ಹಳಿಯಾಳ ಕ್ಷೇತ್ರ: ಕಾಳೀ ಕೃಪೆ ಯಾರ ಮೇಲೆ..?

Posted By:
Subscribe to Oneindia Kannada

ಸ್ವಚ್ಛಂದ ಕಾಡು ಹಲವು ಕಾರ್ಖಾನೆಗಳನ್ನು ಹೊಂದಿರುವ ಹಳಿಯಾಳ, ಉತ್ತರ ಕನ್ನಡದ ತಾಲೂಕಾ ಕೇಂದ್ರ.

ದಟ್ಟ ಕಾಡನ್ನು ಹೊಂದಿರುವ ಈ ಪ್ರದೇಶದಲ್ಲಿ ನೈಸರ್ಗಿಕ ಸಂಪನ್ಮೂಲ ಹೇರಳವಾಗಿದೆ. ಇಲ್ಲಿನ ಶಿವಾಜಿ ಕೋಟೆ, ದಾಂಡೇಲಿ, ಕಾಳಿ ನದಿ, ಸೂಪಾ ಆಣೆಕಟ್ಟು ಹೀಗೆ ಸಾಕಷ್ಟು ರಮಣೀಯ ತಾಣಗಳಿಂದಾಗಿ ಪ್ರವಾಸಿಗರಿಗೆ ಈ ತಾಣ ಪ್ರಿಯವಾಗಿದೆ.

ಯಲ್ಲಾಪುರ ಕ್ಷೇತ್ರ: ಹವ್ಯಕರ ಮತಗಳೇ ನಿರ್ಣಾಯಕ

ಈ ಕ್ಷೇತ್ರದಿಂದ ಕಾಂಗ್ರೆಸ್ ನ ಖಾಯಂ ಅಭ್ಯರ್ಥಿ ಆರ್.ವಿ.ದೇಶಪಾಂಡೆ. ಕ್ಷೇತ್ರದ ಪ್ರಸ್ತುತ ಶಾಸಕರೂ ಅವರೇ. ದೇಶಪಾಂಡೆ ಅವರು ಕರ್ನಾಟಕ ಸರ್ಕಾರದಲ್ಲಿ ಮಂತ್ರಿ ಪದವಿ ಪಡೆದಿದ್ದರೂ ಪ್ರತಿವಾರಕ್ಕೂ ಸ್ವಕ್ಷೇತ್ರಕ್ಕೆ ತೆರಳಿ ಮುಂಬರುವ ಚುನಾವಣೆಯಲ್ಲೂ ಗೆಲ್ಲುವ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆ.

Karnataka Assembly Election 2018: Haliyal Constituency Profile

ಅಲ್ಲದೇ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳೂ ನಡೆದಿವೆ. ಪ್ರವಾಸೋದ್ಯಮ ಅಭಿವೃದ್ಧಿಗೂ ಹತ್ತು ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ.

2008 ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ದೇಶಪಾಂಡೆ ಅವರನ್ನು ಅಚ್ಚರಿಯ ರೀತಿಯಲ್ಲಿ ಸೋಲಿಸಿದ್ದ ಸುನೀಲ್ ಹೆಗಡೆ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಆದ್ದರಿಂದ ಜೆಡಿಎಸ್ ಗೆ ಅಭ್ಯರ್ಥಿಯನ್ನು ಹುಡುಕುವುದೇ ಒಂದು ದೊಡ್ಡ ತಲೆನೋವಾಗಿದೆ.

2013 ರಲ್ಲೂ ಜೆಡಿಎಸ್ ನ ಸುನಿಲ್ ಹೆಗಡೆ ಅವರ ವಿರುದ್ಧ ಆರ್ ವಿ ದೇಶಪಾಂಡೆ ಅವರು ತುಂಬಾ ಅಂತರದ ಗೆಲುವನ್ನೇನೂ ಪಡೆದಿರಲಿಲ್ಲ. ಆರ್.ವಿ.ದೇಶಪಾಂಡೆ(ಕಾಂಗ್ರೆಸ್) 55005 ಮತಗಳನ್ನು ಪಡೆದಿದ್ದರೆ, ಸುನಿಲ್ ಹೆಗಡೆ(ಜೆಡಿಎಸ್) 49066 ಮತಗಳನ್ನು ಗಳಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018: Read all about Haliyal assembly constituency of Uttara Kannada district. Get election news from Haliyal. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ