ಬಳ್ಳಾರಿ ಕದನಕಣ : ಹೊಸಪೇಟೆ(ವಿಜಯನಗರ)

ಹೊಸಪೇಟೆ(ವಿಜಯನಗರ) : ಮುಸ್ಲಿಮರ 40 ಸಾವಿರ ಮತಗಳು ಇಲ್ಲಿವೆ. ಅಷ್ಟೇ ಅಲ್ಲ, ಪರಿಶಿಷ್ಟ ಪಂಗಡ, ಲಿಂಗಾಯತ, ಕುರುಬ ಮತಗಳು ಸಹ ಒಂದೇ ಸಮನಾಗಿ ಇರುವುದರಿಂದ ಮತಗಳು ಹಂಚಿ ಹೋಳಾಗುವ ಸಾಧ್ಯತೆಯಿದೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಹೊಸಪೇಟೆ(ವಿಜಯನಗರ) ಕ್ಷೇತ್ರ ಚಿಕ್ಕದಾದರೂ ಖ್ಯಾತಿ ಮಾತ್ರ ದೊಡ್ಡದು. ಯಾಕಂದ್ರೆ ಗಣಿ ಧಣಿಗಳದ್ದೆ ಇಲ್ಲಿ ಕಾರುಬಾರು.
ಕಳೆದ ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಆನಂದ್ ಸಿಂಗ್ ಗೆಲುವು ಸಾಧಿಸಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಆದ್ರೆ ಆನಂದ್ ಸಿಂಗ್‌ಗೆ ಈ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡುವ ಮನಸ್ಸಿಲ್ಲ. ಹೀಗಾಗಿ ಕಾಂಗ್ರೆಸ್ ಟಿಕೆಟ್‌ನತ್ತ ನೋಡಿದ್ರೂ ಅವರಿಗೆ ಟಿಕೆಟ್ ಇಲ್ಲ ಎನ್ನುವುದು ಸ್ಪಷ್ಟವಾಯಿತು. ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡೋಣ ಈಗ ಕಾಂಗ್ರೆಸ್ ಗೆಲ್ಲಿಸಿ ಅನ್ನುವ ಕಂಡೀಷನ್ ಕಾಂಗ್ರೆಸ್‌ನಿಂದ ಬರ‍್ತಾ ಇದ್ದಂತೆ ಆನಂದ್‌ಸಿಂಗ್, ಪಕ್ಷೇತರರಾಗಿ ಸ್ಪರ್ಧೆಗಿಳಿಯುವ ಹೇಳಿಕೆ ನೀಡಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಅವರನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳಲು ಎಲ್ಲ ಪ್ರಯತ್ನಗಳು ನಡೆದಿವೆ.
ಆದರೆ, ಜೆಡಿಎಸ್‌ನತ್ತ ಹೋದರೆ ಹೇಗೆ ಅನ್ನುವ ಚರ್ಚೆ ಶುರುವಾಗಿದೆ. ಆನಂದ್ ಸಿಂಗ್ ದೊಡ್ಡಪ್ಪನ ಮಗ ದೀಪಕ್ ಸಿಂಗ್ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕರಾದ ಗವಿಯಪ್ಪ, ಅಬ್ದುಲ್ ವಹಾಬ್ ಸಹ ಟಿಕೆಟ್ ಆಕ್ಷಾಂಕಿಗಳಾಗಿದ್ದಾರೆ. ಈ ಇಬ್ಬರು ಸಹೋದರರಿಗೆ ಸವಾಲಾಗಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸಹೋದರಿ ರಾಣಿ ಸಂಯುಕ್ತಾ ಸಿಂಗ್ ಕಣಕ್ಕೆ ಇಳಿಯುತ್ತಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಅಣ್ಣ ತಂಗಿಯರ ಮಧ್ಯದ ಸವಾಲಿನಲ್ಲಿ ಮತಗಳು ವಿಭಜನೆಯಾಗುವ ಸಾದ್ಯತೆಯಿದೆ. ಹೀಗಾಗಿ ಕಾಂಗ್ರೆಸ್ ಇಲ್ಲಿ ಮುಸ್ಲಿಂ ಕೋಟಾದಡಿಯಲ್ಲಿ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಲು ಚಿಂತನೆ ನಡೆಸುತ್ತಿದೆ. [ಮುಂದಿನ ಕ್ಷೇತ್ರ : ಬಳ್ಳಾರಿ ನಗರ]
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications