ಲೋಕಸತ್ತಾ ಮೂರನೇ ಪಟ್ಟಿಯಲ್ಲಿ ರೈತ,ಆರ್ ಜೆ, ಟೆಕ್ಕಿ

ಮೂರನೇ ಪಟ್ಟಿಯಲ್ಲಿ 29 ವರ್ಷದ ಸಾಫ್ಟ್ ವೇರ್ ಉದ್ಯೋಗಿ ನಾಗೇಶ್ ವಿಲಾಸ್ ಸಖಾರೆ, ಸ್ವಚ್ಛ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಸಿಂಗಾಪುರದಲ್ಲಿನ ತಮ್ಮ ಉದ್ಯೋಗವನ್ನು ತೊರೆದು ರಾಜ್ಯಕ್ಕೆ ಮರಳಿದ್ದಾರೆ. ನಾಗೇಶ್ ಸಖಾರೆ ಅವರು ಬೆಳಗಾವಿ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
51 ವರ್ಷದ ಸಿವಿಲ್ ಇಂಜಿನಿಯರ್ ನಾಗರಾಜ್ ತಿಗಡಿ ಅವರು ಹುಬ್ಬಳ್ಳಿ- ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಪತ್ರಕರ್ತ ಸಿ.ಜಿ ಮುರಳಿ ಅವರು ಕೋಲಾರದಿಂದ ಸ್ಪರ್ಧೆಗಿಳಿಯುತ್ತಿದ್ದಾರೆ.
ಚುನಾವಣೆಗೂ ಮುನ್ನ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರಾಟ ಭರದಿಂದ ಸಾಗಿದೆ. ಯಾವುದೇ ಧ್ಯೇಯ ಮತ್ತು ಸಿದ್ಧಾಂತಗಳಿಗೆ ಬೆಲೆ ಇಲ್ಲ. ಪ್ರಮುಖ ಪಕ್ಷಗಳಲ್ಲಿ ಯಾವುದೇ ರೀತಿಯ ಭಿನ್ನತೆ ಇಲ್ಲ. ಎಲ್ಲಾ ಪ್ರಮುಖ ಪಕ್ಷಗಳಲ್ಲೂ ಅದೇ ನಾಯಕರುಗಳು ಇರಬೇಕಾದರೆ ಭಿನ್ನತೆ ಎಲ್ಲಿರ್ಯ್ತ್ತದೆ ಎಂದು ರಾಜ್ಯಾಧ್ಯಕ್ಷ ಅಶ್ವಿನ್ ಮಹೇಶ್ ಪ್ರಶ್ನಿಸಿದ್ದಾರೆ.
ಮೊದಲನ ಪಟ್ಟಿಯಲ್ಲಿ 4 ಅಭ್ಯರ್ಥಿಗಳನ್ನು ಹೆಸರಿಸಲಾಗಿತ್ತು. ಡಾ. ಅಶ್ವಿನ್ ಮಹೇಶ್(ಬೊಮ್ಮನಹಳ್ಳಿ), ಶಾಂತಲಾ ದಾಮ್ಲೆ(ಬಸವನಗುಡಿ), ಡಾ. ಮೀನಾಕ್ಷಿ ಭರತ್(ಮಲ್ಲೇಶ್ವರ) ಹಾಗೂ ರವಿಕೃಷ್ಣಾರೆಡ್ಡಿ(ಬಿಟಿಎಂ ಲೇಔಟ್). ಈಗಿನ ಪಟ್ಟಿ ಸೇರಿ ಒಟ್ಟಾರೆ 15 ಅಭ್ಯರ್ಥಿಗಳ ಹೆಸರನ್ನು ಅಂತ್ಯಗೊಳಿಸಲಾಗಿದೆ. | ಪಕ್ಷದ ಪರಿಚಯ ಇಲ್ಲಿದೆ
ಮೂರನೇ ಪಟ್ಟಿ ಇಲ್ಲಿದೆ:
16 : ಸಿದ್ದಲಿಂಗ ಚಂದ್ರಣ್ಣ ಕೆರೂರು (49 ವರ್ಷ), ರೈತ, ಸಾಮಾಜಿಕ ಕಾರ್ಯಕರ್ತ : ಜೇವರ್ಗಿ
17: ಎಸ್ ವೆಂಕಟೇಶ್ ಮೂರ್ತಿ(ಥಾಮಸ್ ಮ್ಯಾಥ್ಯೂ) (28), ಪ್ರಚಾರಕ, : ಭದ್ರಾವತಿ
18: ನವೀನ್ ಕುಮಾರ್ ಬಿ.ಡಿ (33), ಉದ್ಯಮಿ : ಶೃಂಗೇರಿ
19: ದೀಪಕ್ ಎಂ.(27) ಉಪನ್ಯಾಸಕ : ಬಸವಕಲ್ಯಾಣ
20: ನಾಗೇಶ್ ವಿಲಾಸ್ ಸಖಾರೆ,(29) ಟೆಕ್ಕಿ : ಬೆಳಗಾವಿ ಉತ್ತರ
21: ನಾಗರಾಜ್ ಶಂಕರರಾವ್ ತಿಗಡಿ (51), ಸಿವಿಲ್ ಇಂಜಿನಿಯರ್ : ಹುಬ್ಬಳ್ಳಿ -ಧಾರವಾಡ ಪಶ್ಚಿಮ
22: ರೋಹಿತ್ ಪಟೇಲ್,(28) ರೇಡಿಯೋ ಜಾಕಿ : ಜಯನಗರ
23: ಮುರಳಿ ಸಿ.ಜಿ (37) ಪತ್ರಕರ್ತ : ಕೋಲಾರ
24: ಅಜಯ್ ಪಟೇಲ್ (50) ವಕೀಲ : ಭಾಲ್ಕಿ
25: ಮಧು ಬಿ.ಎಂ (30) ಟಿವಿ ಮಾಧ್ಯಮದ ಸಂಪಾದಕ : ಕಡೂರು
26: ಕೃಷ್ಣಪ್ಪ ಟಿ.ಆರ್ (62), ರೈತ, ಸಾಮಾಜಿಕ ಕಾರ್ಯಕರ್ತ : ಸಾಗರ
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ











Click it and Unblock the Notifications