ಭಾರತದ ಅತ್ಯಂತ ಪುರಾತನ ಪಕ್ಷ : ಕಾಂಗ್ರೆಸ್
ಭಾರತದಲ್ಲಿರುವ ರಾಜಕೀಯ ಪಕ್ಷಗಳಲ್ಲಿ ಅತ್ಯಂತ ಹಳೆಯ ಹಾಗೂ ಅತ್ಯಂತ ದೊಡ್ಡ ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್ ಸಿ). 1885ರಲ್ಲಿ ಸ್ಥಾಪಿಸಲ್ಪಟ್ಟ ಈ ಪಕ್ಷ, ಬ್ರಿಟೀಷ್ ಆಳ್ವಿಕೆಯ ವಿರುದ್ಧ ಹೊರಾಟದಲ್ಲಿ ಮುಂಚೂಣಿಯಲ್ಲಿದ್ದು ಹಾಗು ಸ್ವಾತಂತ್ರ್ಯದ ನಂತರ ಭಾರತದ ಆಡಳಿತವನ್ನು ಅತಿ ಹೆಚ್ಚು ಕಾಲ ವಹಿಸಿದೆ.
ಧ್ಯೇಯ: ಭ್ರಷ್ಟಾಚಾರ ನಿರ್ಮೂಲನೆ, ರಾಮರಾಜ್ಯ ನಿರ್ಮಾಣ, ಗ್ರಾಮ ಸ್ವರಾಜ್ಯ, ಹಿಂದುಳಿದ ಅಲ್ಪ ಸಂಖ್ಯಾತರ ಅಭಿವೃದ್ಧಿ.
ಪಕ್ಷದ ಪ್ರಮುಖರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಎಂ.ಬಿ ಪಾಟೀಲ್, ರಮ್ಯಾ, ಕೆ.ಎಚ್ ಮುನಿಯಪ್ಪ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ: 28 ಡಿಸೆಂಬರ್ 1885
* ಕೆಪಿಸಿಸಿ ಪ್ರಥಮ ಅಧ್ಯಕ್ಷರು: ಡಿ ದೇವರಾಜ ಅರಸ್ (ಅವಧಿ 1970-1972).
* ಕೆಪಿಸಿಸಿ ಇದುವರೆಗೆ ಒಟ್ಟು 17 ಮುಖ್ಯಮಂತ್ರಿಗಳನ್ನು ನೀಡಿದೆ.
* 5 ವಿಭಾಗಗಳು: ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎನ್ಎಸ್ ಯುಇ, ಸೇವಾ ದಳ ಮತ್ತು ಇಂಟಕ್
* ಕೆಪಿಸಿಸಿ ಕಚೇರಿ ವಿಳಾಸ: ಕೆಪಿಸಿಸಿ ಕಚೇರಿ, ಕ್ವೀನ್ಸ್ ರಸ್ತೆ, ಬೆಂಗಳೂರು
* ಸಂಪರ್ಕ: 91(080)2225 1343/222 50651
* ವೆಬ್ ಸೈಟ್: http://www.karnatakapcc.com/
ಕೆಪಿಸಿಸಿ ಅಧ್ಯಕ್ಷರು : ಜಿ ಪರಮೇಶ್ವರ, ಎಂಎಲ್ ಸಿ
ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷರು;
* ಎಸ್ ಆರ್ ಪಾಟೀಲ್, ಎಂಎಲ್ ಸಿ
* ದಿನೇಶ್ ಗುಂಡೂರಾವ್, ಎಂಎಲ್ ಎ
ಉಪಾಧ್ಯಕ್ಷರು:
* ಬಿಎಲ್ ಶಂಕರ್, ಬಿ.ಕೆ ಚಂದ್ರಶೇಖರ್, ಮೋಟಮ್ಮ, ಎನ್. ವೈ ಹನುಮಂತಪ್ಪ, ಬಿ. ಶಿವರಾಮ್
ಎ.ಬಿ. ಮಾಲಕರೆಡ್ಡಿ, ಶಾಸಕ.
ಚುನಾವಣಾ ಸಮಿತಿ: ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೆ.ರೆಹಮಾನ್ ಖಾನ್, ಎಂ.ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ, ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ 60ಕ್ಕೂ ಅಧಿಕ ಮಂದಿ.












Click it and Unblock the Notifications