ಕ್ಷೇತ್ರ ಪರಿಚಯ : ಕುಟುಂಬ ರಾಜಕಾರಣ ನಡೆಯುವ ಕ್ಷೇತ್ರವಿದು!

Posted By: Gururaj
Subscribe to Oneindia Kannada

ನಂಜುಡಪ್ಪ ವರದಿಯ ಪ್ರಕಾರ ಕರ್ನಾಟಕದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ದೇವದುರ್ಗವೂ ಒಂದು. ದೇವದುರ್ಗದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಸಚಿವ ಸ್ಥಾನವನ್ನು ಪಡೆದರೂ ಕ್ಷೇತ್ರ ಇನ್ನೂ ಅಭಿವೃದ್ಧಿಯಾಗಬೇಕಿದೆ.

ರಾಜ್ಯದಲ್ಲಿ ಕುಟುಂಬ ರಾಜಕಾರಣ ನಡೆಯುವ ಪ್ರಮುಖ ಕ್ಷೇತ್ರ ದೇವದುರ್ಗ. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ವೆಂಕಟೇಶ ನಾಯಕ ಅವರು ಶಾಸಕರಾಗಿ ಆಯ್ಕೆಯಾದರು. ಆದರೆ, 2015ರಲ್ಲಿ ನಡೆದ ರೈಲು ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದರು.

ಕ್ಷೇತ್ರ ಪರಿಚಯ : ಮಸ್ಕಿಯಲ್ಲಿ ಗೆಲುವಿನ ಸಿಹಿ ಯಾರಿಗೆ?

ನಂತರ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುಕಂಡಿತು.ವೆಂಕಟೇಶ ನಾಯಕರ ಮೊಮ್ಮಗ ಶಿವನಗೌಡ ನಾಯಕ ಉಪ ಚುನಾವಣೆಯಲ್ಲಿ ಬಿಜೆಪಿಗೆ ಕ್ಷೇತ್ರವನ್ನು ಗೆದ್ದುಕೊಟ್ಟರು.

Karnataka Assembly Election 2018 : Devadurga constituency profile

2008ರಲ್ಲಿ ಜೆಡಿಎಸ್ ಪಕ್ಷ ಸೇರಿದ್ದ ಶಿವನಗೌಡ ನಾಯಕ ಆಪರೇಷನ್ ಕಮಲದ ಭಾಗವಾಗಿ ಬಿಜೆಪಿ ಸೇರಿದರು. ಚುನಾವಣೆಯಲ್ಲಿ ಗೆದ್ದು ಸಚಿವರೂ ಆದರು. ಆದರೆ, 2013ರ ಚುನಾವಣಯಲ್ಲಿ ಅಜ್ಜನ ವಿರುದ್ಧ ಸೋಲು ಕಂಡರು. ವೆಂಕಟೇಶ ನಾಯಕರ ಮರಣದ ಬಳಿಕ ಉಪ ಚುನಾವಣೆಯಲ್ಲಿ ಪುನಃ ಗೆದ್ದರು.

ಕ್ಷೇತ್ರ ಪರಿಚಯ : ಬಿಸಿಲನಾಡು ರಾಯಚೂರಲ್ಲಿ ಗೆಲ್ಲುವವರು ಯಾರು?

ಶಿವನಗೌಡ ನಾಯಕ ಅವರ ಸಹೋದರಿಯ ಪತಿ ವೆಂಕಟೇಶ ಪೂಜಾರಿ ಜೆಡಿಎಸ್ ಟಿಕೆಟ್‌ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಆಡಳಿತ ಪಕ್ಷ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬುದು ಇನ್ನೂ ನಿಗೂಢ.

ವೆಂಕಟೇಶ ನಾಯಕರ ಪುತ್ರ ಬಿ.ವಿ.ನಾಯಕ ರಾಯಚೂರು ಸಂಸದರು. ಅವರಿಗೆ ಟಕೆಟ್ ನೀಡಬೇಕು ಎಂಬ ಬೇಡಿಕೆಯೂ ಇದೆ. ಒಟ್ಟಿನಲ್ಲಿ ಕ್ಷೇತ್ರದ ಚುನಾವಣಾ ಕಣ ಕುತೂಹಲ ಮೂಡಿಸಿದೆ.

ಕ್ಷೇತ್ರ ಪರಿಚಯ : ಲಿಂಗಸಗೂರು ಕ್ಷೇತ್ರದಲ್ಲಿ ಯಾರಿಗೆ ಜಯ?

2013ರ ಚುನಾವಣೆಯಲ್ಲಿ ಎ.ವೆಂಕಟೇಶ ನಾಯಕ 62,070 ಮತಗಳನ್ನು ಪಡೆದಿದ್ದರು. ಬಿಜೆಪಿಯ ಶಿವನಗೌಡ ನಾಯಕ 58,370 ಮತ ಪಡೆದಿದ್ದರು. ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.

2016ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕೆ.ಶಿವನಗೌಡ ನಾಯಕ 72,647 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ನ ಎ.ರಾಜಶೇಖರ ನಾಯಕ 55,776 ಮತ, ಜೆಡಿಎಸ್‌ನ ಕರೆಮ್ಮ ನಾಯಕ 9,156 ಮತಗಳನ್ನು ಪಡೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018 : Read all about Devadurga constituency of Raichur district. Get election news from Devadurga. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X