ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜ ಕ್ಷೇತ್ರ : ಮತ್ತೆ ಕಾಂಗ್ರೆಸ್ ಪ್ರಾಬಲ್ಯದ ನಿರೀಕ್ಷೆ!

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಚಾಮರಾಜ ಶಾಸಕರು ವಾಸು. ಇವರು ಕಾಂಗ್ರೆಸ್ ಪಕ್ಷದಿಂದ ಗೆಲುವು ಪಡೆದಿದ್ದಾರೆ. ಅವರಿಗೆ ಸಮೀಪದ ಅಭ್ಯರ್ಥಿಯಾಗಿ ಸೋತಿದ್ದು ಜೆಡಿಎಸ್ ನ ಎಚ್.ಎಸ್. ಶಂಕರಲಿಂಗೇ ಗೌಡ. ಸಿದ್ದರಾಮಯ್ಯ ಅವರಿಗೆ ಈ ಶಾಸಕರ ಮೇಲೆ ಅಷ್ಟಾಗಿ ಸಮಾಧಾನವಿಲ್ಲ. ಒಕ್ಕಲಿಗರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಒಕ್ಕಲಿಗ ಅಭ್ಯರ್ಥಿಯನ್ನೇ ಮತ್ತೆ ಕಣಕ್ಕಿಳಿಸುವುದು ಗ್ಯಾರಂಟಿ.

ಬಿಜೆಪಿಯಿಂದ ಯಾರು ಕಣಕ್ಕಿಳಿಯಲಿದ್ದಾರೆಂದು ಸ್ಪಷ್ಟವಾಗಿಲ್ಲವಾದರೂ ಈ ಬಗ್ಗೆ ಎಸ್.ಎಂ.ಕೃಷ್ಣ ಅವರ ಸಲಹೆ ಪಡೆಯುವ ಸಾಧ್ಯತೆಗಳಿವೆ. ಆದರೆ, ಕೃಷ್ಣ ಅವರು ಯಾವುದೇ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುತ್ತಿಲ್ಲ.

ಏಕೆಂದರೆ, ವಾಸು ಅವರಿಗೂ ಸಿದ್ದರಾಮಯ್ಯ ಅವರಿಗೂ ಅಷ್ಟಕ್ಕಷ್ಟೆ. ಇದಕ್ಕೆ ಕಾರಣ, ವಾಸು ಅವರು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಿಗೆ ತುಂಬಾ ಹತ್ತಿರದವರಾಗಿರುವುದು.

ಚಾಮರಾಜ ಕ್ಷೇತ್ರದ ಅಭ್ಯರ್ಥಿಗಳ್ಯಾರು..? ಒಂದು ಪಕ್ಷಿನೋಟಚಾಮರಾಜ ಕ್ಷೇತ್ರದ ಅಭ್ಯರ್ಥಿಗಳ್ಯಾರು..? ಒಂದು ಪಕ್ಷಿನೋಟ

ಹಾಗಾಗಿ, ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಇವರಿಗೆ ಟಿಕೆಟ್ ಕೊಡಲು ಸಿದ್ದರಾಮಯ್ಯ ಹಿಂದೇಟು ಹಾಕಿದರೂ, ವೀರಪ್ಪ ಮೊಯ್ಲಿಯವರ ಶಿಫಾರಸು ಉಪಯೋಗಿಸಿಕೊಂಡು ಟಿಕೆಟ್ ಗಿಟ್ಟಿಸಿಕೊಳ್ಳುವ ತಾಕತ್ತು ವಾಸು ಅವರಿಗಿದೆ. ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಟ್ಟದ ಶಿಷ್ಯ ಧ್ರುವಕುಮಾರ್ ಸಹ ಕಾಂಗ್ರೆಸ್ ನಿಂದ ಟಿಕೇಟ್ ಆಕಾಂಕ್ಷಿ.

Karnataka Assembly Election 2018: Chamaraja constituency profile

ಹಾಗಾದಲ್ಲಿ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಜೆಡಿಎಸ್ ಸಖತ್ತಾಗಿಯೇ ಪೈಪೋಟಿ ನೀಡಲಿದೆ. ಜೆಡಿಎಸ್ ವರಿಷ್ಠ್ ಎಚ್. ಡಿ. ದೇವೇಗೌಡ ಅವರ ಕುಟುಂಬದೊಂದಿಗೆ ಬೀಗತನ ಹೊಂದಿರುವ ಪ್ರೊ. ರಂಗಪ್ಪ ಅವರನ್ನು ಈ ಬಾರಿ ಕಣಕ್ಕಿಳಿಸಲು ಅದು ನಿರ್ಧರಿಸಿದೆ.

ಒಕ್ಕಲಿಗರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಒಕ್ಕಲಿಗ ಅಭ್ಯರ್ಥಿಯನ್ನೇ ಮತ್ತೆ ಕಣಕ್ಕಿಳಿಸುವುದು ಗ್ಯಾರಂಟಿ. ಬಿಜೆಪಿ ನಗರಾಧ್ಯಕ್ಷ ಡಾ. ಮಂಜುನಾಥ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಬಿಜೆಪಿಯಿಂದ ಯಾರು ಕಣಕ್ಕಿಳಿದರೂ ಗೆಲುವು ದಕ್ಕುವುದು ಕಷ್ಟ.

2013ರ ಫಲಿತಾಂಶ ವಿಶ್ಲೇಷಣೆ:

* ಒಟ್ಟು 22 ಮಂದಿ ನಾಮಪತ್ರ ಸಲ್ಲಿಸಿದ್ದರು, 5 ಮಂದಿ ಹಿಂಪಡೆದರು, 17 ಮಂದಿ ಸ್ಪರ್ಧಿಸಿದ್ದರು. 14 ಮಂದಿ ಠೇವಣಿ ಕಳೆದುಕೊಂಡರು.

* ಶೇ 55.46ರಷ್ಟು ಮತದಾನವಾಗಿದ್ದು, 109938 ಮತಗಳ ಪೈಕಿ ಕಾಂಗ್ರೆಸ್ಸಿನ ವಾಸು ಅವರು 41930 ಮತಗಳನ್ನು ಗಳಿಸಿದ್ದು, ಜೆಡಿಎಸ್ ನ ಎಚ್. ಎಚ್ ಶಂಕರಲಿಂಗೇಗೌಡ ಅವರು 29015 ಮತಗಳನ್ನು ಗಳಿಸಿ ಸೋಲು ಅನುಭವಿಸಿದರು. 12915 ಮತಗಳ (ಶೇ 11.75 ರಷ್ಟು) ಅಂತರದಿಂದ ವಾಸು ಜಯ ಗಳಿಸಿದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ನಾಗೇಂದ್ರ 26063 ಮತಗಳನ್ನು ಪಡೆದು ಮೂರನೆ ಸ್ಥಾನ ಪಡೆದಿದ್ದರು.

ಒಕ್ಕಲಿಗರ ಮತಗಳು ನಿರ್ಣಾಯಕ

ಕ್ಷೇತ್ರದಲ್ಲಿ ಒಕ್ಕಲಿಗರು 65,000 ಮಂದಿ ಇದ್ದು ಪ್ರಾಬಲ್ಯ ಮೆರೆದಿದ್ದಾರೆ. ಬ್ರಾಹ್ಮಣರು 22,000, ಪರಿಶಿಷ್ಟ ಜಾತಿಯವರು 22-25 ಸಾವಿರ, ಮುಸ್ಲಿಮರು 20,000, ಜೈನರು, ಮಾರ್ವಾಡಿಗಳು 20,000, ಕುರುಬರು 12,000, ಲಿಂಗಾ ಯತರು 8,000, ನಾಯಕರು 5,000 ಹಾಗೂ ಇತರ ಸಮುದಾ ಯಗಳು 60,000 ಇದ್ದಾರೆ. ಇಲ್ಲಿ ಒಕ್ಕಲಿಗ ಮತಗಳು ಹಂಚಿಕೆಯಾಗಿ ಉಳಿದ ಸಮುದಾಯದ ಮತಗಳು ನಿರ್ಣಾಯಕವಾಗಲಿವೆ.

English summary
Karnataka Assembly Election 2018: Read all about Mysore district Chamaraja assembly constituency of Mysuru. Get election news from Chamaraja, Mysuru district. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X