ಬಳ್ಳಾರಿ ಕದನಕಣ : ಬಳ್ಳಾರಿ ನಗರ
ಬಳ್ಳಾರಿ ನಗರ : ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ಗೆಲುವು ನೀಡಿ ಬಿಜೆಪಿಯ ಸುಷ್ಮಾ ಸ್ವರಾಜ್‌ಗೆ ಸೋಲುಣಿಸಿದ ಕ್ಷೇತ್ರವಿದು. ಈ ಕ್ಷೇತ್ರದಲ್ಲಿ ಆಂಧ್ರ ಶೈಲಿಯ ರಾಜಕಾರಣವಿದ್ದರೂ ರೆಡ್ಡಿಗಳ ಹಿಡಿತ ಬಲವಾಗಿದೆ. ಲಿಂಗಾಯತರ ಮತಗಳು ಹೆಚ್ಚಾಗಿದ್ದು, ಈ ಮತಗಳು ಗೆಲುವಿಗೆ ನಿರ್ಣಾಯಕವಾಗಿವೆ. ಅಲ್ಲದೆ ಬಲಿಜ ಕುರುಬ ಸಮಾಜದ ಮತಗಳು 2ನೇ ದೊಡ್ಡ ಸಂಖ್ಯೆಯಲ್ಲಿವೆ.
ಕಳೆದ ಚುನಾವಣೆಯಲ್ಲಿ ಬಿಜೆಪಿಯ ಅಲೆ, ರೆಡ್ಡಿ ಸಹೋದರರ ಹಣ ಬಲದಿಂದ ಬಿಜೆಪಿಯ ಗಾಲಿ ಸೋಮಶೇಖರರೆಡ್ಡಿ ಗೆಲುವು ಸಾಧಿಸಿದ್ದರು. ಸೋಮಶೇಖರರೆಡ್ಡಿ ವಿರುದ್ದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಕೇವಲ ಒಂದು ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು. ಆದರೆ ಈ ಬಾರಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಕಿತ್ತಾಟ ಶುರುವಾಗಿದೆ.
ರಾಜ್ಯಸಭಾ ಸದಸ್ಯ ಅನಿಲ್ ಲಾಡ್, ಮಾಜಿ ಸಚಿವರಾದ ದಿವಾಕರ ಬಾಬು, ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ, ಗಣಿ ಉದ್ಯಮಿ ಇಕ್ಬಾಲ್ ಅಹ್ಮದ್ ಹೊತ್ತೂರ ಸ್ಪರ್ಧೆಯಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ಇರಲಿದೆ. ಜೆಡಿಎಸ್ ಮುನ್ನಾಭಾಯಿಯನ್ನು ಕಣಕ್ಕೆ ಇಳಿಸಲು ರೆಡಿಯಾಗಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗೆ ಕೆಜೆಪಿ ಟಿಕೆಟ್ ನೀಡಿದ್ರೆ ಮಾತ್ರ ತ್ರಿಕೋನ ಸ್ಪರ್ಧೆಯಾಗುವ ಸಾಧ್ಯತೆಯಿದೆ. ಲಿಂಗಾಯತರು, ಬಲಿಜ ಜನಾಂಗದವರು ಮತ್ತು ಕುರುಬರ ಮತಗಳೇ ನಿರ್ಣಾಯಕ. [ಮುಂದಿನ ಕ್ಷೇತ್ರ : ಕಂಪ್ಲಿ]
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ













Click it and Unblock the Notifications