ಚುನಾವಣಾ ಅಖಾಡದಲ್ಲಿ 134 ಮಹಿಳಾ ಸ್ಪರ್ಧಿಗಳು!

ಬೆಂಗಳೂರು, ಏಪ್ರಿಲ್ 24: 15ನೇ ವಿಧಾನಸಭಾ ಚುನಾವಣೆಯ ಕಣದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಹಿಳಾ ಸ್ಪರ್ಧಿಗಳು ಕಣದಲ್ಲಿದ್ದಾರೆ. 14ನೇ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ 170 ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ, ಈ ಬಾರಿ 134 ಮಂದಿ ಮಾತ್ರ ಸ್ಪರ್ಧಿಸುತ್ತಿದ್ದಾರೆ.

2008ರ ಚುನಾವಣೆಯಲ್ಲಿ 107 ಮಹಿಳೆಯರು ಕಣದಲ್ಲಿದ್ದರು, ಇವರಲ್ಲಿ ಮೂವರು ಮಾತ್ರ ಗೆಲುವು ಸಾಧಿಸಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಮತ್ತು ಕಲ್ಪನಾ ಸಿದ್ದರಾಜು ಗೆಲುವು ಸಾಧಿಸಿದ್ದರು.

ಈ ಬಾರಿ ಪಕ್ಷವಾರು ಟಿಕೆಟ್ ಹಂಚಿಕೆ ಗಮನಿಸಿದರೆ, ಕಾಂಗ್ರೆಸ್ಸಿನಿಂದ 15, ಬಿಜೆಪಿಯಿಂದ 13, ಜೆಡಿಎಸ್ ನಿಂದ 11 ಹಾಗೂ ಎಂಇಪಿಯಿಂದ 12 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 134 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

2013ರಲ್ಲಿ 170 ಅಭ್ಯರ್ಥಿಗಳ ಪೈಕಿ ಆರು ಮಂದಿ ಗೆಲುವು ಸಾಧಿಸಿದ್ದರು. ಮಹಿಳಾ ಶಾಸಕಿಯರ ಪೈಕಿ ಕಾಂಗ್ರೆಸ್ಸಿನಿಂದ ಮೂವರು, ಬಿಜೆಪಿಯಿಂದ ಇಬ್ಬರು ಮತ್ತು ಜೆಡಿಎಸ್ ನಿಂದ ಒಬ್ಬರು ವಿಜಯಲಕ್ಷ್ಮಿಯಾಗಿದ್ದರು.

Karnataka Assembly Elections 2018 : 134 Women Candidates in the election fray

ಹಾಲಿ ಮಹಿಳಾ ಶಾಸಕಿಯರು

* ನಿಪ್ಪಾಣಿ -ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ (ಬಿಜೆಪಿ)

* ಕೆಜಿಎಫ್-ವೈ ರಾಮಕ್ಕ (ಬಿಜೆಪಿ)

* ತೇರದಾಳ -ಉಮಾಶ್ರೀ (ಕಾಂಗ್ರೆಸ್)

* ಕುಮಟಾ-ಶಾರದಾ ಮೋಹನ್ ಶೆಟ್ಟಿ (ಕಾಂಗ್ರೆಸ್)

* ಪುತ್ತೂರು-ಶಕುಂತಲಾ ಶೆಟ್ಟಿ (ಕಾಂಗ್ರೆಸ್)

* ಶಿವಮೊಗ್ಗ ಗ್ರಾಮಾಂತರ- ಶಾರದಾ ಪೂರ್ಯ ನಾಯ್ಕ್ (ಜೆಡಿಎಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+