ಕಾಂಗ್ರೆಸ್ 177 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ನವದೆಹಲಿ, ಏ 5: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಕೊನೆಗೂ ಅಳೆದು ತೂಗಿ 177 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿದೆ. ಆದರೂ ತಲೆನೋವಾಗಿ ಪರಿಣಮಿಸಿರುವ ಕೆಲವು ಕ್ಷೇತ್ರಗಳ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಿಲ್ಲ.
ಕಾಂಗ್ರೆಸ್ ಪಟ್ಟಿಯಲ್ಲಿ ಪ್ರಮುಖವಾಗಿ ಗಮನಿಸ ಬೇಕಾದ ಅಂಶವೇನೆಂದರೆ ಬಿಜೆಪಿಯಿಂದ ಇತ್ತೀಚೆಗೆ ಹೊರನಡೆದಿದ್ದ ಸಿ ಪಿ ಯೋಗೀಶ್ವರ್ ಅವರಿಗೆ ಮುಖಭಂಗವಾಗಿದ್ದು, ಚನ್ನಪಟ್ಟಣದಲ್ಲಿ ಪಕ್ಷ ಸಾದತ್ ಆಲಿಖಾನ್ ಅವರಿಗೆ ಟಿಕೆಟ್ ನೀಡಿದೆ. ಯೋಗೀಶ್ವರ್ ತಾನೇ ಕಾಂಗ್ರೆಸ್ ಅಭ್ಯರ್ಥಿಯೆಂದು ಪ್ರಚಾರ ಕೂಡಾ ಆರಂಭಿಸಿದ್ದರು.
ಅದಲ್ಲದೇ, ಮಾಜಿ ಮುಖ್ಯಮಂತ್ರಿ ಜೆ ಎಚ್ ಪಟೇಲ್ ಪುತ್ರ ಮಹಿಮಾ ಪಟೇಲಿಗೆ ಚನ್ನಗಿರಿ ಕ್ಷೇತ್ರದ ಟಿಕೆಟ್ ಒಲಿಯಲಿಲ್ಲ. ಅಲ್ಲಿ ವಡ್ನಾಳ್ ನಾಗರಾಜ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ರೆಹಮಾನ್ ಖಾನ್ ಮತ್ತು ಮುನಿಯಪ್ಪ ತಮ್ಮ ಮಕ್ಕಳಿಗೆ ಬಯಸಿದ್ದ ಮೂರು ಕ್ಷೇತ್ರಗಳ (ಚಿತ್ತಾಪುರ, ಜಯನಗರ ಮತ್ತು ಕೆಜಿಎಫ್) ಪಟ್ಟಿಯನ್ನು ಅಂತಿಮಗೊಳಿಸಲಿಲ್ಲ.
ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ಅಜಯ್ ಸಿಂಗ್ ಬಯಸಿದ್ದ ಜೇವರ್ಗಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರ ಸೋದರ ಬಿ.ಕೆ. ಶಿವರಾಂ ಸ್ಪರ್ಧೆ ಮಾಡಲು ಬಯಸಿರುವ ಮಲ್ಲೇಶ್ವರ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿಲ್ಲ.
ಬಾಕಿ ಉಳಿದ ಕ್ಷೇತ್ರಗಳಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭಾರತಕ್ಕೆ ಮರಳಿದ ನಂತರ ಪ್ರಕಟಿಸಲು ಕಾಂಗ್ರೆಸ್ ನಿರ್ಧರಿಸಿದೆ. ಮೊದಲ ಪಟ್ಟಿಯಲ್ಲಿ ಮುಸ್ಲಿಂ13, ಕ್ರಿಸ್ಚಿಯನ್ ಸಮುದಾಯದ ಇಬ್ಬರಿಗೆ ಮತ್ತು 8 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.
ಬಿಡುಗಡೆಯಾದ 177 ಅಭ್ಯರ್ಥಿಗಳ ಸಂಪೂರ್ಣ ಪಟ್ಟಿಯನ್ನು ಸ್ಲೈಡಿನಲ್ಲಿ ನೀಡಲಾಗಿದೆ.

ಕಾಂಗ್ರೆಸ್ ಮೊದಲ ಪಟ್ಟಿ
ಉಡುಪಿ - ಪ್ರಮೋದ್ ಮಧ್ವರಾಜ್
ಕಾರ್ಕಳ - ಗೋಪಾಲ ಭಂಡಾರಿ
ಕುಂದಾಪುರ - ಎಂ ಶಿವರಾಮ್ ಶೆಟ್ಟಿ
ಮಡಿಕೇರಿ - ಲೋಕೇಶ್ ಕೆ ಎಂ
ಮಂಗಳೂರು (ಉಳ್ಳಾಲ) - ಯು ಟಿ ಖಾದರ್
ಮಂಗಳೂರು ನಗರ (ದ) - ಜಾನ್ ರಿಚರ್ಡ್ ಲೋಬೋ
ಮೂಡಬಿದರೆ - ಅಭಯಚಂದ್ರ ಜೈನ್
ಬೆಳ್ತಂಗಡಿ - ವಸಂತ ಬಂಗೇರ
ಬಂಟ್ವಾಳ - ರಮಾನಾಥ್ ರೈ
ಸುಳ್ಯ - ಬಿ ರಘು
ಬೈಂದೂರು - ಕೆ.ಗೋಪಾಲ ಪೂಜಾರಿ
ಮಡಿಕೇರಿ - ಕೆ ಎಂ ಲೋಕೇಶ್
ವಿರಾಜಪೇಟೆ - ಬಿ ಟಿ ಪ್ರದೀಪ್
ಪಿರಿಯಾಪಟ್ಟಣ - ಕೆ ವೆಂಕಟೇಶ್
ಕೆ ಆರ್ ನಗರ - ದೊಡ್ಡಸ್ವಾಮಿ ಗೌಡ
ಶೃಂಗೇರಿ - ರಾಜೇಗೌಡ
ಮೂಡಿಗೆರೆ (ಮೀ) - ಬಿ ಎನ್ ಚಂದ್ರಪ್ಪ
ಚಿಕ್ಕಮಗಳೂರು - ಕೆ ಎಸ್ ಶಾಂತೇಗೌಡ
ಚಾಮರಾಜನಗರ - ಸಿ ಪುಟ್ಟರಂಗಶೆಟ್ಟಿ

ಕಾಂಗ್ರೆಸ್ ಮೊದಲ ಪಟ್ಟಿ
ವರುಣಾ - ಸಿದ್ದರಾಮಯ್ಯ
ನಿಪ್ಪಾಣಿ - ಕಾಕಾಸಾಹೇಬ ಪಾಟೀಲ್
ಚಿಕ್ಕೋಡಿ (ಸದಲಗಾ) - ಪ್ರಕಾಶ್ ಹುಕ್ಕೇರಿ
ಅಥಣಿ - ಮಹೇಶ್ ಕಮಟಳ್ಳಿ
ಕಾಗವಾಡ - ಕಿರಣ್ ಕುಮಾರ್ ಪಾಟೀಲ್
ಕುಡುಚಿ (ಮೀ) - ಶಾಮ ಭೀಮ ಘಾಟಗೆ
ರಾಯಭಾಗ - ಸುಕುಮಾರ್ ಪಿ ಕರಣಗಿ
ಅರಭಾವಿ - ರಾಮಪ್ಪ ಉಟಗಿ
ಗೋಕಾಕ - ರಮೇಶ್ ಜಾರಕಿಹೊಳೆ
ಯಮಕನಮರಡಿ (ಮೀ) - ಸತೀಸ್ ಜಾರಕಿಹೊಳೆ
ಬೆಳಗಾವಿ (ಉ) - ಫಿರೋಜ್ ಸೇಠ್
ಬೆಳಗಾವಿ (ಗ್ರಾ) - ಲಕ್ಷ್ಮಿ ರವೀಂಡ್ತ ಹೆಬ್ಬಾಳಕರ್
ಕಿತ್ತೂರು - ಡಿ ಬಿ ಇನಾಂದಾರ್
ಬೈಲಹೊಂಗಲ - ಬಸವರಾಜ್ ಕೌಜಲಗಿ
ಸವದತ್ತಿ ಯಲ್ಲಮ್ಮ - ರವೀಂದ್ರ ಯಲಿಗಾರ್
ರಾಮದುರ್ಗ - ಅಶೋಕ್ ಪಟ್ಟಣ
ಮುಧೋಳ್ (ಮೀ) - ಆರ್ ಬಿ ತಿಮ್ಮಾಪುರ
ತೇರದಾಳ - ಉಮಾಶ್ರೀ

ಕಾಂಗ್ರೆಸ್ ಮೊದಲ ಪಟ್ಟಿ
ಜಮಖಂಡಿ - ಸಿದ್ದು ನ್ಯಾಮೇಗೌಡ
ಬೀಳಗಿ - ಜಗದೀಶ್ ಪಾಟೀಲ್
ಬಾದಾಮಿ - ಬಿ.ಬಿ.ಚಿಮ್ಮನಕಟ್ಟಿ
ಬಾಗಲಕೋಟೆ - ಎಚ್ ವೈ ಮೇಟಿ
ಹುನಗುಂದ - ವಿಜಯಾನಂದ ಕಾಶಪ್ಪನವರ್
ಮುದ್ದೇಬಿಹಾಳ - ಸಿ ಎಸ್ ನಾಡಗೌಡ
ದೇವರಹಿಪ್ಪರಗಿ - ಎ ಎಸ್ ಪಾಟೀಲ್
ಬಸವನಬಾಗೇವಾಡಿ - ಶಿವಾನಂದ ಪಾಟೀಲ್
ಬಬಲೇಶ್ವರ - ಎಂ ಬಿ ಪಾಟೀಲ್
ನಾಗಠಾಣ (ಮೀ) - ಎಚ್ ಆರ್ ಆಲಗೂರು
ಇಂಡಿ - ಯಶ್ವಂತ್ ರಾವ್ ಗೌಡ ಪಾಟೀಲ್
ಸಿಂಧಗಿ - ಶರಣಪ್ಪ ಸುಣಗಾರ
ಅಫ್ಜಲಪುರ - ಮಾಲಿಕಯ್ಯ ಗುತ್ತೇದಾರ್
ಸುರಪುರ (ಮೀ) - ವೆಂಕಟಪ್ಪ ನಾಯಕ್
ಶಹಾಪುರ - ಶರಣಪ್ಪ ದರ್ಶನಾಪುರ
ಯಾದಗಿರಿ - ಡಾ. ಮಾಲಕರೆಡ್ಡಿ
ಗುರುಮಿಠಕಲ್ - ಬಾಬೂರಾವ ಚಿಂಚನಸೂರು

ಕಾಂಗ್ರೆಸ್ ಮೊದಲ ಪಟ್ಟಿ
ಸೇಡಂ - ಡಾ. ಶರಣಪ್ರಕಾಶ್ ಪಾಟೀಲ್
ಚಿಂಚೋಳಿ - ಉಮೇಶ್ ಜಾಧವ್
ಗುಲ್ಬರ್ಗ (ಗ್ರಾ, ಮೀ) - ಜಿ. ರಾಮಕೃಷ್ಣ
ಗುಲ್ಬರ್ಗ (ದ) - ಕೈಲಾಶನಾಥ್ ಪಾಟೀಲ್
ಗುಲ್ಬರ್ಗ ( ಉ) - ಖಮರುಲ್ ಇಸ್ಲಾಂ
ಆಳಂದ - ಸಿದ್ದಣ್ಣ ಶೇಗಜಿ
ಬಸವಕಲ್ಯಾಣ - ಬಿ ನಾರಾಯಣ ರಾವ್
ಹುಮನಾಬಾದ್ - ರಾಜಸೇಖರ ಪಾಟೀಲ್
ಬೀದರ್ - ರಹೀಂ ಖಾನ್
ಬೀದರ್ (ದ) - ಮೀನಾಕ್ಷಿ ಬಾಯಿ
ಭಾಲ್ಕಿ - ಈಶ್ವರ್ ಖಂಡ್ರೆ
ರಾಯಚೂರು - ಸೈಯದ್ ಯಾಸೀನ್
ದೇವದುರ್ಗ (ಮೀ) - ವೆಂಕಟೇಶ ನಾಯಕ್
ಲಿಂಗಸಗೂರು (ಮೀ) - ದುರ್ಗಪ್ಪ ಹುಲಿಗೆರೆ
ಸಿಂಧನೂರು - ಹಂಪನಗೌಡ ಬಾದರ್ಲಿ
ಕುಷ್ಟಗಿ - ಅಮರೇಗೌಡ ಬಯ್ಯಾಪುರ
ಕನಕಗಿರಿ(ಮೀ) - ಶಿವರಾಜ್ ತಂಗಡಗಿ

ಕಾಂಗ್ರೆಸ್ ಮೊದಲ ಪಟ್ಟಿ
ಯಲಬುರ್ಗ - ಬಸವರಾಜ ರಾಯರೆಡ್ಡಿ
ಕೊಪ್ಪಳ - ರಾಘವೇಂದ್ರ ಹಿಟ್ನಾಳ್
ಶಿರಹಟ್ಟಿ (ಮೀ) - ದೊಡ್ಡಮನಿ ಸಿದ್ದಲಿಂಗಪ್ಪ
ಗದಗ - ಎಚ್ ಕೆ ಪಾಟೀಲ್
ರೋಣ - ಗುರುಪಾದ ಪಾಟೀಲ್
ನರಗುಂದ - ಬಸವರೆಡ್ಡಿ ಯಾವಗಲ
ನವಲಗುಂದ - ಬಸವರೆಡ್ಡಿ ಯಾವಗಲ
ಕುಂದಗೋಳ - ಚನ್ನಬಸಪ್ಪ ಶಿವಳ್ಳಿ
ಧಾರವಾಡ - ವಿನಯ್ ಕುಲ್ಕರ್ಣಿ
ಹುಬ್ಬಳ್ಳಿ ಧಾರವಾಡ (ಪೂ) - ಪ್ರಸಾದ್ ಅಬ್ಬಯ್ಯ
ಹಳಿಯಾಳ - ಆರ್ ವಿ ದೇಶಪಾಂಡೆ
ಕುಮಟಾ - ಶಾರದ ಮೋಹನ್ ಶೆಟ್ಟಿ
ಭಟ್ಕಳ - ಜೆ ಡಿ ನಾಯಕ್
ಯಲ್ಲಾಪುರ - ಶಿವರಾಂ ಹೆಬ್ಬಾರ್
ಶಿಗ್ಗಾವಿ - ಸಯ್ಯದ ಅಜ್ಜಂಪೀರ್ ಖಾದ್ರಿ
ಹಾವೇರಿ (ಮೀ) - ರುದ್ರಪ್ಪ ಲಮಾಣಿ

ಕಾಂಗ್ರೆಸ್ ಮೊದಲ ಪಟ್ಟಿ
ಬ್ಯಾಡಗಿ - ಬಸವರಾಜ್ ಶಿವಣ್ಣನವರ್
ಹಿರೇಕೆರೂರು - ಬಿ ಸಿ ಪಾಟೀಲ್
ರಾಣಿಬೆನ್ನೂರು - ಕೆ ಬಿ ಕೋಳಿವಾಡ
ಹಡಗಲಿ (ಮೀ) - ಪಿ ಟಿ ಪರಮೇಶ್ವರ್ ನಾಯಕ್
ಹಗರಿಬೊಮ್ಮನಹಳ್ಳಿ (ಮೀ) - ಎಲ್ ಮಾರಣ್ಣ
ವಿಜಯನಗರ (ಬಳ್ಳಾರಿ) - ಎಚ್ ಅಬ್ದುಲ್ ವಹಾಬ್
ಕಂಪ್ಲಿ (ಮೀ) - ಗುಜ್ಜಲ್ ನಾಗರಾಜ್
ಶಿರಗುಪ್ಪ (ಮೀ) - ಬಿ ಎಂ ನಾಗರಾಜ್
ಬಳ್ಳಾರಿ (ಮೀ)- ಅಸುಂಡಿ ವಣ್ಣೂರಪ್ಪ
ಸಂಡೂರು (ಮೀ) - ಇ ತುಕಾರಾಂ
ಕೂಡ್ಲಿಗಿ (ಮೀ) - ಎಸ್ ವೆಂಕಟೇಶ್
ಮೊಳಕಾಲ್ಮೂರು - ಎನ್ ವೈ ಗೋಪಾಲಕೃಷ್ಣ
ಚಳ್ಳಕೆರೆ (ಮೀ) - ಟಿ ರಘುಮೂರ್ತಿ
ಚಿತ್ರದುರ್ಗ - ಜಿ ಎಸ್ ಮಂಜುನಾಥ್
ಹೊಸದುರ್ಗ - ಬಿ ಜಿ ಗೋವಿಂದಪ್ಪ
ಹೊಳಲ್ಕೆರೆ (ಮೀ) - ಎಚ್ ಆಂಜನೇಯ

ಕಾಂಗ್ರೆಸ್ ಮೊದಲ ಪಟ್ಟಿ
ಗುಂಡ್ಲುಪೇಟೆ - ಎಚ್ ಎಸ್ ಮಹದೇವಪ್ರಸಾದ್
ಜಗಳೂರು (ಮೀ) - ಎಚ್ ಪಿ ರಾಜೇಶ್
ಹರಪನಹಳ್ಳಿ - ಎಂ ಪಿ ರವೀಂದ್ರ
ಹರಿಹರ - ಎಸ್ ರಾಮಪ್ಪ
ಮಾಯಕೊಂಡ (ಮೀ) - ಕೆ ಶಿವಮೂರ್ತಿ
ಚನ್ನಗಿರಿ - ವಡ್ನಾಳ್ ನಾಗರಾಜ್
ಹೊನ್ನಾಳಿ - ಡಿ ಜೆ ಶಾಂತನಗೌಡ
ಶಿವಮೊಗ್ಗ (ಮೀ, ಗ್ರಾ) - ಕರಿಯಣ್ಣ
ಶಿವಮೊಗ್ಗ - ಕೆ ಬಿ ಪ್ರಸನ್ನಕುಮಾರ್
ತೀರ್ಥಹಳ್ಳಿ - ಕಿಮ್ಮನೆ ರತ್ನಾಕರ
ಶಿಕಾರಿಪುರ - ಎಚ್ ಎಸ್ ಶಾಂತವೀರಪ್ಪ ಗೌಡ
ಸೊರಬ - ಕುಮಾರ್ ಬಂಗಾರಪ್ಪ
ಸಾಗರ - ಕಾಗೋಡು ತಿಮ್ಮಪ್ಪ
ಬೈಂದೂರು - ಗೋಪಾಲ ಪೂಜಾರಿ
ಕಡೂರು - ಕೆ ಬಿ ಮಲ್ಲಿಕಾರ್ಜುನ
ಕುಣಿಗಲ್ - ಬಿ ಬಿ ರಾಮಸ್ವಾಮಿ ಗೌಡ
ತುಮಕೂರು ನಗರ - ಎಸ್ ರಫೀಕ್ ಅಹಮದ್
ತುಮಕೂರು (ಗ್ರಾ) - ನಾಗರಾಜ ಯಲಚವಾಡಿ

ಕಾಂಗ್ರೆಸ್ ಮೊದಲ ಪಟ್ಟಿ
ಕೊರಟಗೆರೆ (ಮೀ) - ಡಾ. ಪರಮೇಶ್ವರ್
ಗುಬ್ಬಿ - ಹೊನ್ನಗಿರಿ ಗೌಡ
ಶಿರಾ - ಟಿ ಬಿ ಜಯಚಂದ್ರ
ಪಾವಗಡ (ಮೀ) - ಎಚ್ ವಿ ವೆಂಕಟೇಶ್
ಮಧುಗಿರಿ - ಕೆ ಎಸ್ ರಾಜಣ್ಣ
ಗೌರಿಬಿದನೂರು - ಎನ್ ಎಚ್ ಶಿವಸಂಕರ ರೆಡ್ಡಿ
ಬಾಗೇಪಲ್ಲಿ - ಎನ್ ಸಂಪಂಗಿ
ಶಿಡ್ಲಘಟ್ಟ - ವಿ ಮುನಿಯಪ್ಪ
ಚಿಂತಾಪಣಿ - ವಾನಿ ಕೃಷ್ಣರೆಡ್ಡಿ
ಶ್ರೀನಿವಾಸಪುರ - ಕೆ ಆರ್ ರಮೇಶ್ ಕುಮಾರ್
ಹನ್ನೂರು - ಆರ್ ನರೇಂದ್ರ
ಬಂಗಾರಪೇಟೆ (ಮೀ) - ಎಸ್ ಎನ್ ನಾರಾಯಣಸ್ವಾಮಿ
ಕೋಲಾರ - ನಜೀರ್ ಅಹಮದ್
ಯಲಹಂಕ - ಎಂ ಎನ್ ಗೋಪಾಲಕೃಷ್ಣ
ಬ್ಯಾಟರಾಯನಪುರ - ಕೃಷ್ಣ ಬೈರೇಗೌಡ
ಯಶವಂತಪುರ - ಎಸ್ ಟಿ ಸೋಮಶೇಖರ್
ದಾಸರಹಳ್ಳಿ - ಬಿ ಎಲ್ ಶಂಕರ್
ಮಹಾಲಕ್ಷ್ಮಿ ಲೇಔಟ್ - ನರೇಂದ್ರಬಾಬು
ಪುಲಿಕೇಶಿನಗರ (ಮೀ) - ಬಿ ಪ್ರಸನ್ನಕುಮಾರ್

ಕಾಂಗ್ರೆಸ್ ಮೊದಲ ಪಟ್ಟಿ
ಸರ್ವಜ್ಞ ನಗರ - ಕೆ ಜಿ ಜಾರ್ಜ್
ಶಿವಾಜಿನಗರ - ಆರ್ ರೋಶನ್ ಬೇಗ್
ಶಾಂತಿನಗರ - ಎನ್ ಎ ಹ್ಯಾರಿಸ್
ಗಾಂಧಿನಗರ - ದಿನೇಶ್ ಗುಂಡೂರಾವ್
ರಾಜಾಜಿನಗರ - ಮಂಜುಳಾ ನಾಯ್ಡು
ಗೋವಿಂದರಾಜ ನಗರ - ಪ್ರಿಯಕೃಷ್ಣ
ವಿಜಯನಗರ - ಎಂ ಕೃಷ್ಣಪ್ಪ
ಚಿಕ್ಕಪೇಟೆ - ಆರ್ ವಿ ದೇವರಾಜ್
ಬಸವನಗುಡಿ - ಪ್ರೊ. ಬಿ ಕೆ ಚಂದ್ರಶೇಖರ್
ಬಿಟಿಎಂ ಲೇಔಟ್ - ರಾಮಲಿಂಗ ರೆಡ್ಡಿ
ಬೊಮ್ಮನಹಳ್ಳಿ - ಸಿ ನಾಗಭೂಷಣ
ಆನೇಕಲ್ (ಮೀ) - ಬಿ ಶಿವಣ್ಣ
ಹೊಸಕೋಟೆ - ಎನ್ ನಾಗರಾಜ್
ನೆಲಮಂಗಲ - ಅಂಜನಮೂರ್ತಿ
ಮಾಗಡಿ - ಮಂಜುನಾಥ್
ರಾಮನಗರ - ಮರಿದೇವರು
ಕನಕಪುರ - ಡಿ ಕೆ ಶಿವಕುಮಾರ್
ಚನ್ನಪಟ್ಟಣ - ಸಾದತ್ ಆಲಿಖಾನ್

ಕಾಂಗ್ರೆಸ್ ಮೊದಲ ಪಟ್ಟಿ
ಮದ್ದೂರು - ಜಿ ಎಂ ಮಧು
ಮೇಲುಕೋಟೆ - ಎಲ್ ಡಿ ರವಿ
ಮಂಡ್ಯ - ಎಂ ಎಚ್ ಅಮರನಾಥ್ (ಅಂಬರೀಶ್)
ನಾಗಮಂಗಲ - ಸುರೇಶ್ ಗೌಡ
ಕೆ ಆರ್ ಪೇಟೆ - ಕೆ ಬಿ ಚಂದ್ರಶೇಖರ್
ಅರಸೀಕೆರೆ - ಬಿ ಶಿವರಾಂ
ಬೇಲೂರು - ರುದ್ರೇಶ್ ಗೌಡ
ಹಾಸನ - ಎಚ್ ಕೆ ಮಹೇಶ್
ಹೊಳೇನರಸೀಪುರ - ಎಸ್ ಜಿ ಅನುಪಮಾ
ಅರಕಲಗೂಡು - ಎ ಮಂಜು
ಸಕಲೇಶಪುರ (ಮೀ) - ಡಿ ಮಲ್ಲೇಶ್
ಹುಣಸೂರು - ಎಚ್ ಪಿ ಮಂಜುನಾಥ್
ಹೆಗ್ಗಡೆದೇವನಕೋಟೆ (ಮೀ) - ಚಿಕ್ಕಣ್ಣ
ನಂಜನಗೂಡು (ಮೀ) - ಶ್ರೀನಿವಾಸ ಪ್ರಸಾದ್
ಚಾಮುಂಡೇಶ್ವರಿ - ಎಂ ಸತ್ಯನಾರಾಯಣ
ಕೃಷ್ಣರಾಜ - ಎಂ ಕೆ ಸೋಮಶೇಖರ್
ಚಾಮರಾಜ - ವಾಸು
ನರಸಿಂಹರಾಜ - ತನ್ವೀರ್ ಶೇಠ್
ಟಿ ನರಸೀಪುರ (ಮೀ) - ಡಾ. ಮಹದೇವಪ್ಪ
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications