ಕ್ಷೇತ್ರ ಪರಿಚಯ : ಸುರಪುರದಲ್ಲಿ ಗೆಲುವಿನ ಸರದಾರ ಯಾರು?
ದೇಶದ ಭೂಪಟದಲ್ಲಿ ಗಮನ ಸೆಳೆಯುವ ಕ್ಷೇತ್ರ ಸುರಪುರ. ದೆಹಲಿಯ ಸಾಮ್ರಾಟ್ ಔರಂಗಜೇಬ ಕ್ರಿ.ಶ. 1705ರಲ್ಲಿ ಸುರಪುರದ ಮೇಲೆ ದಾಳಿ ಮಾಡಿದ್ದಾಗ ಅಂದಿನ ರಾಜ ಪಿತಂಬರಿ ಬಹರಿ ಪಿಡ್ಡ ನಾಯಕ ಸಾಮ್ರಾಟ್‌ನನ್ನು ಸೋಲಿಸಿದ್ದರು.
ಸುರಪುರದ ಗತಕಾಲದ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸಲು ಸುರಪುರ ಸಂಶೋಧನಾ ಕೇಂದ್ರ ವಿಜಯೋತ್ಸವ ಕಾರ್ಯಕ್ರಮವನ್ನು ಯೋಜಿಸುತ್ತದೆ. ಕ್ಷೇತ್ರದಲ್ಲಿ ಸಾಧಾರಣ ಮಳೆಯಾಗುತ್ತದೆ. ಇಲ್ಲಿನ ಮುಖ್ಯ ಭಾಷೆ ಕನ್ನಡ.
ಆದರೆ, ವಿವಿಧ ಸಂಸ್ಕೃತಿಗಳ ಪರಿಚಯದ ಕಾರಣ ಉರ್ದು, ಮರಾಠಿ, ಹಿಂದಿ ಮುಂತಾದ ಭಾಷೆಗಳನ್ನು ಆಡುವ ಜನರು ಸಿಗುತ್ತಾರೆ. ಜೋಳ, ಗೋಧಿ, ಅಕ್ಕಿಯನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ರಾಜಕೀಯವಾಗಿ ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ ಶಾಸಕರು.

ಕಳೆದ ಚುನಾವಣೆ ಫಲಿತಾಂಶ : 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ 65,033 ಮತಗಳನ್ನು ಪಡೆದು ಜಯಗಳಿಸಿದ್ದರು. ಜೆಡಿಎಸ್‌ನ ನರಸಿಂಹ ನಾಯಕ್ ಅವರು 60,958, ಬಿಜೆಪಿಯ ಮದನಗೋಪಾಲ್ ನಾಯಕ್ 3,249 ಮತಗಳನ್ನು ಪಡೆದಿದ್ದರು.
2018ರ ಚುನಾವಣೆಗೆ ಶರಣಪ್ಪ ದರ್ಶನಾಪುರ ಅವರು ಕಾಂಗ್ರೆಸ್ ಅಭ್ಯರ್ಥಿ. ಗುರುಪಾಟೀಲ್ ಶಿರವಾಳ್ ಅವರು ಬಿಜೆಪಿ ಅಭ್ಯರ್ಥಿ. ರಾಜಾಕೃಷ್ಣ ನಾಯಕ್ ಜೆಡಿಎಸ್ ಅಭ್ಯರ್ಥಿ.












Click it and Unblock the Notifications