ನರಸಿಂಹರಾಜ ಕ್ಷೇತ್ರ : ಕಾಂಗ್ರೆಸ್ಸಿಗೆ ಮತ್ತೆ ಗೆಲುವಿನ ನಿರೀಕ್ಷೆ
Recommended Video

ನರಸಿಂಹರಾಜ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಇಲ್ಲಿ ಜಯ ಗಳಿಸಿದ್ದ ತನ್ವೀರ್ ಶೇಠ್ , ಈಗ ಸಚಿವರೂ ಆಗಿದ್ದಾರೆ. ಅವರ ವಿರುದ್ಧ ಸ್ಪರ್ಧಿಸಿದ್ದ ಎಸ್ ಡಿಪಿಐನ ಅಬ್ದುಲ್ ಮಜೀದ್ ಅವರು ಸೋಲು ಕಂಡಿದ್ದರು. ಆದರೆ, ಈ ಬಾರಿ ಪರಿಸ್ಥಿತಿ ಕಾಂಗ್ರೆಸ್ ಪರವಾಗಿಯೇ ಇಲ್ಲ ಎಂಬುದಂತೂ ಸ್ಪಷ್ಟ.
ಬಿಜೆಪಿಯಿಂದ ಮಾರುತಿ ರಾವ್, ಬಿ.ಪಿ. ಮಂಜುನಾಥ್ ಅವರು ಇಲ್ಲಿ ಸ್ಪರ್ಧಿಸಬಹುದು ಎಂಬ ಮಾತಿದೆ. ಈ ಬಾರಿ ತನ್ವೀರ್ ಸೇಠ್ ಅವರನ್ನು ಸೋಲಿಸಲು, ಇತರೆ ಕೋಮಿನವರು ಜತೆಯಾದರೂ, ಪಕ್ಷಗಳ ನಡುವೆ ಮತಗಳು ವಿಭಜನೆಯಾಗಬಹುದು.

ಇದನ್ನು ತಪ್ಪಿಸಲು ಎಸ್ ಡಿಪಿಐನ ಬಲವರ್ಧನೆ ಮಾಡಲು ಸಿದ್ಧತೆಗಳು ನಡೆದಿವೆ. ಇಲ್ಲಿ ಎಸ್ ಡಿಪಿಐ ಜತೆಗೆ ದಳ ಹೊಂದಾಣಿಕೆ ಮಾಡಿಕೊಂಡರೆ ಅದಕ್ಕೆ ಹೆಚ್ಚು ಅನುಕೂಲ ಎನ್ನಲಾಗುತ್ತಿದೆ. ಈ ಹಿಂದೆ ಸಂದೇಶ್ ನಾಗರಾಜ್ ಅವರು ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದರು. ಜೆಡಿಎಸ್ ನಿಂದ ಅಬ್ದುಲ್ಲಾ ಕಣಕ್ಕಿಳಿಯಲಿದ್ದಾರೆ.
2013ರ ಫಲಿತಾಂಶ: 2013ರಲ್ಲಿ ಶೇ 54.73ರಷ್ಟು ಮತದಾನವಾಗಿತ್ತು. ಕಾಂಗ್ರೆಸ್ಸಿನ ತನ್ವೀರ್ ಸೇಠ್ 38,037 ಮತಗಳನ್ನು ಗಳಿಸಿದ್ದರೆ, ಎಸ್ ಡಿಪಿಐನ ಅಬ್ದುಲ್ ಮಜೀದ್ ಅವರು 29,667 ಮತ ಗಳಿಸಿದ್ದರು. ತನ್ವೀರ್ ಅವರ ಗೆಲುವಿನ ಅಂತರ 8,370(ಶೇ 7.23) ಮತಗಳು.












Click it and Unblock the Notifications