಲ್ಲಿದ್ದರು. ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು. ಆದರೆ, ಚಾಮುಂಡೇಶ್ವರಿಯಲ್ಲಿ ಸೋಲು ಅನುಭವಿಸಿದ್ದಾರೆ. ಬಾದಾಮಿಯಲ್ಲಿ ಕಷ್ಟಪಟ್ಟು ಗೆದ್ದಿದ್ದಾರೆ.

ಕರ್ನಾಟಕ ಚುನಾವಣೆ : ಈ ಮೂರು ಕ್ಷೇತ್ರಗಳಲ್ಲಿ ಸಹೋದರರ ಸವಾಲ್‌!ಕರ್ನಾಟಕ ಚುನಾವಣೆ : ಈ ಮೂರು ಕ್ಷೇತ್ರಗಳಲ್ಲಿ ಸಹೋದರರ ಸವಾಲ್‌!

ಕೆಲವು ಕ್ಷೇತ್ರಗಳಲ್ಲಿ ಅಪ್ಪ-ಮಕ್ಕಳು ಗೆದ್ದಿದ್ದು ಒಟ್ಟಿಗೆ ವಿಧಾನಸೌಧ ಪ್ರವೇಶಿಸಲಿದ್ದಾರೆ. ಸಚಿವ ಟಿ.ಬಿ.ಜಯಚಂದ್ರ ಮತ್ತು ಅವರ ಪುತ್ರ ಸಂತೋಷ್ ಜಯಚಂದ್ರ ಇಬ್ಬರು ತುಮಕೂರು ಜಿಲ್ಲೆಯಲ್ಲಿ ಕಣಕ್ಕಿಳಿದಿದ್ದರು. ಆದರೆ, ಇಬ್ಬರೂ ಸೋತಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ, ಪ್ರಜಾತಂತ್ರದ ಕಟು ಅಣಕ!ಜೆಡಿಎಸ್-ಕಾಂಗ್ರೆಸ್ ಮೈತ್ರಿ, ಪ್ರಜಾತಂತ್ರದ ಕಟು ಅಣಕ!

ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಬಿಟಿಎಂ ಲೇಔಟ್ ಕ್ಷೇತ್ರದಿಂದ ಅವರ ಪುತ್ರಿ ಸೌಮ್ಯಾ ರೆಡ್ಡಿ ಜಯನಗರದಿಂದ ಕಣದಲ್ಲಿದ್ದರು. ರಾಮಲಿಂಗಾ ರೆಡ್ಡಿ ಅವರು ಜಯಗಳಿಸಿದ್ದಾರೆ. ಆದರೆ, ಜಯನಗರ ಚುನಾವಣೆ ಮುಂದೂಡಲಾಗಿದೆ. ಈ ಬಾರಿಯ ಚುನಾವಣಾ ಕಣದಲ್ಲಿದ್ದ ಅಪ್ಪ-ಮಕ್ಕಳು ಯಾರು?, ಯಾರು ಗೆದ್ದವರು, ಯಾರು ಸೋತವರು? ಎಂಬ ಮಾಹಿತಿ ಇಲ್ಲಿದೆ ನೋಡಿ...

ಸಿದ್ದರಾಮಯ್ಯ/ಯತೀಂದ್ರ ಸಿದ್ದರಾಮಯ್ಯ

ಸಿದ್ದರಾಮಯ್ಯ/ಯತೀಂದ್ರ ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತು ಡಾ.ಯತೀಂದ್ರ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಚುನಾವಣಾ ಕಣದಲ್ಲಿದ್ದರು. ಇಬ್ಬರು ಜಯಗಳಿಸಿದ್ದಾರೆ.

ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಆದರೆ, ಬಾದಾಮಿಯಲ್ಲಿ ಗೆದ್ದಿದ್ದಾರೆ. ವರುಣಾ ಕ್ಷೇತ್ರದಲ್ಲಿ ಯತೀಂದ್ರ ಅವರು ಗೆದ್ದಿದ್ದು ಇಬ್ಬರು ಒಟ್ಟಿಗೆ ವಿಧಾನಸಭೆ ಪ್ರವೇಶಿಸಬಹುದಾಗಿದೆ.

In Pics: ಕರ್ನಾಟಕ ಜನಾದೇಶ: ಒಂದಷ್ಟು ಕಹಿ, ಮತ್ತಷ್ಟು ಸಿಹಿ

ಎ.ಕೃಷ್ಣಪ್ಪ, ಪ್ರಿಯಕೃಷ್ಣ

ಎ.ಕೃಷ್ಣಪ್ಪ, ಪ್ರಿಯಕೃಷ್ಣ

ಬೆಂಗಳೂರು ನಗರದಲ್ಲಿ ಅಕ್ಕ-ಪಕ್ಕದ ಕ್ಷೇತ್ರದಿಂದ ಅಪ್ಪ-ಮಕ್ಕಳು ಚುನಾವಣಾ ಕಣದಲ್ಲಿದ್ದರು. ವಸತಿ ಸಚಿವ ಎ.ಕೃಷ್ಣಪ್ಪ ಅವರು ವಿಜಯನಗರದಿಂದ ಮತ್ತು ಪ್ರಿಯಕೃಷ್ಣ ಅವರು ಗೋವಿಂದರಾಜ ನಗರದಿಂದ ಚುನಾವಣಾ ಕಣದಲ್ಲಿದ್ದರು.

ವಿಜಯನಗರ ಕ್ಷೇತ್ರದಲ್ಲಿ ಎ.ಕೃಷ್ಣಪ್ಪ ಅವರು ಕಷ್ಟಪಟ್ಟು ಗೆಲುವು ಸಾಧಿಸಿದ್ದಾರೆ. ಪಕ್ಕದ ಗೋವಿಂದರಾಜರಾಜ ನಗರ ಕ್ಷೇತ್ರದಲ್ಲಿ ಪ್ರಿಯಕೃಷ್ಣ ಅವರು ಬಿಜೆಪಿಯ ವಿ.ಸೋಮಣ್ಣ ವಿರುದ್ಧ ಸೋಲು ಅನುಭವಿಸಿದ್ದಾರೆ.

ಜಯಚಂದ್ರ/ ಸಂತೋಷ್ ಜಯಚಂದ್ರ

ಜಯಚಂದ್ರ/ ಸಂತೋಷ್ ಜಯಚಂದ್ರ

ಕಾನೂನು ಸಚಿವ ಟಿ.ಬಿ.ಜಯಚಂದ್ರ ಮತ್ತು ಅವರ ಪುತ್ರ ಸಂತೋಷ್ ಜಯಚಂದ್ರ ಅವರು ಒಟ್ಟಿಗೆ ತುಮಕೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಂದ ಕಣಕ್ಕೆ ಇಳಿದಿದ್ದರು. ಇಬ್ಬರೂ ಸೋಲು ಕಂಡಿದ್ದಾರೆ.

ಶಿರಾ ಕ್ಷೇತ್ರದಲ್ಲಿ ಟಿ.ಬಿ.ಜಯಚಂದ್ರ ಅವರು ಜೆಡಿಎಸ್‌ನ ಬಿ.ಸತ್ಯನಾರಾಯಣ ವಿರುದ್ಧ ಸೋಲು ಅನುಭವಿಸಿದ್ದಾರೆ. ಸಂತೋಷ್ ಜಯಚಂದ್ರ ಅವರು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಯ ಜೆ.ಸಿ.ಮಧುಸ್ವಾಮಿ ವಿರುದ್ಧ ಸೋಲು ಕಂಡಿದ್ದಾರೆ.

ಶಿವಶಂಕರಪ್ಪ, ಎಸ್ಎಸ್ ಮಲ್ಲಿಕಾರ್ಜುನ

ಶಿವಶಂಕರಪ್ಪ, ಎಸ್ಎಸ್ ಮಲ್ಲಿಕಾರ್ಜುನ

ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ ಅವರು ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರದಿಂದ ಚುನಾವಣಾ ಕಣದಲ್ಲಿದ್ದರು. ಆದರೆ, ಶಾಮನೂರು ಶಿವಶಂಕರಪ್ಪ ಅವರು ಗೆದ್ದಿದ್ದು, ಎಸ್.ಎಸ್.ಮಲ್ಲಿಕಾರ್ಜುನ ಅವರು ಸೋಲು ಕಂಡಿದ್ದಾರೆ.

ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ಅವರು 71,369ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ ಅವರು ಬಿಜೆಪಿಯ ಎಸ್.ಎ.ರವೀಂದ್ರನಾಥ್ ವಿರುದ್ಧ ಸೋತಿದ್ದಾರೆ.

ಗೋವಿಂದ ಕಾರಜೋಳ/ಗೋಪಾಲ ಕಾರಜೋಳ

ಗೋವಿಂದ ಕಾರಜೋಳ/ಗೋಪಾಲ ಕಾರಜೋಳ

ಮಾಜಿ ಸಚಿವ ಗೋವಿಂದ ಕಾರಜೋಳ ಮತ್ತು ಡಾ.ಗೋಪಾಲ ಕಾರಜೋಳ ಅವರು ಚುನಾವಣಾ ಕಣದಲ್ಲಿದ್ದರು. ಗೋವಿಂದ ಕಾರಜೋಳ ಅವರು ಗೆಲುವು ಸಾಧಿಸಿದ್ದಾರೆ. ಗೋಪಾಲ ಕಾರಜೋಳ ಅವರು ಸೋಲು ಕಂಡಿದ್ದಾರೆ.

ಗೋವಿಂದ ಕಾರಜೋಳ ಅವರು ಮುಧೋಳ ಕ್ಷೇತ್ರದಲ್ಲಿ ಗೆಲುವು ಕಂಡಿದ್ದರೆ, ಡಾ.ಗೋಪಾಲ ಕಾರಜೋಳ ಅವರು ನಾಗಠಾಣ ಕ್ಷೇತ್ರದಲ್ಲಿ ಜೆಡಿಎಸ್‌ನ ದೇವನಾಂದ ಚೌವ್ಹಾಣ್ ವಿರುದ್ಧ ಸೋಲು ಕಂಡಿದ್ದಾರೆ.

English summary
Karnataka Election Results 2018 Live Updates. Father and Son in the Karnataka assembly elections 2018 fray. Here is a list of winners and losers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X