ಗೋವಿಂದರಾಜನಗರ ಕ್ಷೇತ್ರದಲ್ಲಿ ಪ್ರಿಯಾ ಕೃಷ್ಣ ಕಥೆ ಗೋವಿಂದ.. ಗೋವಿಂದ!
ಎಂ.ಎ.ಎಲ್.ಎಲ್.ಬಿ ಓದಿರುವ ಪ್ರಿಯಾ ಕೃಷ್ಣ, ವಿಜಯನಗರದ ಪ್ರಭಾವಿ ರಾಜಕಾರಣಿ ಎಂ.ಕೃಷ್ಣಪ್ಪ ರವರ ಪುತ್ರ. ವಿಧಾನಸಭೆಯಲ್ಲಿ ಅತಿ ಕಿರಿಯ ಶಾಸಕ. ಗೋವಿಂದರಾಜನಗರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದ ಪ್ರಿಯಾ ಕೃಷ್ಣ ಈ ಬಾರಿ ಸೋಲು ಕಂಡಿದ್ದಾರೆ. ಪ್ರಿಯಾ ಕೃಷ್ಣ ವಿರುದ್ಧ ಬಿ.ಜೆ.ಪಿ ಅಭ್ಯರ್ಥಿ ವಿ.ಸೋಮಣ್ಣ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆ ಆಗಿದ್ದ ವಿ.ಸೋಮಣ್ಣ ಕಾಂಗ್ರೆಸ್ ಗೆ ಕೈಕೊಟ್ಟು ಕಮಲ ಹಿಡಿದ್ಮೇಲೆ ಉಪಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಆಗ ಜಯಭೇರಿ ಬಾರಿಸಿದ್ದವರು ಪ್ರಿಯಾ ಕೃಷ್ಣ.
ಅದಾದ ಬಳಿಕ ಮತ್ತೊಂದು ಬಾರಿ ಶಾಸಕರಾಗಿ ಪ್ರಿಯಾ ಕೃಷ್ಣ ವಿಧಾನಸಭೆ ಮೆಟ್ಟಿಲೇರಿದ್ದರು. ಮೂರನೇ ಬಾರಿ ಚುನಾವಣೆ ಎದುರಿಸಿದ ಪ್ರಿಯಾ ಕೃಷ್ಣ ಸೋತಿದ್ದಾರೆ. ಸತತ ಎರಡು ಬಾರಿ ಸೋತ ಬಳಿಕ ವಿ.ಸೋಮಣ್ಣ ಇದೀಗ ಗೆಲುವಿನ ನಗೆ ಬೀರಿದ್ದಾರೆ.

ಗೋವಿಂದರಾಜನಗರ ಕ್ಷೇತ್ರದಲ್ಲಿ ಪ್ರಿಯಾ ಕೃಷ್ಣ ಸೋತಿದ್ದರೆ, ವಿಜಯನಗರ ಕ್ಷೇತ್ರದಲ್ಲಿ ತಂದೆ ಎಂ.ಕೃಷ್ಣಪ್ಪ ಪ್ರಯಾಸದ ಗೆಲುವು ಕಂಡಿದ್ದಾರೆ.
ಬಿ.ಜೆ.ಪಿ ಪಕ್ಷದ ಅಭ್ಯರ್ಥಿ ವಿ.ಸೋಮಣ್ಣ ಪಡೆದಿರುವ ಒಟ್ಟು ಮತಗಳು - 79,135. ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾ ಕೃಷ್ಣ ಪಡೆದಿರುವ ಒಟ್ಟು ಮತಗಳು - 67,760. 7090 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ ಜೆ.ಡಿ.ಎಸ್ ನ ಎ ನಾಗೇಂದ್ರ ಪ್ರಸಾದ್.












Click it and Unblock the Notifications