ಬಳ್ಳಾರಿ ಕದನಕಣ : ಸಂಡೂರು (ಎಸ್‌ಟಿ ಮೀಸಲು)

ಗಣಿಧಣಿಗಳ ಪಾರುಪತ್ಯ ಕಂಡಿರುವ ಬಳ್ಳಾರಿಯಲ್ಲಿ ಇನ್ನೂ ದುಡ್ಡಿನದೇ ಮೇಲಾಟವಾಗಿದ್ದರೂ ಲಿಂಗಾಯತ, ವಾಲ್ಮಿಕಿ, ಕುರುಬ, ಮುಸ್ಲಿಂ, ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಮತಗಳನ್ನು ಬುಟ್ಟಿಗೆ ಹಾಕಿಕೊಂಡವರು ಮಾತ್ರ ಇಲ್ಲಿ ಗೆಲ್ಲಲು ಸಾಧ್ಯ. ಶ್ರೀರಾಮುಲು ಮತ್ತು ರೆಡ್ಡಿಗಳ ನಡುವೆ ಒಡಕು ಮೂಡಿದೆ ಎಂಬ ಸುದ್ದಿ, ಹಾಗು ಟಿಕೆಟ್‌ಗಾಗಿ ಕಾಂಗ್ರೆಸ್ಸಿನಲ್ಲಿ ಭಾರೀ ಪೈಪೋಟಿ ನಡೆಯುತ್ತಿರುವುದರಿಂದ ಈ ಬಾರಿ ಏನು ಬೇಕಾದರೂ ಸಂಭವಿಸಬಹುದು. ಕಳೆದ ಬಾರಿ ಇದ್ದ ಬಿಜೆಪಿ ಅಲೆ ಈ ಬಾರಿ ಇಲ್ಲದಿದ್ದರೂ ಹಣದ ಪ್ರಭಾವ ತುಸುವೂ ಕಡಿಮೆಯಾಗಿಲ್ಲ.

ಸಂಡೂರು (ಎಸ್‌ಟಿ ಮೀಸಲು) : 42 ಸಾವಿರ ಪರಿಶಿಷ್ಟ ಪಂಗಡದ ಮತಗಳನ್ನ ಹೊಂದಿರುವ ಈ ಕ್ಷೇತ್ರದಲ್ಲಿ, 11 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಲಿಂಗಾಯತರು, ಕುರುಬರ ಮತಗಳು 2ನೇ ಅತಿ ಹೆಚ್ಚು ಮತಗಳಾಗಿವೆ. ಲಾಡ್ ದರ್ಬಾರ್ ಇಲ್ಲಿ ಕಾಂಗ್ರೆಸ್‌ಗೆ ಪ್ರಬಲ ಅಸ್ತ್ರವಾಗಿದೆ. ಎಸ್ ಟಿ ಮೀಸಲು ಕ್ಷೇತ್ರವಾದ ಸಂಡೂರಿನಲ್ಲಿ ಈ ಬಾರಿಯೂ ಲಾಡ್ ಸಹೋದರರ ತೆಕ್ಕೆಯಲ್ಲಿರುವ ಶಾಸಕ ತುಕಾರಾಂ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲು ಸಜ್ಜಾಗಿದ್ದಾರೆ.

ಕಾಂಗ್ರೆಸ್‌ಗೆ ಬಿಎಸ್‌ಆರ್ ಕಾಂಗ್ರೆಸ್ ಪೈಪೋಟಿ ನೀಡಲು ಈಗಾಗಲೇ ಚನ್ನಬಸಪ್ಪರನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಜೆಡಿಎಸ್ ಹಾಗೂ ಬಿಜೆಪಿ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟದಲ್ಲಿವೆ. ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವ ಕೆಜೆಪಿ, ಎಂಜಿನಿಯರ್ ರವಿ ಪ್ರಕಾಶರನ್ನ ಕಣಕ್ಕೆ ಇಳಿಸಿದೆ. ಆದ್ರೆ ಲಾಡ್ ಸಹೋದರರ ಹಣ ಬಲ ಹಾಗೂ ಕಾಂಗ್ರೆಸ್‌ನ ಭದ್ರ ನೆಲೆ ಇರುವ ಈ ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್ ಪಕ್ಷವೇ ಜಯಗಳಿಸುತ್ತಾ ಅನ್ನೋದು ಸದ್ಯದ ಕುತೂಹಲ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+