ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂದಾಪುರ ವಾಜಪೇಯಿ ಹಾಲಾಡಿ ದಿಗ್ವಿಜಯ

By Mahesh
|
Google Oneindia Kannada News

ಬೆಂಗಳೂರು, ಮೇ.8: ಕುಂದಾಪುರದ ವಾಜಪೇಯಿ ಎಂದೇ ಖ್ಯಾತರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ನಿರೀಕ್ಷೆಯಂತೆ ಗೆಲುವು ಲಭಿಸಿದೆ. ಈ ಮೂಲಕ ಬಿಜೆಪಿಗೆ ಎರಡನೇ ಹೊಡೆತ ಬಿದ್ದಿದೆ. ಶಕುಂತಲಾ ಶೆಟ್ಟಿ ಗೆಲುವಿನ ನಂತರ ಹಾಲಾಡಿ ಶೆಟ್ಟಿ ಗೆಲುವು ಬಿಜೆಪಿಗೆ ಮರ್ಮಾಘಾತವಾಗಿದೆ. ಬಿಜೆಪಿ ಹೊರ ಹಾಕಿದ ಅಭ್ಯರ್ಥಿಗಳು ತಿರುಗಿ ಬಿದ್ದು ಗೆಲುವಿನ ಬಾವುಟ ಹಿಡಿದಿದ್ದಾರೆ.

ಕಾಂಗ್ರೆಸ್ ನಿಂದ ಮಲ್ಯಾಡಿ ಶಿವರಾಮ್ ಶೆಟ್ಟಿ ಹಾಗೂ ಬಿಜೆಪಿಯಿಂದ ಕಿಶೋರ್ ಕುಮಾರ್ ಸ್ಪರ್ಧೆಯಲ್ಲಿದ್ದರೂ ಹಾಲಾಡಿ ಅವರ ಸಮಕ್ಕೆ ಹೋರಾಟ ನೀಡಲು ವಿಫಲರಾಗಿದ್ದಾರೆ. ಹಾಲಾಡಿ ಅವರು ಭಾರಿ ಅಂತರದಿಂದ ಜಯ ಗಳಿಸಿದ್ದಾರೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

ವಿಧಾನಸಭೆ ಚುನಾವಣೆಯಲ್ಲಿ ಕುಂದಾಪುರ ಗೆಲ್ಲುವುದಕ್ಕೆ ಸಮರ್ಥ ಅಭ್ಯರ್ಥಿ ಸಿಗದೆ ಪರದಾಡುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಒದ್ದಾಡಿತ್ತು. ಈ ಸಂದರ್ಭದಲ್ಲಿ ಜೆಡಿಎಸ್ ತನ್ನ ಕಾರ್ಯತಂತ್ರ ಸಿದ್ಧಿಸಿಕೊಂಡಿತ್ತು. ಹ್ಯಾಟ್ರಿಕ್ ವಿಜೇತ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ಧ ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸಲು ಕಷ್ಟಸಾಧ್ಯ ಎಂಬುದರನ್ನು ಅರಿತ ಜೆಡಿಎಸ್ ಇಬ್ಬರ ಜಗಳದ ನಡುವೆ ಲಾಭ ಪಡೆದುಕೊಂಡಿತ್ತು.

1999ರಲ್ಲಿ ರಾಜಕೀಯ ಜೀವನ ಆರಂಭಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕಾಂಗ್ರೆಸ್ ಪ್ರಭಾವಿ ನಾಯಕ ಪ್ರತಾಪಚಂದ್ರ ಶೆಟ್ಟಿ ಅವರನ್ನು ಸೋಲಿಸಿದರು. 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ಶೆಟ್ಟಿ ಅವರನ್ನು ಹಾಗೂ 2008ರನ್ನು ಕೆ ಜಯಪ್ರಕಾಶ್ ಹೆಗ್ಡೆ ಅವರನ್ನು 25,083 ಅಂತರದಿಂದ ಸೋಲಿಸಿ ಹ್ಯಾಟ್ರೆಕ್ ಸಾಧಿಸಿದರು. ಹಾಲಾಡಿ ಅವರು 1,24,716 ಮತ ಗಳಿಸಿದ್ದರು.

English summary
The Congress and the BJP failed to put strong candidates against three time MLA Halady Srinivas Shetty who has announced that he would be contesting the assembly elections this time as an independent. Halady secures victory with JDS support in Kundapur, Udupi District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X