ಕೊಪ್ಪಳದಲ್ಲಿ ಯಾರ್ಯಾರ ನಡುವೆ ಮಾರಾಮಾರಿ
ಭತ್ತದ
ಕಣಜ ಎಂದು ಹೆಸರಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಬಿಸಿಲು ಎಷ್ಟು ಸ್ಥಿರವಾಗಿರುತ್ತದೆಯೋ ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರಗಳು ಅಷ್ಟೇ ಅಸ್ಥಿರವಾಗಿರುತ್ತವೆ. ಇಲ್ಲಿ ಇಂಥೋರೇ ಗೆಲ್ತಾರೆ ಎಂದು ಖಚಿತವಾಗಿ ಹೇಳುವುದು ಅಸಾಧ್ಯ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಗಳಿಗೆ ಇದ್ದಷ್ಟೇ ಸಮಪ್ರಮಾಣದ ಅವಕಾಶಗಳು ಹೊಸದಾಗಿ ಹುಟ್ಟಿರುವ ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ಸಿಗೂ ಇವೆ. ಪಕ್ಷಕ್ಕೆ ದ್ರೋಹ ಬಗೆದು 'ಆಪರೇಷನ್'ಗೊಳಗಾದವರಿಗೆ, ಅಭ್ಯರ್ಥಿಯನ್ನೇ ಮರೆತ ಪಕ್ಷಕ್ಕೆ ಮತದಾರರು ಪಾಠ ಕಲಿಸುವರೆ? ಕೊಪ್ಪಳದಲ್ಲಿ ಯಾವ ಜಾತಿಯ ಬೆಂಬಲ ಯಾರಿಗಿದೆ ಎಂಬುದರ ನೋಟ ಇಲ್ಲಿದೆ. id="toptextpromo">ಕೊಪ್ಪಳ
ಕ್ಷೇತ್ರ ಆಪರೇಷನ್ ಕಮಲದ ಕ್ಷೇತ್ರ. ಸಂಗಣ್ಣ ಕರಡಿ ಹಾಗೂ ಕೆ. ಬಸವರಾಜ್ ಹಿಟ್ನಾಳ್ ನಡುವೆ ನೇರ ಪೈಪೋಟಿ ಇದೆ. ಸಂಗಣ್ಣ ಕರಡಿ ಮಾಡಿರುವ ಒಂದಿಷ್ಟು ಅಭಿವೃದ್ಧಿ ಕಾರ್ಯಗಳು ಹಾಗೂ ವೈಯಕ್ತಿಕ ವರ್ಚಸ್ಸಿನಿಂದಾಗಿ ಲಿಂಗಾಯತ ಸಮುದಾಯದ ಬಹಳಷ್ಟು ಮತಗಳು ಅವರ ಪಾಲಾಗಲಿವೆ. ಇತ್ತ ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಶಾಸಕ ಕೆ. ಬಸವರಾಜ್ ಹಿಟ್ನಾಳ್ ಹಾಗೂ ಅವರ ಪುತ್ರ ಕೆ. ರಾಘವೇಂದ್ರ ಹಿಟ್ನಾಳ್ ಇಬ್ಬರೂ ಬೇಡಿಕೆ ಇಟ್ಟಿದ್ದಾರೆ. ಇಬ್ಬರ ಪೈಕಿ ಯಾರಿಗೇ ಸಿಕ್ಕಿದ್ರೂ ಕೂಡಾ, 15 ಸಾವಿರದಷ್ಟು ಮುಸ್ಲಿಂ ವೋಟ್‌ಗಳು ಹಾಗೂ ತಮ್ಮದೇ ಕುರುಬ ಸಮಾಜದ 25 ಸಾವಿರದಷ್ಟು ವೋಟ್‌ಗಳು ಅವರಿಗೆ ಲಭಿಸಲಿವೆ. id='are-slot-1' class='oiad oi-axt oiadv'> id='top-searched-articles'>ಇನ್ನು
ಬೈ ಎಲೆಕ್ಷನ್‌ನಲ್ಲಿ ಸೋತು ಸುಣ್ಣವಾಗಿರುವ ಜೆಡಿಎಸ್‌ನ ಪ್ರದೀಪಗೌಡ ಪಾಟೀಲ್ ಕೂಡಾ ಈ ಬಾರಿ ರಾಜಕೀಯ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಟಿಕೆಟ್ ಪ್ರದೀಪ್‌ಗೌಡಗೆ ಎಂದು ಹೇಳಲಾಗುತ್ತಿದ್ದರೂ, ಇತ್ತೀಚೆಗೆ ಜೆಡಿಎಸ್ ಸೇರಿರುವ ಸುರೇಶ್ ಭೂಮರಡ್ಡಿ ನಡುವೆ ಹಗ್ಗಾಜಗ್ಗಾಟ ಶುರುವಾಗಿದೆ. ಇಲ್ಲಿ ಭಿನ್ನಮತ ಸ್ಪೋಟವಾದರೂ ಅಚ್ಚರಿಪಡಬೇಕಾಗಿಲ್ಲ. ಆಕಾಂಕ್ಷಿ ಸುರೇಶ್ ಭೂಮರಡ್ಡಿ ಹಾಗೂ ಪ್ರದೀಪಗೌಡ ವರಸೆಯಲ್ಲಿ ಅಳಿಯ-ಮಾವ. ಈ ಇಬ್ಬರು ಲಿಂಗಾಯತ ರೆಡ್ಡಿ ಸಮುದಾಯದವರಾಗಿದ್ದು, ಸಂಗಣ್ಣ ಕರಡಿಗೆ ಬರುವ ಲಿಂಗಾಯತ ಮತಗಳು ಹಂಚಿಹೋಗಲಿವೆ. ಸಂಗಣ್ಣ, ಪ್ರದೀಪಗೌಡ ಅಥವಾ ಸುರೇಶ್ ಭೂಮರಡ್ಡಿ ನಡುವೆ ಮತ್ತೊಬ್ಬ ಲಿಂಗಾಯತ ಅಭ್ಯರ್ಥಿ ಕಣಕ್ಕೆ ಇಳಿದ್ರೆ, ಹಿಟ್ನಾಳ್ ಗೆಲುವು ಸುಲಭವಾಗುತ್ತೆ.











Click it and Unblock the Notifications