ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈತ್ರಿ ಮಾತುಕತೆ ಶುರುವಾಗುತ್ತಿದ್ದಂತೆ ಕುಸಿದ ಸೂಚ್ಯಂಕ

|
Google Oneindia Kannada News

ಬೆಂಗಳೂರು, ಮೇ 15: ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆಯೇ ಬೆಳಿಗ್ಗೆ ಮಾರುಕಟ್ಟೆ ಸೂಚ್ಯಂಕ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿತ್ತು.

ಬಿಜೆಪಿ ಮುನ್ನಡೆ: ಮಾರುಕಟ್ಟೆ ಸೂಚ್ಯಂಕದಲ್ಲಿ ಏರಿಕೆ ಬಿಜೆಪಿ ಮುನ್ನಡೆ: ಮಾರುಕಟ್ಟೆ ಸೂಚ್ಯಂಕದಲ್ಲಿ ಏರಿಕೆ

ಆದರೆ, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯ ಕುರಿತು ಮಾತುಕತೆ ಆರಂಭವಾಗುತ್ತಿದ್ದಂತೆಯೇ ಸೂಚ್ಯಂಕ ದಿಢೀರ್ ಕುಸಿತ ಕಾಣಲು ಆರಂಭಿಸಿದೆ. ಇದರಿಂದ ಒಟ್ಟಾರೆ ಮಾರುಕಟ್ಟೆ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಉಂಟಾಗಿದೆ.

LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್ LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್

ಬಿಜೆಪಿ ಮುನ್ನಡೆ ಸಾಧಿಸುತ್ತಿರುವಂತೆ ಸೆನ್ಸೆಕ್ಸ್ ಸುಮಾರು 400 ಪಾಯಿಂಟ್‌ಗಳಷ್ಟು ಏರಿಕೆ ಕಂಡಿದೆ. ನಿಫ್ಟಿ 10900ರ ಗಡಿ ದಾಟಿದೆ. ಹೀಗಾಗಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಯಾವ ಪಕ್ಷ ಬರಲಿದೆ ಎನ್ನುವುದು ಮಾರುಕಟ್ಟೆ ಸಂವೇದಿ ಸೂಚ್ಯಂಕದ ಮೇಲೆ ಪರಿಣಾಮ ಬೀರಲಿರುವುದು ಖಚಿತವಾಗಿತ್ತು.

Karnataka Election Results 2018 sensex points erase gains

ಸೆನ್ಸೆಕ್ಸ್ 35,556.71 ಸೂಚ್ಯಂಕದೊಂದಿಗೆ ದಿನ ಆರಂಭಿಸಿತ್ತು. 436 ಅಂಕಗಳಷ್ಟು ಜಿಗಿತ ಕಂಡ ಸೆನ್ಸೆಕ್ಸ್ ಮೂರು ತಿಂಗಳಲ್ಲಿಯೇ ಅಧಿಕ ಮಟ್ಟಕ್ಕೆ ತಲುಪಿತ್ತು. ಆದರೆ ಈಗ ಸೂಚ್ಯಂಕ 35,559ಕ್ಕೆ ತಲುಪಿದೆ. 10,900ರ ಗಡಿ ದಾಟುವ ನಿರೀಕ್ಷೆ ಮೂಡಿಸಿದ್ದ ನಿಫ್ಟಿ 10,800ಕ್ಕೆ ಇಳಿದಿದೆ.

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

ಈ ವರ್ಷದ ಜನವರಿಯಲ್ಲಿ ಸೆನ್ಸೆಕ್ಸ್ ಸೂಚ್ಯಂಕ 36,443 ತಲುಪಿದ್ದು ಗರಿಷ್ಠ ಸಾಧನೆಯಾಗಿತ್ತು. ಇನ್ನೂ 500 ಅಂಕಗಳನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾದರೆ ಸೆನ್ಸೆಕ್ಸ್ ಗರಿಷ್ಠ ಮಟ್ಟವನ್ನು ತಲುಪುತ್ತಿತ್ತು.

ಮಧ್ಯಾಹ್ನದ ಬಳಿಕ ನಿಫ್ಟಿ ಫಾರ್ಮಾ ಸ್ಟಾಕ್ ಮಧ್ಯಾಹ್ನದ ಬಳಿಕ ಶೇ 1.6ರಷ್ಟು ಇಳಿಕೆ ಕಂಡಿದೆ.

ಕರ್ನಾಟಕ ಚುನಾವಣಾ ಫಲಿತಾಂಶವು ಸ್ಟಾಕ್ ಮಾರ್ಕೆಟ್ ಮೇಲೆ ಪರಿಣಾಮ ಬೀರುವ ಅವಧಿ ಅಲ್ಪಮಟ್ಟದ್ದಾಗಿರಲಿದೆ. ಫಲಿತಾಂಶ ಅಂತಿಮವಾಗಿ ಹೊರಬಿದ್ದ ಬಳಿಕ ಅದರ ಪರಿಣಾಮ ತಗ್ಗಲಿದೆ ಎಂದು ಪರಿಣತರು ಹೇಳಿದ್ದಾರೆ.

ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ಪವರ್ ಗ್ರಿಡ್ ಕಾರ್ಪ್, ಟೈಟಾನ್, ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಶೇ 1.5 ರಿಂದ 3ರವರೆಗೆ ಏರಿಕೆಯಾಗಿದೆ.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದೆ. ಬಿಜೆಪಿ ದೊಡ್ಡ ಮಟ್ಟದ ಮುನ್ನಡೆ ಕಾಯ್ದುಕೊಂಡಿರುವುದರಿಂದ ಸಹಜವಾಗಿಯೇ ಮಾರುಕಟ್ಟೆಯ ಸೂಚ್ಯಂಕ ಮೇಲ್ಮಟ್ಟಕ್ಕೆ ಜಿಗಿದಿತ್ತು.

ರೂಪಾಯಿ ಮೌಲ್ಯ ಪ್ರತಿ ಡಾಲರ್‌ ಎದುರು 67.55ಕ್ಕೆ ಏರುವ ಮೂಲಕ ಚೇತರಿಕೆ ಕಂಡಿತ್ತು. ಇದಕ್ಕೂ ಮೊದಲು ಡಾಲರ್‌ಗೆ ರೂಪಾಯಿ ಮೌಲ್ಯ 67.77ಕ್ಕೆ ಕುಸಿದಿತ್ತು. ಈಗ ರಾಜಕೀಯ ಚಟುವಟಿಕೆ ತಿರುವು ಪಡೆದಿರುವುದರಿಂದ ರೂಪಾಯಿ ಮೌಲ್ಯ ಕುಸಿಯುವ ಸೂಚನೆ ಎದುರಾಗಿದೆ.

English summary
Karnataka Election Results 2018: After the discussion on formation of JDS-Congress coalignation government, Sensex has losing its gain
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X