ಬಳ್ಳಾರಿ ಕದನಕಣ : ಕಂಪ್ಲಿ

ಕಂಪ್ಲಿ : ವಾಲ್ಮೀಕಿ ನಾಯಕರ ಮತಗಳು 40 ಸಾವಿರ ಇರುವುದರಿಂದ ಬಿಎಸ್‌ಆರ್ ಸಂಸ್ಥಾಪಕ ಶ್ರೀರಾಮುಲು ಬೆಂಬಲಿಗರಿಗೆ ಹೇಳಿ ಮಾಡಿಸಿದ ಜಾಗ. ಹೀಗಾಗಿ ಶ್ರೀರಾಮುಲು ಅಳಿಯ ಟಿ.ಎಚ್. ಸುರೇಶ್ ಬಾಬು ಕಳೆದ ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸಿ 22,336 ಮತಗಳ ಅಂತರದಿಂದ ಗೆದ್ದಿದ್ದರು. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸಣ್ಣ ಹನುಮಕ್ಕ ಅವರನ್ನು ಸುರೇಶ್ ಬಾಬು ಸದೆಬಡಿದಿದ್ದರು.
ಲಿಂಗಾಯತ ಹಾಗೂ ಕುರುಬ ಮತಗಳೂ ಇಲ್ಲಿ ನಿರ್ಣಾಯಕವಾಗಿದೆ. ಹೀಗಾಗಿ ಮತ್ತೊಂದು ಬಾರಿ ಬಿಎಸ್‌ಆರ್‌ನಿಂದ ಶಾಸಕ ಸುರೇಶ್ ಬಾಬು ಕಣಕ್ಕೆ ಇಳಿಯುತ್ತಿದ್ದಾರೆ. ಲಿಂಗಾಯತ ಮತಗಳನ್ನೇ ನೆಚ್ಚಿಕೊಂಡಿರುವ ಕೆಜೆಪಿ, ಮಾಜಿ ಶಾಸಕ ಎಚ್ ಡಿ ಬಸವರಾಜರನ್ನು ಕಣಕ್ಕೆ ಇಳಿಸುತ್ತಿದೆ. ಕಾಂಗ್ರೆಸ್ ಪಕ್ಷ ಗುಜ್ಜಲ್ ನಾಗರಾಜ ಅಥವಾ ಜೆ ಎನ್ ಗಣೇಶ್‌ಗೆ ಟಿಕೆಟ್ ಕೊಡಬಹುದು. ಹೀಗಾಗಿ ಕಾಂಗ್ರೆಸ್ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆಯಿದೆ. [ಮುಂದಿನ ಕ್ಷೇತ್ರ : ಸಂಡೂರು]
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications