ಯಲ್ಲಾಪುರ ಕ್ಷೇತ್ರ: ಹವ್ಯಕರ ಮತಗಳೇ ನಿರ್ಣಾಯಕ

Posted By:
Subscribe to Oneindia Kannada

ಸಾತೊಡ್ಡಿ, ಮಾಗೋಡು ಜಲಪಾತಗಳು ಎಂದೊಡನೆ ನೆನಪಾಗುವುದು ಯಲ್ಲಾಪುರ. ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರವಾದ ಯಲ್ಲಾಪುರ ಹಲವು ಜಲಪಾತಗಳೊಂದಿಗೆ ಪ್ರವಾಸಿಗರನ್ನು ಸೆಳೆಯುತ್ತಿದೆ.

ಹುಬ್ಬಳ್ಳಿಯನ್ನು ಅಂಕೋಲಾಗೆ ಸಂಪರ್ಕಿಸುವ NH63ರಲ್ಲಿ ಸಾಗಿದರೆ ಸಿಗುವ ಪ್ರಕೃತಿ ಸೊಬಗಿನ ರಮ್ಯ ತಾಣ. ಅಡಿಕೆಬೆಳೆಗಾರರೇ ಇಲ್ಲಿ ಜಾಸ್ತಿ. ಆದಾಯದ ಮೂಲವೂ ಅಡಿಕೆಯೇ. ಭತ್ತ, ತೆಂಗು, ಕಬ್ಬು, ಏಲಕ್ಕಿ, ವೆನಿಲ್ಲಾವನ್ನೂ ಸಹ ಉಪಬೆಳೆಯನ್ನಾಗಿ ಅವಲಂಬಿಸಿದ್ದಾರೆ.

ಕಾರವಾರ ಕ್ಷೇತ್ರ: ಕಡಲ ಕಿನಾರೆ ಒಲಿಯುವುದು ಯಾರಿಗೆ?

ಪಶ್ಚಿಮ ಘಟ್ಟಗಳ ಸೆರಗಿನಲ್ಲಿರುವ ಈ ಪ್ರದೇಶವು ಹೇರಳ ಸಂಖ್ಯೆಯ ಝರಿ-ತೊರೆಗಳಿಂದ ಕೂಡಿದ್ದು, ಮನಸ್ಸಿಗೆ ಮುದ ನೀಡುವ ಹತ್ತು ಹಲವು ಜಲಪಾತಗಳನ್ನು ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡಿದೆ. 2001 ರ ಜನಗಣತಿಯ ಪ್ರಕಾರ ಯಲ್ಲಾಪುರದ ಜನಸಂಖ್ಯೆ 17,938! ಇಲ್ಲಿನ ಶೇ.73 ರಷ್ಟು ಜನ ಸಾಕ್ಷರರು. ಕನ್ನಡ ಮತ್ತು ಕೊಂಕಣಿ ಮಾತನಾಡುವವರ ಸಂಖ್ಯೆ ಇಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆಫ್ರಿಕದ ಬುಡಕಟ್ಟು ಜನಾಂಗದ ಹಲವರು ಹಲವು ದಶಕಗಳ ಹಿಂದೇ ಇಲ್ಲಿಗೆ ಬಂದು ನೆಲೆಸಿದ್ದಾರೆ. ಹವ್ಯಕ, ಒಕ್ಕಲಿಗ, ಗೌಡ, ಸಿದ್ದಿ ಜನಾಂಗದವರೂ ಇಲ್ಲಿ ವಾಸವಾಗಿದ್ದಾರೆ.

ಸಂಕ್ರಾಂತಿ ವಿಶೇಷ ಪುಟ

Karnataka Assembly Election 2018: Yellapur Constituency Profile

ಇನ್ನು ಈ ಕ್ಷೇತ್ರದ ರಾಜಕೀಯ ಚಿತ್ರಣ ಹೇಗಿದೆ ಎಂದು ವಿಶ್ಲೇಷಿಸುವುದಕ್ಕೆ ಹೋದರೆ, ಈ ಭಾಗದಲ್ಲಿ ಹವ್ಯಕರ ಮತವೇ ನಿರ್ಣಾಯಕ. ಜೆಡಿಎಸ್, ಕಾಂಗ್ರೆಸ್ ಪಕ್ಷಗಳಲ್ಲೆಲ್ಲ ಓಡಾಡಿ ಈಗ ಬಿಜೆಪಿಗೆ ಬಂದಿರುವ ಪ್ರಮೋದ್ ಹೆಗಡೆ ಶಿರಸಿ ಅಥವಾ ಯಲ್ಲಾಪುರ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಎಂಬ ವದಂತಿಯೂ ಹರಿದಾಡುತ್ತಿದೆ. ಆದರೆ ಶಿರಸಿಯಲ್ಲಿ ಕಾಗೇರಿ ವಿಶ್ವೇಶ್ವರ ಹೆಗಡೆ ಅವರಿಗಲ್ಲದೆ ಬೇರೆ ಅಭ್ಯರ್ಥಿಗೆ ಬಿಜೆಪಿಯಿಂದ ಟಿಕೇಟ್ ಸಿಗುವುದು ಕಷ್ಟವೇ. ಆದ್ದರಿಂದ ಪ್ರಮೋದ್ ಹೆಗಡೆ ಅವರ ಕಣ್ಣು ಯಲ್ಲಾಪುರದ ಮೇಲಿದೆ.

ಶಿರಸಿ-ಸಿದ್ದಾಪುರ ಕ್ಷೇತ್ರ: ಯಾರಿಗೊಲಿಯುವಳೋ ಶ್ರೀ ಮಾರಿಕಾಂಬೆ!

ಆದರೆ ಬಿಜೆಪಿಯಿಂದ 2008 ರ ಚುನಾವಣೆಯಲ್ಲಿ ಜಯಗಳಿಸಿದ ವಿ.ಎಸ್.ಪಾಟೀಲ್ ಇದಕ್ಕೆ ತಡೆಯೊಡ್ಡಬಹುದು. 2013 ರಲ್ಲೂ ಬಿಜೆಪಿ ಅಭ್ಯರ್ಥಿಯಾಗಿದ್ದ ಪಾಟೀಲ್, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಶಿವರಾಮ್ ಹೆಬ್ಬಾರ್ ಅವರ ವಿರುದ್ಧ ಸೋತಿದ್ದರು.

ಶಿವರಾಮ್ ಹೆಬ್ಬಾರ್(ಕಾಂಗ್ರೆಸ್) 58025 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ವಿ.ಎಸ್.ಪಾಟೀಲ್ 33533 ಮತಗಳನ್ನು ಪಡೆದಿದ್ದರು. ಈ ವರ್ಷ ಬಿಜೆಪಿಯಿಂದ ಪ್ರಮೋದ್ ಹೆಗಡೆ ಮತ್ತು ಕಾಂಗ್ರೆಸ್ ನಿಂದ ಶಿವರಾಮ ಹೆಬ್ಬಾರ್ ಸ್ಪರ್ಧಿಸಿದರೆ ಹವ್ಯಕ ಮತಗಳು ಒಡೆದುಹೋಗುವುದು ಖಂಡಿತ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka assembly elections 2018: Read all about Yellapur assembly constituency of Uttara Kannada district. Get election news from Yellapur. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ