ಬಳ್ಳಾರಿಯಲ್ಲಿ ಜಾತಿಮತ ಒಲಿಸಿಕೊಂಡೋನೇ ಬಾಸು

Bellary district latest updates
ಗಣಿಧಣಿಗಳ ಪಾರುಪತ್ಯ ಕಂಡಿರುವ ಬಳ್ಳಾರಿಯಲ್ಲಿ ಇನ್ನೂ ದುಡ್ಡಿನದೇ ಮೇಲಾಟವಾಗಿದ್ದರೂ ಲಿಂಗಾಯತ, ವಾಲ್ಮಿಕಿ, ಕುರುಬ, ಮುಸ್ಲಿಂ, ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಮತಗಳನ್ನು ಬುಟ್ಟಿಗೆ ಹಾಕಿಕೊಂಡವರು ಮಾತ್ರ ಇಲ್ಲಿ ಗೆಲ್ಲಲು ಸಾಧ್ಯ. ಶ್ರೀರಾಮುಲು ಮತ್ತು ರೆಡ್ಡಿಗಳ ನಡುವೆ ಒಡಕು ಮೂಡಿದೆ ಎಂಬ ಸುದ್ದಿ, ಹಾಗು ಟಿಕೆಟ್‌ಗಾಗಿ ಕಾಂಗ್ರೆಸ್ಸಿನಲ್ಲಿ ಭಾರೀ ಪೈಪೋಟಿ ನಡೆಯುತ್ತಿರುವುದರಿಂದ ಈ ಬಾರಿ ಏನು ಬೇಕಾದರೂ ಸಂಭವಿಸಬಹುದು. ಕಳೆದ ಬಾರಿ ಇದ್ದ ಬಿಜೆಪಿ ಅಲೆ ಈ ಬಾರಿ ಇಲ್ಲದಿದ್ದರೂ ಹಣದ ಪ್ರಭಾವ ತುಸುವೂ ಕಡಿಮೆಯಾಗಿಲ್ಲ.

ಬಳ್ಳಾರಿ ಗ್ರಾಮಾಂತರ (ಎಸ್‌ಟಿ ಮೀಸಲು) : ಕಳೆದ ಚುನಾವಣೆಯ ಮೂಲಕ ಹುಟ್ಟಿಕೊಂಡಿರುವ ಈ ಕ್ಷೇತ್ರ ಪಾಲಿಕೆ ವ್ಯಾಪ್ತಿಯ 9 ವಾರ್ಡ್‌ಗಳು ಹಾಗೂ ಗ್ರಾಮೀಣ ಭಾಗಗಳನ್ನು ಒಳಗೊಂಡಿದೆ. ಈ ಕ್ಷೇತ್ರದ ಮೂಲಕ ಶ್ರೀರಾಮುಲು ತಮ್ಮ ರಾಜಕೀಯ ಭವಿಷ್ಯ ಕಂಡುಕೊಂಡಿದ್ದಾರೆ. ಅಲ್ಲದೇ ಕ್ಷೇತ್ರದ ಮೇಲೆ ಬಿಗಿ ಹಿಡಿತ ಸಹ ಸಾಧಿಸಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಶ್ರೀರಾಮುಲು ಈ ಬಾರಿಯೂ ಈ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಹೆಚ್ಚಾಗಿದ್ದರೂ ಇದುವರೆಗೂ 2ನೇ ಅತಿ ದೊಡ್ಡ ಸಂಖ್ಯೆಯಲ್ಲಿರುವ ಮುಸ್ಲಿಂ ಮತ್ತು ನಾಯಕರ ಮತಗಳು ಶ್ರೀರಾಮುಲು ಪರವಾಗಿ ಚಲಾವಣೆಯಾಗಿವೆ. ಹೀಗಾಗಿ ಶ್ರೀರಾಮುಲುಗೆ ಈ ಕ್ಷೇತ್ರದಲ್ಲಿ ತುಂಬಾ ಜನಮನ್ನಣೆ ಇದೆ.

ಶ್ರೀರಾಮುಲು ವಿರುದ್ದ ಕಾಂಗ್ರೆಸ್ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟದಲ್ಲಿದೆ. ವಂಡ್ರಿ ಹೊನ್ನೂರಪ್ಪ, ವಿಕೆ ಬಸಪ್ಪ ಕಾಂಗ್ರೆಸ್ ಟಿಕೆಟ್‌ನ ಪ್ರಬಲ ಆಕ್ಷಾಂಕಿಯಾಗಿದ್ದರೂ ಕೂಡಾ, ಕೂಡ್ಲಗಿಯ ಬಿಜೆಪಿ ಶಾಸಕ ನಾಗೇಂದ್ರಗೆ ಕಾಂಗ್ರೆಸ್ ಆಹ್ವಾನ ನೀಡಿದೆ. ಆದ್ರೆ ನಾಗೇಂದ್ರ ಶ್ರೀರಾಮುಲು ವಿರುದ್ಧ ಸ್ಪರ್ಧೆ ಮಾಡಲು ಹಿಂದೇಟು ಹಾಕುತ್ತಿರುವ ಪರಿಣಾಮ, ವಂಡ್ರಿ ಹೊನ್ನೂರಪ್ಪಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ.

ಜೆಡಿಎಸ್ ಸಹ ತಾಯಣ್ಣ ಅವರಿಗೆ ತಯಾರಿ ನಡೆಸಲು ಸೂಚಿಸಿದೆ. ಈ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಹೆಚ್ಚಾಗಿದ್ದರೂ ಕೂಡಾ ಕೌಲ್‌ಬಜಾರ್‌ನ ಮುಸ್ಲಿಂ ಜನಾಂಗ ಯಾರ ಪರ ಮತ ಚಲಾಯಿಸುತ್ತೋ ಅವರು ಇಲ್ಲಿ ಗೆಲುವು ಸಾಧಿಸುತ್ತಿರುವುದು ಕ್ಷೇತ್ರದ ವಿಶೇಷವಾಗಿದೆ. ಹೀಗಾಗಿ ಬಿಎಸ್‌ಆರ್ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ಇದೆ. [ಹೊಸಪೇಟೆ]

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+