ಕ್ಷೇತ್ರ ಪರಿಚಯ: ಚಿಕ್ಕಮಗಳೂರು- ನೈಸರ್ಗಿಕ ಸಿರಿ ಜಿಲ್ಲೆಯ ಬಡ ಕ್ಷೇತ್ರ
ಮಲೆನಾಡು, ಅರೆ ಮಲೆನಾಡು, ಹಾಗೂ ಬಯಲು ಸೀಮೆಗಳನ್ನೊಳಗೊಂಡ ವೈವಿಧ್ಯಮಯ ಜಿಲ್ಲೆ. ಹಲವು ಜೀವ ನದಿಗಳ ಉಗಮ ಸ್ಥಾನ. ಆದರೆ, ದೀಪದ ಕೆಳಗೆ ಕತ್ತಲು ಎನ್ನುವಂತೆ ಚಿಕ್ಕಮಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ. 1942 ರಲ್ಲಿ ಈ ಜಿಲ್ಲೆಯು ಚಿಕ್ಕಮಗಳೂರು ಜಿಲ್ಲೆ ಎಂದು ನಾಮಾಂತರಗೊಳ್ಳುವವರೆಗೆ 82 ವರ್ಷಗಳ ಕಾಲ ಕಡೂರು ಜಿಲ್ಲೆ ಎಂದೇ ಕರೆಯಲ್ಪಡುತ್ತಿತ್ತು.
ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ವಿಷಯಕ್ಕೆ ಬಂದರೆ ಸುತ್ತಲು ಬೆಟ್ಟ ಗುಡ್ಡ ಸಾಲುಗಳಿದ್ದು ನಗರ ಪ್ರದೇಶವನ್ನು ವರ್ಷದ ಬಹುಪಾಲು ತಣ್ಣಗಿಟ್ಟಿರುತ್ತದೆ. ಆರಕ್ಕೇರದ ಮೂರಕ್ಕಿಳಿಯದ ಆದಾಯ ಹೊಂದಿರುವ ನಗರವಾಸಿಗಳ ನಡುವೆ ಹಳೆ ಗತ್ತು ಗೈರತ್ತು ಹೊಂದಿರುವ ಪ್ಲಾಂಟರುಗಳು, ಆರ್ಯ ವೈಶ್ಯರು, ಗೌಡರುಗಳು ನಗರದ ಹೆಗ್ಗುರುತುಗಳಾಗಿದ್ದಾರೆ.
ತುಂಗಾ, ಭದ್ರಾ, ಹೇಮಾವತಿ, ವೇದಾವತಿ, ಯಗಚಿ ಮುಂತಾದ ನದಿಗಳು ಹುಟ್ಟಿ ಹರಿಯುತ್ತಿವೆ. ಆದರೆ, ಒಂದು ನದಿ ಕೂಡಾ ಚಿಕ್ಕಮಗಳೂರಿನ ಕಡೆಗೆ ಹರಿಯುವುದಿಲ್ಲ.
ಎರೆಡೆರಡು ಹೆದ್ದಾರಿಗಳಿದ್ದರೂ, ಬಯಲು ಸೀಮೆಯೂ ಘಟ್ಟದ ಜನಕ್ಕೂ ಸಂಪರ್ಕ ಹೊಂದಿಸುವ ಜಿಲ್ಲೆಯಾದರೂ ಸಾರಿಗೆ ಸಮರ್ಪಕವಾಗಿಲ್ಲ. ಖಾಸಗಿ ವಿಮಾನ ನಿಲ್ದಾಣ ಜೊತೆ ಸಣ್ಣ ವಿಮಾನ ನಿಲ್ದಾಣ ಇದೆ. ಪೂರ್ಣ ಪ್ರಮಾಣದ ವಿಮಾನ ನಿಲ್ದಾಣದ ಅಗತ್ಯವಿದೆ. ಚಿಕ್ಕಮಗಳೂರು ನಗರದ ಸಮಸ್ಯೆಗಳು, ಕ್ಷೇತ್ರದ ಪ್ರಮುಖ ತಾಣಗಳ ಬಗ್ಗೆ ಇನ್ನಷ್ಟು ವಿವರ ಮುಂದೆ ಓದಿ...

ಸಂಚಾರ ಸಂರ್ಪಕ ಸಾಧ್ಯತೆ ಕೊರತೆ
ಕಣಿವೆಹಳ್ಳದ ರೈಲ್ವೆ ಹಾದಿ ನಿರ್ಮಾಣವಾಗಿ ರೈಲು ಸಂಚರಿಸುತ್ತಿದ್ದರೂ, ಇಲ್ಲಿನ ವ್ಯಾಪಾರಿಗಳಿಗೆ, ಬೆಂಗಳೂರಿಗೆ ನೇರವಾಗಿ ನೆಂಟರ ಮನೆಗೆ ಹೋಗಲು ಬಯಸುವವರಿಗೆ ನೇರ ರೈಲು ಮಾರ್ಗವಿಲ್ಲ. ಚಿಕ್ಕಮಗಳೂರು ರೈಲನ್ನು ಸಕಲೇಶಪುರಕ್ಕೆ ಸಂಪರ್ಕಿಸುವ ಯೋಜನೆ ನೆನಗುದಿಗೆ ಬಿದ್ದಿದೆ.
ನಗರ ಸಾರಿಗೆ, ಖಾಸಗಿ ಬಸ್ ಗಳು ಇನ್ನೂ ಓಡಾಡುತ್ತಿವೆ ಎನ್ನುವುದೇ ಸಮಾಧಾನ. ನಗರಕ್ಕೆ ರೈಲು ನಿಲ್ದಾಣ ಹೊಸ ಸೇರ್ಪಡೆ. ಏರ್ ಸ್ಟ್ರಿಪ್ ಇದ್ದರೂ ಪೂರ್ಣ ಪ್ರಮಾಣ ವಿಮಾನ ನಿಲ್ದಾಣದ ಅಗತ್ಯವಿದೆ. ನಗರದ ಪ್ರಮುಖ ರಸ್ತೆಗಳೇ ಹಾಳಾಗಿವೆ. ಪಾರ್ಕಿಂಗ್ ವ್ಯವಸ್ಥೆ ದೇವರಿಗೆ ಪ್ರೀತಿ.

ಅಭ್ಯರ್ಥಿಯ ಹಣೆಬರಹ ನಿರ್ಧರಿಸುವ ಏರಿಯಾಗಳು
ಹೊಸಮನೆ, ಹೌಸಿಂಗ್ ಬೋರ್ಡ್ ಕಾಲೋನಿ, ವಿಜಯಪುರ, ಬಸವನಹಳ್ಳಿ, ಸಖರಾಯಪಟ್ಟಣ, ಹಿರೇಕೊಳಲೆ,ಅತ್ತಿಗುಂಡಿ, ಲಕ್ಯಾ, ನಿಡಘಟ್ಟ,ಇಂದಾವರ, ಗೌರಿ ಕಾಲುವೆ, ದಂಟರಮಕ್ಕಿ,ಕೋಟೆ, ತಮಿಳು ಕಾಲೋನಿ, ಮಾರ್ಕೆಟ್ ರಸ್ತೆ, ಐಜಿ ರಸ್ತೆ, ಎಂಜಿ ರಸ್ತೆ, ಷರೀಫ್ ಗಲ್ಲಿ, ಕಳಾಸಪುರ, ಬೆಳವಾಡಿ, ಬೂದಿಹಾಳ ಕ್ಷೇತ್ರ ಪ್ರಮುಖ ತಾಣಗಳು. ಎಂಜಿ ರಸ್ತೆ, ಐಜಿ ರಸ್ತೆ, ಕಡೂರು-ಮಂಗಳೂರು ರಸ್ತೆ, ಬೇಲೂರು ರಸ್ತೆಗಳಲ್ಲದೆ, ಮಾರ್ಕೆಟ್ ಬೀದಿ, ಹನುಮಂತಪ್ಪ ಸರ್ಕಲ್, ಟೌನ್ ಕ್ಯಾಂಟೀನ್ ವೃತ್ತ, ಸಂತೆ ಬೀದಿ ಜನನಿಬಿಡ ತಾಣಗಳು

ಸಿ.ಟಿ ರವಿ ಗೆಲುವಿಗೆ ಕಾರಣವಾಗಿದ್ದು ಹಿಂದೂತ್ವ
ಹಾಲಿ ಶಾಸಕ ಸಿ.ಟಿ ರವಿ (ಬಿಜೆಪಿ) ಗೆಲುವಿಗೆ, ಮುಖ್ಯವಾಗಿ ಕಾರಣವಾಗಿದ್ದು ದತ್ತಪೀಠ ವಿವಾದ, ಮೋದಿ ಅಲೆ, ಯಡಿಯೂರಪ್ಪ ಮೇಲಿದ್ದ ನಿರೀಕ್ಷೆ. ಮುಂದಿನ ಸಲ ಹಾದಿ ಸ್ವಲ್ಪ ಕಠಿಣ. ಸಿದ್ದರಾಮಯ್ಯ ಅವರ ಕಡೆಯ ಶಾಂತೇಗೌಡರ ಪರ ಮತದಾರ ಒಲವು ತೋರಿದರೆ ಕಷ್ಟ. ಆದರೂ, ಸಿ.ಟಿ ರವಿಗೆ ಗೆಲುವಿನ ನಿರೀಕ್ಷೆ ಇದೆ.
2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಟಿ ರವಿ ಅವರು 58,683 ಮತಗಳನ್ನು ಗಳಿಸಿದ್ದರು. ಕಾಂಗ್ರೆಸ್ಸಿನ ಕೆಎಸ್ ಶಾಂತೇಗೌಡ ಅವರು 47,695 ಮತಗಳನ್ನು ಗಳಿಸಿ ಒಳ್ಳೆ ಫೈಟ್ ಕೊಟ್ಟಿದ್ದರು. ಈ ಬಾರಿ ಜೆಡಿಎಸ್ ನ ಎಸ್ಎಲ್ ಭೋಜೇಗೌಡ ಅವರು ಪೈಪೋಟಿ ನೀಡುವ ಸಾಧ್ಯತೆ ಹೆಚ್ಚಿದೆ

ಜಾತಿ ವರ್ಗಗಳ ಮತಗಳ ಲೆಕ್ಕಾಚಾರ
ಒಕ್ಕಲಿಗ, ಬಿಲ್ಲವ, ಕ್ರೈಸ್ತ, ಮುಸ್ಲಿಂ, ಹಿಂದುಳಿದ ಜಾತಿ ವರ್ಗಗಳ ಮತಗಳ ಲೆಕ್ಕಾಚಾರದ ಜತೆಗೆ ಹಿಂದೂತ್ವದ ಅಲೆ ಹಲವು ಬಾರಿ ವರ್ಕ್ ಔಟ್ ಆಗಿದೆ. ಕಾಮಧೇನು ಗಣಪತಿ, ಕೋದಂಡ ರಾಮ, ಬೋಳೆರಾಮ, ಕನ್ಯಕಾ ಪರಮೇಶ್ವರಿ, ಕೊಲ್ಲಾಪುರದಮ್ಮನ ಜತೆಗೆ ಜುಮ್ಮಾ ಮಸೀದಿ, ಕ್ಯಾಥಲಿಕ್ ಹಾಗೂ ಪ್ರೊಟೆಸ್ಟಂಟ್ ಚರ್ಚ್ ಗಳು, ಜಿನ ಮಂದಿರಗಳು ನಗರದ ರಕ್ಷಣೆಯ ಭಾರ ಹೊತ್ತಿವೆ.

ನಿರ್ವಹಣೆಯಲ್ಲಿ ನಗರ ಪಾಲಿಕೆ ಸೋತಿದೆ
ಐಟಿಐ, ಇಂಜಿನಿಯರಿಂಗ್ ಕಾಲೇಜುಗಳಿದ್ದರೂ ಮೆಡಿಕಲ್/ ಆಯುರ್ವೇದಿಕ್ ಕಾಲೇಜ್ ಕೊರತೆ ಇದೆ. ಆಶ್ರಯ, ಆಶೀರ್ವಾದ, ಮಲ್ಲೇಗೌಡ ಆಸ್ಪತ್ರೆ ಇದ್ದರೂ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಬೇಕಿದೆ. ಅಜಾದ್ ಪಾರ್ಕ್, ರತ್ನಗಿರಿ ಬೋರೆಯಂಥ ವಿಹಾರ ತಾಣಗಳಿವೆ. ಆದರೆ, ಭದ್ರತೆ, ನಿರ್ವಹಣೆಯಲ್ಲಿ ನಗರ ಪಾಲಿಕೆ ಸೋತಿದೆ. ಮೂಲ ಸೌಕರ್ಯ ಅಭಿವೃದ್ಧಿ ಹೆಸರಿನಲ್ಲಿ ನಗರದ ಮರಗಳ ಹನನ, ಕೆರೆ ಒತ್ತುವರಿ ಮುಂದುವರೆದಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications