ಚುನಾವಣೆ ಫಲಿತಾಂಶ : ಕೊಪ್ಪಳದಲ್ಲಿ ಕೈ ಸಪ್ಪಳ

Koppal
ಕೊಪ್ಪಳ, ಮೇ 14 : ವಿಧಾನಸಭೆ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆ ಕೈ ವಶವಾಗಿದೆ. ಐದು ಸ್ಥಾನಗಳ ಪೈಕಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಪಡೆದಿದ್ದು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಒಂದು ಸ್ಥಾನ ಬಿಟ್ಟುಕೊಟ್ಟಿದೆ. ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಪಕ್ಷಗಳು ಜಿಲ್ಲೆಯಲ್ಲಿ ಖಾತೆ ತೆರೆಯಲು ವಿಫಲವಾಗಿವೆ.

ಗಂಗಾವತಿ ಕ್ಷೇತ್ರದಿಂದ ಜೆಡಿಎಸ್ ಹಿರಿಯ ನಾಯಕ ಇಕ್ಬಾಲ್ ಅನ್ಸಾರಿ ಗೆಲುವಿನ ನೆಗೆ ಬೀರಿದ್ದರೆ, ಕನಕಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಿವರಾಜ ತಂಗಡಗಿ ಗೆಲವು ಸಾಧಿಸಿದ್ದಾರೆ. ಕನಕಗಿರಿ ಕ್ಷೇತ್ರ ಗೆಲ್ಲುವ ಯಡಿಯೂರಪ್ಪ ಅವರ ಕಸಸು ನನಸಾಗಿಲ್ಲ. ಕೆಜೆಪಿ ಅಭ್ಯರ್ಥಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

2008ರ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲೆಯಲ್ಲಿ ಕೇವಲ ಒಂದು ಸ್ಥಾನ ಪಡೆದಿತ್ತು. ಬಿಜೆಪಿ ಎರಡು ಸ್ಥಾನಗಳನ್ನು ಪಡೆದಿದ್ದರೆ, ಜೆಡಿಎಸ್ ಒಂದು ಸ್ಥಾನ ಮಾತ್ರ ಪಡೆದಿತ್ತು. ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಆದರೆ, ಈ ಚುನಾವಣೆಯಲ್ಲಿ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗಿ ಹೋಗಿದೆ.

ಐತಿಹಾಸಿಕ ಪ್ರವಾಸಿ ಕ್ಷೇತ್ರಗಳ ಜಿಲ್ಲೆ ಕೈವಶವಾಗಿದೆ. ಜಿಲ್ಲೆಯಲ್ಲಿ ಮೂರು ಸ್ಥಾನಗಳನ್ನು ಗಳಿಸಿ ಬಲ ಹೆಚ್ಚಿಸಿಕೊಳ್ಳುವ ಬಿಜೆಪಿ ಪಕ್ಷದ ತಂತ್ರ ಫಲಿಸಿಲ್ಲ. ಹಾಲಿ ಶಾಸಕರಾಗಿದ್ದ ಸಂಗಣ್ಣ ಕರಡಿ ಸಹ ಸೋಲುಂಡಿದ್ದು ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.

ಕೊಪ್ಪಳ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ : ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಪಕ್ಷ ಪಡೆದ ಮತಗಳು ಸೋತವರು ಪಕ್ಷ ಪಡೆದ ಮತಗಳು
ಕುಷ್ಟಗಿ ದೊಡ್ಡನಗೌಡ ಬಿಜೆಪಿ 44,451 ಅಮರೇಗೌಡ ಬಯ್ಯಾಪುರ ಕಾಂಗ್ರೆಸ್ 40,007
ಕನಕಗಿರಿ ಶಿವರಾಜ ತಂಗಡಗಿ ಕಾಂಗ್ರೆಸ್ 49,451 ಬಸವರಾಜ ಧಡೇಸಗೂರು ಕೆಜೆಪಿ 44,399
ಗಂಗಾವತಿ ಇಕ್ಬಾಲ್ ಅನ್ಸಾರಿ ಜೆಡಿಎಸ್ 60,303 ಪರಣ್ಣ ಮುನವಳ್ಳಿ ಬಿಜೆಪಿ 30,514
ಯುಲಬುರ್ಗ ಬಸವರಾಜ ರಾಯರೆಡ್ಡಿ ಕಾಂಗ್ರೆಸ್ 52,388 ಹಾಲಪ್ಪ ಆಚಾರ್ ಬಿಜೆಪಿ 35,488
ಕೊಪ್ಪಳ ರಾಘವೇಂದ್ರ ಹಿಟ್ನಾಳ್ ಕಾಂಗ್ರೆಸ್ 81,047 ಸಂಗಣ್ಣ ಕರಡಿ ಬಿಜೆಪಿ 54,256
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+