ಕ್ಷೇತ್ರ ಪರಿಚಯ : ಜಗಳೂರಿನ ಜನರು ಯಾರನ್ನು ಆಯ್ಕೆ ಮಾಡಲಿದ್ದಾರೆ?

ಸಣ್ಣ ಬೆಟ್ಟ ಗುಡ್ಡಗಳಿಂದ ಆವೃತವಾಗಿರುವ ಕ್ಷೇತ್ರ ದಾವಣಗೆರೆ ಜಿಲ್ಲೆಯ ಜಗಳೂರು. ಕುಡಿಯುವ ನೀರಿಗಾಗಿ ಜನರು ಇಲ್ಲಿ ಪರದಾಡುವುದು ತಪ್ಪಿಲ್ಲ. ಕ್ಷೇತ್ರದಲ್ಲಿ ಮಳೆ ಕಡಿಮೆ, 7 ರಿಂದ 8 ಕೆರೆಗಳು ಜನರಿಗೆ ಜೀವನಾಧಾರ.

ಮೂಲ ಸೌಕರ್ಯಗಳು ಇನ್ನೂ ಅಭಿವೃದ್ಧಿಯಾಗಬೇಕಿದೆ. ಈ ಕ್ಷೇತ್ರ ದಾವಣಗೆರೆ ಜಿಲ್ಲೆಗೆ ಸೇರಿದ್ದರೂ ಜನರು ಹೆಚ್ಚಾಗಿ ಅವಲಂಬಿಸಿರುವುದು ಚಿತ್ರದುರ್ಗವನ್ನು.

ಕ್ಷೇತ್ರದ ಕಪ್ಪು ಬಣ್ಣದ ಒಂದಷ್ಟು ಭೂಮಿ ಫಲವತ್ತಾಗಿದೆ. ಜೋಳ. ಹತ್ತಿ, ರಾಗಿ ಮುಂತಾದ ಬೆಳೆ ಬೆಳೆಯಲಾಗುತ್ತದೆ. ಉಳಿದ ಭಾಗ ಕೃಷಿಗೆ ಯೋಗ್ಯವಲ್ಲ.

Karnataka Assembly Election 2018 : Jagalur constituency profile

ರಾಜಕೀಯವಾಗಿ ಕಾಂಗ್ರೆಸ್ ವಶದಲ್ಲಿರುವ ಕ್ಷೇತ್ರ ಜಗಳೂರು. ಎಚ್.ಬಿ.ರಾಜೇಶ್ ಹಾಲಿ ಶಾಸಕರು. ಜೆಡಿಎಸ್‌ನ ಜಿ.ರಂಗಯ್ಯ, ಬಿಜೆಪಿಯ ಅರುಣ್ ಕುಮಾರ್, ಎಸ್‌.ವಿ.ರಾಮಚಂದ್ರ ಪ್ರಮುಖ ನಾಯಕರುಗಳು.

2013ರ ಚುನಾವಣೆಯಲ್ಲಿ ಯಡಿಯೂರಪ್ಪ ಆಪ್ತರಾಗಿರುವ ಎಸ್.ವಿ.ರಾಮಚಂದ್ರ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದರಿಂದಾಗಿ ಬಿಜೆಪಿ ಅಭ್ಯರ್ಥಿ ಡಾ.ಅರುಣ್ ಕುಮಾರ್ ಠೇವಣಿ ಕಳೆದುಕೊಂಡಿದ್ದರು.

ಈ ಬಾರಿಯ ಚುನಾವಣೆಯಲ್ಲಿಯೂ ಜೆಡಿಎಸ್‌ನ ಜಿ.ರಂಗಯ್ಯ, ಕಾಂಗ್ರೆಸ್‌ನಿಂದ ಎಚ್.ಬಿ.ರಾಜೇಶ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಆದರೆ, ಬಿಜೆಪಿಯಿಂದ ಅರುಣ್ ಕುಮಾರ್, ಎಸ್.ವಿ.ರಾಮಚಂದ್ರ ಯಾರು ಅಭ್ಯರ್ಥಿ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಆಂಜನೇಯ ಅವರು ಪಕ್ಕದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಪ್ರಯತ್ನ ನಡೆಸಬಹುದು. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ ಅವರು ಪಕ್ಷ ಗೆಲ್ಲಿಸಲು ತಂತ್ರ ರೂಪಿಸಬಹುದು.

2013ರ ಚುನಾವಣೆಯಲ್ಲಿ ಎಚ್.ಪಿ.ರಾಜೇಶ್ 77,805 ಮತ, ಕೆಜೆಪಿಯ ಎಸ್.ವಿ.ರಾಮಚಂದ್ರ 40,915 ಮತ, ಜೆಡಿಎಸ್‌ನ ಡಾ.ಜಿ.ರಂಗಯ್ಯ 4,325 ಮತಗಳನ್ನು ಪಡೆದಿದ್ದರು. ಬಿಜೆಪಿಯ ಡಾ.ಅರುಣ್ ಕುಮಾರ್ ಪಡೆದಿದ್ದ ಮತಗಳು ಕೇವಲ 1,845.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+