ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು : ಚಿಕ್ಕಪೇಟೆ ಕ್ಷೇತ್ರದ ಬಹಳ ಕಾಲದ ಸಮಸ್ಯೆಗಳು

|
Google Oneindia Kannada News

ಬೆಂಗಳೂರು, ಏಪ್ರಿಲ್ 26 : ಬೆಂಗಳೂರು ನಗರದ ಪುತರಾತನ ಬಡಾವಣೆ ಚಿಕ್ಕಪೇಟೆ. ನಗರದ ಪ್ರಮುಖ ವ್ಯಾಪಾರಿ ಕೇಂದ್ರವೂ ಹೌದು. ವಿವಿಧ ಬಡಾವಣೆಗಳಿಂದ ಜನರ ಚಿಕ್ಕಪೇಟೆಗೆ ಆಗಮಿಸಲು ನಮ್ಮ ಮೆಟ್ರೋ ರೈಲಿನ ಸೌಕರ್ಯವಿದೆ.

ಚಾಮರಾಜಪೇಟೆ, ಬಸವನಗುಡಿ, ಜಯನಗರ ವಿಧಾನಸಭಾ ಕ್ಷೇತ್ರಗಳ ಹಲವು ಭಾಗಗಳನ್ನು ಸೇರಿಸಿ ಚಿಕ್ಕಪೇಟೆ ಕ್ಷೇತ್ರ ರಚನೆ ಮಾಡಲಾಗಿದೆ. ಪುರಾತನ ಕಟ್ಟಡಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಚಿಕ್ಕರಸ್ತೆಗಳೇ ಅಭಿವೃದ್ಧಿಗೆ ತೊಡಕಾಗಿವೆ.

 ಬೆಂಗಳೂರಿನ ಪುರಾತನ ಬಡಾವಣೆ ಚಿಕ್ಕಪೇಟೆ ಪರಿಚಯ ಬೆಂಗಳೂರಿನ ಪುರಾತನ ಬಡಾವಣೆ ಚಿಕ್ಕಪೇಟೆ ಪರಿಚಯ

ಕೆ.ಆರ್.ಮಾರುಕಟ್ಟೆ, ಬೆಂಗಳೂರಿನ ಕರಗ ನಡೆಯುವ ಧರ್ಮರಾಯಸ್ವಾಮಿ ದೇವಾಲಯ, ಎಲೆಕ್ಟ್ರಾನಿಕ್ ವಸ್ತುಗಳಿಗೆ ಪ್ರಸಿದ್ಧಿ ಪಡೆದಿರುವ ಎಸ್.ಪಿ.ರಸ್ತೆ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ.

Karnataka elections : Bengaluru Chickpet constituency issues

ಕ್ಷೇತ್ರದ ಸಮಸ್ಯೆಗಳು

* ಚಿಕ್ಕದಾದ ರಸ್ತೆಗಳನ್ನು ಹೊಂದಿರುವ ಚಿಕ್ಕಪೇಟೆಯಲ್ಲಿ ಸಮಸ್ಯೆಗಳು ಹಲವು. ಕಿರಿದಾದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಆದ್ದರಿಂದ, ವಾಹನ ಸವಾರರಿಗೆ ಕ್ಷೇತ್ರದ ವ್ಯಾಪ್ತಿಯಲ್ಲಿಸಂಚಾರ ನಡೆಸುವುದು ಸವಾಲಿನ ಕೆಲಸ. ನಿಧಾನಗತಿಯ ವಾಹನ ಸಂಚಾರ ಪ್ರತಿನಿತ್ಯದ ಸಮಸ್ಯೆಯಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ

* ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಧಾಮನಗರದಲ್ಲಿ ರಾಜಾ ಕಾಲುವೆ ಹರಿದು ಹೋಗುತ್ತದೆ. ಮಳೆ ಬಂದಾಗ ರಾಜಾಕಾಲುವೆ ಉಕ್ಕಿ ಹರಿದು ಅಕ್ಕಪಕ್ಕದ ರಸ್ತೆಗಳಲ್ಲಿ ಕೊಳಚೆ ನೀರು ತುಂಬಿಕೊಳ್ಳುತ್ತದೆ. ಕಾಲುವೆ ಸ್ವಚ್ಚಗೊಳಿಸಿ, ನೀರು ಸುಲಭವಾಗಿ ಹರಿದು ಹೋಗುವಂತೆ ಮಾಡುವ ಕಾಮಗಾರಿಯೂ ನಡೆಯುತ್ತಿದೆ.

* ಕ್ಷೇತ್ರದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚು, ಪಾರ್ಕಿಂಗ್‌ಗೆ ವ್ಯವಸ್ಥೆ ಕಡಿಮೆ. ಜನಪ್ರತಿನಿಧಿಗಳು ಪಾರ್ಕಿಂಗ್‌, ಸಂಚಾರ ದಟ್ಟಣೆ ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ಮಾಹಿತಿ.

ವಾರ್ಡ್‌ಗಳು : ಧರ್ಮರಾಯಸ್ವಾಮಿ ದೇವಸ್ಥಾನ, ಸುಧಾಮನಗರ, ಸುಂಕೇನಹಳ್ಳಿ, ವಿಶ್ವೇಶ್ವರಪುರ, ಸಿದ್ದಾಪುರ, ಹೊಂಬೇಗೌಡ ನಗರ ಮತ್ತು ಜಯನಗರ ವಾರ್ಡ್‌ಗಳನ್ನು ಕ್ಷೇತ್ರ ಹೊಂದಿದೆ.

ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್‌ನ ಆರ್.ವಿ.ದೇವರಾಜ್. 2018ರ ಚುನಾವಣೆಯಲ್ಲಿಯೂ ಅವರೇ ಅಭ್ಯರ್ಥಿ. ಬಿಜೆಪಿಯಿಂದ ಉದಯ್ ಗರುಡಾಚಾರ್, ಜೆಡಿಎಸ್‌ನಿಂದ ಹೇಮಚಂದ್ರ ಸಾಗರ್ ಅವರು ಅಭ್ಯರ್ಥಿಯಾಗಿದ್ದಾರೆ.

English summary
Karnataka Assembly Election 2018 : Read all about the issues of Chickpet assembly constituency of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X