ಸಕಲೇಶಪುರ : ಕೃಷಿ, ಸಂಶೋಧನಾ ಪ್ರಧಾನ ಕ್ಷೇತ್ರ

Posted By:
Subscribe to Oneindia Kannada

ಹಾಸನ ಜಿಲ್ಲೆಯ ತಾಲೂಕು ಕೇಂದ್ರ ಸಕಲೇಶಪುರ ವಿಧಾನಸಭಾ ಕ್ಷೇತ್ರ ಪಶ್ಚಿಮ ಘಟ್ಟದ ತಪ್ಪಲಿನ ಮಲೆನಾಡು ಪ್ರದೇಶವಾಗಿದ್ದು, ಸಮಶೀತೋಷ್ಣ ಹವೆಯನ್ನು ಹೊಂದಿರುತ್ತದೆ. ಗಿರಿಧಾಮ, ಜೈವಿಕ ವೈವಿಧ್ಯತೆಗಳ ತಾಣವಾಗಿರುವ ಸಕಲೇಶಪುರ, ಪ್ರಮುಖ ಕೃಷಿ ಪ್ರಧಾನ ಕೇಂದ್ರ ಕೂಡಾ.

ಹೇಮಾವತಿ ನದಿ ತೀರದ ಈ ಕ್ಷೇತ್ರದಲ್ಲಿ ಒಕ್ಕಲಿಗರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಮತ, ಪಂಥದವರು ನೆಲೆಸಿದ್ದಾರೆ. ಮೀಸಲು ಕ್ಷೇತ್ರವಾಗಿರುವ ಸಕಲೇಶಪುರದಲ್ಲಿ ಒಕ್ಕಲಿಗ, ಲಿಂಗಾಯತ ಮತಗಳು ಪ್ರಮುಖ ಪಾತ್ರವಹಿಸಲಿವೆ. ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮತ್ತೊಮ್ಮೆ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.

Karnataka Assembly Election 2018: Sakleshpur constituency profile

ಮೆಣಸು, ಏಲಕ್ಕಿ, ಶುಂಠಿ ಹಾಗೂ ಚಹಾ ಬೆಳೆದರೂ ಕಾಫಿ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ. ಏಲಕ್ಕಿ ಹಾಗೂ ಕಾಫಿ ಸಂಶೋಧನೆ ಹಾಗೂ ವಾಣಿಜ್ಯ ಕೇಂದ್ರವಾಗಿ ಸಕಲೇಶಪುರ ಗುರುತಿಸಿಕೊಂಡಿದೆ.

ಹೇಮಾವತಿ ನದಿ ತೀರದ ಈ ಕ್ಷೇತ್ರದಲ್ಲಿ ಒಕ್ಕಲಿಗರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಮತ, ಪಂಥದವರು ನೆಲೆಸಿದ್ದಾರೆ. ಬೆಂಗಳೂರು- ಮಂಗಳೂರಿನ ಹೆದ್ದಾರಿಯಲ್ಲಿರುವ ಸಕಲೇಶಪುರ, ಸರಕು ಸಾಗಣೆದಾರರಿಗೆ ಅಗತ್ಯವಾದ ತಂಗುದಾಣ.

ಕಳಪೆ ರಸ್ತೆ ಇಲ್ಲಿನ ಬಹುದೊಡ್ಡ ಸಮಸ್ಯೆ, ಬಿಸಿಲೆ ಅರಣ್ಯ ಧಾಮಕ್ಕೆ ಹೆಚ್ಚಿನ ಸುರಕ್ಷತೆ, ಪ್ರವಾಸಿಗರಿಗೆ ಹೆಚ್ಚಿನ ಮಾರ್ಗದರ್ಶನ ನೀಡುವ ಸೌಲಭ್ಯಗಳಲ್ಲಿ ಒಂದು ಕಡೆ ಶ್ರೀಮಂತ ನೈಸರ್ಗಿಕ ಪರಿಸರ ಹಾಗೂ ಎಸ್ಟೇಟುಗಳು ಮತ್ತೊಂದೆಡೆ ಕಾಡು, ಗುಡಿಸಲುಗಳನ್ನು ಹೊಂದಿದ್ದು ಸಮತೋಲನ ಕಾಯ್ದುಕೊಂಡಿದೆ.

ಮೀಸಲು ಕ್ಷೇತ್ರವಾಗಿರುವ ಸಕಲೇಶಪುರದಲ್ಲಿ ಒಕ್ಕಲಿಗ, ಲಿಂಗಾಯತ ಮತಗಳು ಪ್ರಮುಖ ಪಾತ್ರವಹಿಸಲಿವೆ. ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮತ್ತೊಮ್ಮೆ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.

ಕಳೆದ ಬಾರಿ ಜೆಡಿಎಸ್ ನ ಎಚ್ ಕೆ ಕುಮಾರಸ್ವಾಮಿ ಅವರು 63,602 ಮತಗಳನ್ನು ಪಡೆದು ಕಾಂಗ್ರೆಸ್ಸಿನ ಡಿ ಮಲ್ಲೇಶ್ (57,110) ಅವರನ್ನು ಸೋಲಿಸಿ, ಜಯಭೇರಿ ಬಾರಿಸಿದ್ದರು. ಈ ಬಾರಿ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿಯ ನಿರ್ವಾಣಯ್ಯ ಅವರು ಹೆಚ್ಚಿನ ಪೈಪೋಟಿ ನೀಡುವ ಸಾಧ್ಯತೆಯಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018: Read all about Sakleshpur assembly constituency of Hassan. Get election news from Sakleshpur. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ