ರಾಜ್ಯ ಚುನಾವಣೆ ಫಲಿತಾಂಶ: ರೂಪಾಯಿ ಮೌಲ್ಯ ಕುಸಿತ

ಮುಂಬೈ, ಮೇ 15: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ದೇಶಿ ಮಾರುಕಟ್ಟೆ ತಲ್ಲಣಿಸಿದೆ.

ಅಮೆರಿಕನ್ ಡಾಲರ್ ಎದುರು ಚೇತರಿಸಿಕೊಳ್ಳುವ ಸುಳಿವು ನೀಡಿದ್ದ ರೂಪಾಯಿ ಮೌಲ್ಯ, ಕರ್ನಾಟಕ ಚುನಾವಣೆ ಫಲಿತಾಂಶದ ಪರಿಣಾಮವಾಗಿ ಭಾರಿ ಕುಸಿತ ಕಂಡಿದೆ. 16 ತಿಂಗಳಿನಲ್ಲಿಯೇ ಅತಿ ಕಡಿಮೆ ಮೌಲ್ಯಕ್ಕೆ ರೂಪಾಯಿ ಮೌಲ್ಯ ಕುಸಿದಿದೆ.

ಡಾಲರ್ ಎದುರು ರೂಪಾಯಿ ಮೌಲ್ಯವು 56 ಪೈಸೆಯಷ್ಟು ಇಳಿಕೆ ಕಂಡಿದ್ದು, ಇದು 2017ರ ಜನವರಿಯಿಂದ ಅತಿ ದೊಡ್ಡ ಪ್ರಮಾಣದ ಕುಸಿತವಾಗಿದೆ. ಇದರಿಂದ ಆಂತರಿಕ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಭೀತಿ ಎದುರಾಗಿದೆ.

ಕಾಂಗ್ರೆಸ್- ಜಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವುದು ಖಚಿತವಾದರೆ ಬುಧವಾರದ ಮಾರುಕಟ್ಟೆ ವಹಿವಾಟಿಗೆ ಮತ್ತಷ್ಟು ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇರುವುದರಿಂದ ಬೇರೆ ಪಕ್ಷ ಅಧಿಕಾರಕ್ಕೆ ಬರುವುದು ಸೂಚ್ಯಂಕ ಹಾಗೂ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಲಿದೆ.

Karnataka Election Results 2018 rupee falls to lowest against dollar in 16 months

ಸೋಮವಾರ ಡಾಲರ್ ಎದುರು ರೂಪಾಯಿ ಮೌಲ್ಯ 67.51 ಕ್ಕೆ ಅಂತ್ಯವಾಗಿತ್ತು. ಮಂಗಳವಾರ 68.07 ಮೌಲ್ಯದೊಂದಿಗೆ ಅಂತ್ಯವಾಗಿದೆ. ಮಂಗಳವಾರ ಡಾಲರ್ ಎದುರು 68.13-67.46 ರೂಪಾಯಿ ಮೌಲ್ಯದ ಅಂತರದಲ್ಲಿ ವಹಿವಾಟು ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+