ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣರಾಜ ಒಡೆಯರ ಕನಸಿನ ಕೆ.ಆರ್ ಪೇಟೆ ಕ್ಷೇತ್ರ ಪರಿಚಯ

By Mahesh
|
Google Oneindia Kannada News

ಮೈಸೂರು ಜಿಲ್ಲೆ ಹಾಗೂ ಹಾಸನ ಜಿಲ್ಲೆ ಪ್ರಭಾವ ಹೆಚ್ಚಾಗಿ ಹೊಂದಿರುವ ಸಂಸ್ಕೃತಿ, ಸಾಹಿತ್ಯ, ಜಾನಪದ ಕಣಜ ಎನಿಸಿಕೊಂಡಿರುವ ಕೃಷ್ಣರಾಜಪೇಟೆ(ಕೆ. ಆರ್ ಪೇಟೆ) ಸುತ್ತಾ ಮುತ್ತಾ ಹತ್ತು ಹಲವು ಪ್ರೇಕ್ಷಣೀಯ ತಾಣಗಳಿವೆ.

ಅಕ್ಕಿಹೆಬ್ಬಾಳು, ಬೂಕನಕೆರೆ, ಕಿಕ್ಕೇರಿ, ಕಸಬಾ, ಶೀಳನೆರೆ, ಸಂತೇಬಾಚಹಳ್ಳಿ ಎಂಬ ಆರು ಹೋಬಳಿಗಳಿವೆ. ಈ ಪ್ರದೇಶ ಈ ಮುಂಚೆ ಹತ್ತಿ ಮಾರಾಟ ಕೇಂದ್ರವಾಗಿತ್ತು. ಹತ್ತಿ ತುಂಬಿಕೊಂಡು ನಿಂತಿದ್ದ ಎತ್ತಿನ ಗಾಡಿಗಳು ನೋಡುಗರಿಗೆ ಹತ್ತಿಯ ಗುಪ್ಪೆಯಾಗಿ ಅತ್ತಿಗುಪ್ಪೆ, ಹತ್ತಿ ಗುಪ್ಪೆ ಎಂದು ಕರೆಯಲ್ಪಟ್ಟಿತ್ತು.

ಕೃಷ್ಣರಾಜ ಒಡೆಯರ ವರ್ಧಂತಿಯ ಅಂಗವಾಗಿ ಎಡತೊರೆ ಕೃಷ್ಣರಾಜನಗರವಾಗಿ, ಅತ್ತಿಗುಪ್ಪೆಯು ಕೃಷ್ಣರಾಜಪೇಟೆ ಉದಯವಾಯಿತು.

ಈ ಕ್ಷೇತ್ರದಲ್ಲಿ ಕ್ರೋಮೈಟ್, ಬೆಣಚುಕಲ್ಲು, ಬೂದು ಬಣ್ಣದ ಶಿಲೆ, ಆಭ್ರಕದ ಅದಿರುಗಳು ದೊರಕಿವೆ. ಕೆಂಪು ಮಿಶ್ರಿತ ಮಣ್ಣು ಹೊಂದಿದ್ದು, ಕೆಲ ಹೋಬಳಿಗಳಲ್ಲಿ ನೀರಾವರಿ ಸೌಲಭ್ಯ ಚೆನ್ನಾಗಿದೆ.

ಹುರಳಿ, ರಾಗಿ, ಬತ್ತ, ಕಬ್ಬು, ಬಾಳೆ ತೆಂಗಿನ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದಲ್ಲದೆ ಹೈನುಗಾರಿಕೆ, ರೇಷ್ಮೆ ಸಾಕಣೆ ಅಲ್ಲದೆ ಮಣ್ಣಿನ ಮಡಿಕೆ ತಯಾರಿಕೆ, ಕೈಮಗ್ಗದ ನೇಯ್ಗೆಯಂಥ ಗುಡಿಕೈಗಾರಿಕೆ ಎಲ್ಲೆಡೆ ಕಾಣಬಹುದು.

ಒಂದು ಕಾಲದಲ್ಲಿ ನೂರಾರು ಕೆರೆಗಳನ್ನು ಹೊಂದಿತ್ತು. ಹೇಮಗಿರಿ ಅಣೆಕಟ್ಟು, ಕೃಷ್ಣರಾಜಸಾಗರ ಹಿನ್ನೀರು ಸಿಗುತ್ತಿತ್ತು. ಈಗ ನಾಲ್ಕೈದು ನಾಲೆಗಳು ಆಸರೆಯಾಗಿವೆ.

ಈ ಭಾಗದಲ್ಲಿ ಹೆಸರುವಾಸಿಯಾದ ಬಲ್ಲೇನಹಳ್ಲಿ ಸೇವಂತಿಗೆ ಹೂವಿಗೆ ಸೂಕ್ತ ಮಾರುಕಟ್ಟೆ ಸಿಗುತ್ತಿಲ್ಲ. ಮಿಕ್ಕಂತೆ, ಸಕ್ಕರೆ, ಹೈನುಗಾರಿಕೆ , ರೇಷ್ಮೆ, ವಿದ್ಯುತ್ ಉತ್ಪಾದನಾ ಕೇಂದ್ರಗಳಿವೆ. ಕ್ಷೇತ್ರದ ಪ್ರಮುಖರು, ಪ್ರೇಕ್ಷಣೀಯ ಸ್ಥಳಗಳು, ಮತದಾರರ ವಿವರ ಮುಂದಿದೆ...

ಪ್ರೇಕ್ಷಣೀಯ ಸ್ಥಳಗಳು

ಪ್ರೇಕ್ಷಣೀಯ ಸ್ಥಳಗಳು

ಹೊಸಹೊಳಲು ಗ್ರಾಮದ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯ. ಇದು ತ್ರಿಕೂಟಾಚಲ ದೇವಾಲಯವಾಗಿದ್ದು, ಲಕ್ಷ್ಮೀನರಸಿಂಹ ಮತ್ತು ಗೋಪಾಲಕೃಷ್ಣ ಸಹ ಇಲ್ಲಿದ್ದಾರೆ.

ಗೋವಿಂದನಹಳ್ಳಿಯ ಪಂಚಲಿಂಗೇಶ್ವರ ದೇವಾಲಯ,ಕಿಕ್ಕೇರಿಯ ಬ್ರಹ್ಮೇಶ್ವರ ದೇವಾಲಯ ಹೊಯ್ಸಳ ಶಿಲ್ಪ ಲಕ್ಷಣವುಳ್ಳ ಏಕಕೂಟ ದೇವಾಲಯ,ಅಗ್ರಹಾರಬಾಚಹಳ್ಳಿಯಲ್ಲಿ ಹುಣಸೇಶ್ವರ ದೇವಾಲಯ, ಕಲ್ಲಹಳ್ಳಿಯಲ್ಲಿರುವ ಭೂವರಾಹನಾಥಸ್ವಾಮಿ ದೇವಾಲಯ,ಕೃಷ್ಣರಾಜಪೇಟೆಯ ಕೈಲಾಸೇಶ್ವರ ಹೀಗೆ ದೇಗುಲಗಳ ಪಟ್ಟಿ ಮಾಡಿದರೆ ಸಂಖ್ಯೆ ನೂರು ದಾಟುತ್ತದೆ.

ಕೆ.ಆರ್ ಪೇಟೆ ಕ್ಷೇತ್ರದ ಪ್ರಮುಖರು

ಕೆ.ಆರ್ ಪೇಟೆ ಕ್ಷೇತ್ರದ ಪ್ರಮುಖರು

ಹೊಸಹೊಳಲು ಗೋವಿಂದೇಗೌಡ, ಮೊಸಳೆಕೊಪ್ಪಲು ನಿಂಗೇಗೌಡ, ಬೂಕನಕೆರೆ ಬೋರೇಗೌಡ, ಬೊಮ್ಮನಾಯಕನಹಳ್ಳಿ ಮಾಯಣ್ಣಗೌಡ, ಕಿಕ್ಕೇರಿಯ ನರಸೇಗೌಡ ಸೇರಿದಂತೆ 30ಕ್ಕೂ ಅಧಿಕ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಪ್ರದೇಶದಿಂದ ಗುರುತಿಸಬಹುದು.

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಜನ್ಮ ಸ್ಥಳ ಬೂಕನಕೆರೆ ಕೂಡಾ ಈ ಕ್ಷೇತ್ರದಲ್ಲಿದೆ. ಬೆಂಗಳೂರಿನಲ್ಲಿ ಪ್ರಥಮ ಕಲಾಮಂದಿರ ನಿರ್ಮಿಸಿದ ಖ್ಯಾತಿಯ ಅ.ನಾ.ಸುಬ್ಬರಾಯರು, ಸಾಹಿತಿ ಅ.ರಾ ಮಿತ್ರ,ಶತಾಯುಷಿ ಸಾಹಿತಿ ಎ.ಎನ್ ಮೂರ್ತಿರಾಯರು, ಎ.ಎಸ್ ಮೂರ್ತಿ, ಕೆಎಸ್ಎಲ್ ಸ್ವಾಮಿ, ನಟ ಶ್ರೀಧರ್, ಕಿಕ್ಕೇರಿಯ ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿ, ಡಾ. ಸುಜನಾ, ನಿಘಂಟು ತಜ್ಞ ಜಿ ವೆಂಕಟಸುಬ್ಬಯ್ಯ, ಡಾ. ಪದ್ಮಾಶೇಖರ್, ಡಾ. ಅಂಕೇಗೌಡ, ಡಾ. ವಿಜಯಲಕ್ಷ್ಮಿ ಬಸವರಾಜ್, ಹಾಸ್ಯ ನಟ ಶಿವರಾಜ್ ಕೆಆರ್ ಪೇಟೆ, ಸಂಗೀತಗಾರ ಕಿಕ್ಕೇರಿ ಕೃಷ್ಣಮೂರ್ತಿ, ನಾಡಿಗ ಸೋದರಿಯರು ಹೀಗ್, ಕಲೆ, ಸಾಹಿತ್ಯ , ಸಂಸ್ಕೃತಿ, ಸಿನಿಮಾ ರಂಗ ಎಲ್ಲೆಡೆ ತಾಲೂಕಿನ ಪ್ರತಿಭೆಗಳನ್ನು ಕಾಣಬಹುದು.

ಮತದಾರರು

ಮತದಾರರು

ಮಂಡ್ಯ ಜಿಲ್ಲೆ ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಏಳು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 14,61,031 ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಕೆ.ಆರ್.ಪೇಟೆ 2,01,595 (1,02,639 ಪುರುಷ, 98,956 ಮಹಿಳೆ) ಮತದಾರರಿದ್ದಾರೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೆ.ಎಸ್. ಚಂದ್ರಶೇಖರ್ ಅವರನ್ನು ಸೋಲಿಸಿ ಜೆಡಿಎಸ್ ನ ನಾರಾಯಣ ಗೌಡ, ಗೆಲುವು ಸಾಧಿಸಿದ್ದರು. ಈ ಬಾರಿ ಈ ಶಾಸಕರ ಬಗ್ಗೆ ಅಂಥ ಅಲೆಯೇನೂ ಕಾಣುತ್ತಿಲ್ಲ. ಆದರೂ, ಒಕ್ಕಲಿಗರ ಮತಗಳು ಈ ಕ್ಷೇತ್ರದಲ್ಲಿ ಜೆಡಿಎಸ್ ಪರವಾಗಿಯೇ ಇರುವುದರಿಂದ ಈ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದೆ.

2013ರ ಫಲಿತಾಂಶ

2013ರ ಫಲಿತಾಂಶ

2013ರಲ್ಲಿ ಒಟ್ಟು 7 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಒಬ್ಬರು ನಾಮಪತ್ರ ಹಿಂಪಡೆದರು.6 ಮಂದಿ ಸ್ಪರ್ಧಿಗಳ ಪೈಕಿ 3 ಮಂದಿ ಠೇವಣಿ ಕಳೆದುಕೊಂಡರು.
ಒಟ್ಟು ಶೇ 81.57 ರಷ್ಟು ಮತದಾನವಾಗಿತ್ತು. 153482 ಮತಗಳ ಪೈಕಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ನಾರಾಯಣಗೌಡ ಅವರು 56784 ಮತಗಳನ್ನು ಗಳಿಸಿ ಜಯ ದಾಖಲಿಸಿದ್ದರು. ಕಾಂಗ್ರೆಸ್ಸಿನ ಕೆ.ಬಿ ಚಂದ್ರಶೇಖರ್ ಅವರು 47541 ಮತಗಳಿಸಿ ಸೋಲು ಕಂಡಿದ್ದರು. 9243 ಮತಗಳ (ಶೇ 6.02) ಅಂತರದಿಂದ ಚಲುವರಾಯಸ್ವಾಮಿ ಗೆಲುವಿನ ನಗೆ ಬೀರಿದ್ದರು.

English summary
Karnataka Assembly Election 2018: Read all about Mandya district Krishnarajpet (KR Pet) assembly constituency of Mandya. Get election news from Mandya district. Know about Krishnarajpet candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X